ಹೊಸ ಸ್ವರೂಪದಲ್ಲಿ ಹೋಂಡಾ ಸಿಬಿಆರ್250ಆರ್ ಪ್ರತ್ಯಕ್ಷ
ಹೋಂಡಾ ರೇವ್‌ಫೆಸ್ಟ್ ಹಲವಾರು ಕಾರಣಗಳಿಂದಾಗಿ ಸ್ಮರಣೀಯವೆನಿಸಿತ್ತು. ಒಂದೇ ಸಮಯದಲ್ಲಿ ಐದು ಹೊಸ ಮಾದರಿಗಳು ಪ್ರತ್ಯಕ್ಷಗೊಂಡಿದ್ದವು. ಅವುಗಳೆಂದರೆ,
- ಸಿಬಿಆರ್250ಆರ್
- ಸಿಬಿಆರ್150ಆರ್
- ಸಿಬಿಆರ್650ಎಫ್
- ಸಿಬಿ ಹಾರ್ನೆಟ್ 160ಆರ್
- ಲಿವೊ 110 ಸಿಸಿ ಬೈಕ್
ಈ ಪೈಕಿ ಸಿಬಿಆರ್150ಆರ್ ಮತ್ತು ಸಿಬಿಆರ್250ಆರ್ ಮಾದರಿಗಳು ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿತ್ತು. ಉಳಿದಂತೆ ಸಿಬಿಆರ್650ಎಫ್ ಮತ್ತು ಸಿಬಿ ಹಾರ್ನೆಟ್ 160ಆರ್ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದರೆ ಈಗಾಗಲೇ ಬಿಡುಗಡೆಯಾಗಿರುವ ಲಿವೊ 110ಸಿಸಿ ಬೈಕ್ ಸಹ ಪ್ರದರ್ಶನ ಕಂಡಿತ್ತು.

ಎಂಜಿನ್
249.ಸಿಸಿ ಎಂಜಿನ್

ನಿರ್ವಹಣೆ
27.8 ಅಶ್ವಶಕ್ತಿ,
23 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್
ಆರ್ ಸ್ಪೀಡ್

ವೆರಿಯಂಟ್
ಎಬಿಎಸ್ ಮತ್ತು
ಎಬಿಎಸ್ ರಹಿತ ವೆರಿಯಂಟ್

ಇವೆಲ್ಲವೂ ಪ್ರಸಕ್ತ ಸಾಲಿನಲ್ಲಿ ಹೋಂಡಾ ಸಂಸ್ಥೆಯು ದೇಶದಲ್ಲಿ ಬಿಡುಗಡೆ ಮಾಡಲಿರುವ 15 ಹೊಸ ಮಾದರಿಗಳ ಭಾಗವಾಗಿದೆ.

ನಿಮ್ಮ ಮಾಹಿತಿಗಾಗಿ ಬೆಂಗಳೂರು, ನವದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ, ಅಹಮದಾಬಾದ್ ಮತ್ತು ಇಂಧೋರ್ ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಹೋಂಡಾ ರೇವ್‌ಫೆಸ್ಟ್ ಆಯೋಜನೆಯಾಗುತ್ತಿದೆ.


Click it and Unblock the Notifications