ಯಮಹಾ ಎಸ್‌ಝಡ್-ಆರ್‌ಆರ್ ವರ್ಷನ್ 2.0 ಬಿಡುಗಡೆ
ದೇಶಕ್ಕೆ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಸದಾ ಬದ್ಧತೆಯನ್ನು ಪ್ರದರ್ಶಿಸಿರುವ ಜಪಾನ್ ಮೂಲದ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಆಗಿರುವ ಯಮಹಾ, ನೂತನ 'ಬ್ಲೂ ಕೋರ್' ತಂತ್ರಜ್ಞಾನ ಹೊಂದಿರುವ ಎಸ್‌ಝಡ್-ಆರ್‌ಆರ್ ವರ್ಷನ್ 2.0 ಬಿಡುಗಡೆಗೊಳಿಸಿದೆ.
ಯಮಹಾ ಎರಡನೇ ತಲೆಮಾರಿನ ಈ ಬೈಕ್ ಹೆಚ್ಚು ಇಂಧನ ಕ್ಷಮತೆಯ ಜೊತೆ ಜೊತೆಗೆ ಗರಿಷ್ಠ ನಿರ್ವಹಣೆ ಹಾಗೂ ಚಾಲನಾ ಅನುಭವ ನೀಡಲಿದೆ. ಇದರ ಮೊದಲ ಮಾದರಿ 2013ರಲ್ಲಿ ಬಿಡುಗಡೆಯಾಗಿತ್ತು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಯಮಹಾ ಮೋಟಾರು ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಇಂಡಿಯಾ ಉಪಾಧ್ಯಕ್ಷರಾಗಿರುವ ರಾಯ್ ಕುರಿಯನ್, " ಈ ಹಬ್ಬದ ಸಂದರ್ಭದಲ್ಲಿ ಯಮಹಾ ಎಸ್‌ಝಡ್-ಆರ್‌ಆರ್ ವರ್ಷನ್ 2.0 ಬಿಡುಗಡೆ ಮಾಡಲು ಬಹಳ ಖುಷಿಯಾಗುತ್ತಿದೆ" ಎಂದಿದ್ದಾರೆ.
ಮಾತು ಮುಂದುವರಿಸಿದ ಅವರು "ನಗರದಲ್ಲಿ ತಮಾಷೆಯ ಚಾಲನೆಗಾಗಿ ಗ್ರಾಹಕರಿಗೆ ಮುಂದುವರಿದ ತಂತ್ರಜ್ಞಾನ ಪ್ರಸ್ತುತ ಪಡಿಸುವುದು ನಮ್ಮ ಬಯಕೆಯಾಗಿತ್ತು" ಎಂದಿದ್ದಾರೆ.

ಯಮಹಾ ಇತ್ತೀಚೆಗಷ್ಟೇ ಏರ್ಪಡಿಸಿದ್ದ 'ಮಿಷನ್ 10,000 ಕೀ.ಮೀ.' ಅಭಿಯಾನಕ್ಕೆ ದೇಶದ್ಯಾಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಯಮಹಾ ಎಸ್‌ಝಡ್-ಆರ್‌ಆರ್ ವರ್ಷನ್ 2.0 ದೆಹಲಿ ಎಕ್ಸ್ ಶೋ ರೂಂ ಬೆಲೆ 65,300 ರು.ಗಳಾಗಿದೆ. ಇದು 149 ಸಿಸಿ ಎಸ್‌ಒಎಚ್‌ಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, 12.8 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಹಾಗೆಯೇ ಕಾರ್ಬ್ಯುರೇಟರ್ ಮೂಲಕ ಇಂಧನ ವಿತರಣೆಯಾಗಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಅಂದ ಹಾಗೆ 24ರಿಂದ 35 ವರ್ಷಗಳ ನಡುವಣ ಯುವ ಜನಾಂಗವನ್ನು ಗುರಿಯಾಗಿರಿಸಿಕೊಂಡು ಯಮಹಾ ಸಂಸ್ಥೆಯು ಹೊಸತಾದ ಎಸ್‌ಝಡ್-ಆರ್‌ಆರ್ 2.0 ವರ್ಷನ್ ಬಿಡುಗಡೆಗೊಳಿಸಿದೆ. ಮೈಲೇಜ್ ಜಾಗೃತ ಗ್ರಾಹಕರ ಮನ ಗೆಲ್ಲುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ.


Click it and Unblock the Notifications