ಸಕತ್ ಸ್ಟೈಲಿಷ್ ಯಮಹಾ 125 ಸಿಸಿ ಬೈಕ್ ಅನಾವರಣ
ಸಾಮಾನ್ಯವಾಗಿ 125 ಸಿಸಿ ಬೈಕ್‌ಗಳು ಪ್ರಯಾಣಿಕ ದ್ವಿಚಕ್ರ ವಾಹನಗಳೆಂದೇ ಗುರುತಿಸಲ್ಪಡುತ್ತದೆ. ಹಾಗಿರುವಾಗ ಇಂತಹ ಆವೃತ್ತಿಗಳಲ್ಲಿ ಹೆಚ್ಚಿನ ಕ್ರೀಡಾ ವಿನ್ಯಾಸವನ್ನು ನಾವು ನಿರೀಕ್ಷಿಸುವಂತಿಲ್ಲ.
ಆದರೆ ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ಯೋಚಿಸಿರುವ ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ, ಲಂಡನ್‌ನಲ್ಲಿ ನಡೆಯುತ್ತಿರುವ ಎಂಸಿಎನ್ ಲಂಡನ್ ಮೋಟಾರ್ ಸೈಕಲ್ ಶೋದಲ್ಲಿ ನೂತನ ಯಮಹಾ ಆರ್125 2014 ಎಡಿಷನ್ ಅನಾವರಣಗೊಳಿಸಿದ್ದು, ಸಕತ್ ಸ್ಟೈಲಿಷ್ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಯಮಹಾ ಆರ್6 ಬೈಕ್‌ನಿಂದ ಸ್ಪೂರ್ತಿ ಪಡೆದು ಇದರ ವಿನ್ಯಾಸ ರಚಿಸಲಾಗಿದೆ. ಇದು 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ 124.7 ಸಿಸಿ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, 15 ಪಿಎಸ್ ಪವರ್ (12.4 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಯಮಹಾ ವೈಝಡ್‌ಎಫ್-ಆರ್125 ಬೈಕ್ 6 ಸ್ಪೀಡ್ ಕಾಸ್ಟಂಟ್ ಸ್ಪೀಡ್ ಗೇರ್ ಬಾಕ್ಸ್ ಹಾಗೂ ಹೊಸತಾದ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಿರಲಿದೆ. ಇದು ಶೇಕಡಾ 11ರಷ್ಟು ಹೆಚ್ಚು ಇಂಧನ ಕ್ಷಮತೆ ನೀಡಲು ನೆರವಾಗಲಿದೆ.
ಅಂದ ಹಾಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಯಮಹಾ ನೂತನ ಬೈಕ್ ಸೂಪರ್ ಸ್ಪೋರ್ಟ್ 125 ಆವೃತ್ತಿಗೆ ಬದಲಿ ವ್ಯವಸ್ಥೆಯಾಗಿರಲಿದೆ. ಇದು ಹೋಂಡಾದ ಸಿಬಿಆರ್125ಆರ್, ಕೆಟಿಎಂ ಡ್ಯೂಕ್ 125 ಮತ್ತು ಏಪ್ರಿಲಿಯಾ ಆರ್‌ಎಸ್‌ವಿ4 125 ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.


Click it and Unblock the Notifications








