2015ರಲ್ಲಿ ಯಮಹಾ ಆರ್25 ಎಬಿಎಸ್ ಎಂಟ್ರಿ
ವಾಹನಗಳ ಸುರಕ್ಷತೆಯ ದೃಷ್ಟಿಕೋನದಲ್ಲಿ ಎಬಿಎಸ್ ಬ್ರೇಕಿಂಗ್ ವ್ಯವಸ್ಥೆಯು ಅತ್ಯಂತ ಮಹತ್ವವೆನಿಸುತ್ತದೆ. ದುಬಾರಿ ಬೈಕ್‌ಗಳಲ್ಲಿ ಇದನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ.
ಬಲ್ಲ ಮೂಲಗಳ ಪ್ರಕಾರ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, 2015ನೇ ಸಾಲಿನಲ್ಲಿ ತನ್ನ ಜನಪ್ರಿಯ ಆರ್25 ಮಾದರಿಯಲ್ಲಿ ಎಬಿಎಸ್ ಆಳವಡಿಸಲಿದೆ.

ಹೆಚ್ಚಿನ ರಾಷ್ಟ್ರಗಳು ಎಬಿಎಸ್ ಕಡ್ಡಾಯವಾಗಿ ಬಳಕೆ ಮಾಡುವಂತೆ ಆದೇಶ ಹೊರಡಿಸುತ್ತಿರುವ ಹಿನ್ನೆಲೆಯಲ್ಲಿ ಯಮಹಾ ನಡೆಯು ನಿರೀಕ್ಷಿತವೆನಿಸಿದೆ.
ಅಂದ ಹಾಗೆ ನಿಕಟ ಭವಿಷ್ಯದಲ್ಲೇ ಯಮಹಾ ಆರ್25 ಭಾರತ ಮಾರುಕಟ್ಟೆಯನ್ನು ತಲುಪಲಿದೆ. ಇದು ಮಾರುಕಟ್ಟೆಯಲ್ಲಿ ಹೋಂಡಾ ಸಿಬಿಆರ್ 300ಆರ್, ಕೆಟಿಎಂ ಆರ್‌ಸಿ390 ಮತ್ತು ಕವಾಸಕಿ ನಿಂಜಾ 300ಗಳಂತಹ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.


Click it and Unblock the Notifications