ಚೆನ್ನೈ ನೆರೆ ಸಂತ್ರಸ್ತರಿಗೆ ಬಜಾಜ್ 10 ಕೋಟಿ ರು. ನೆರವು
ಇತ್ತೀಚೆಗಷ್ಟೇ ಸುರಿದ ಭಾರಿ ಮಳೆಯಿಂದಾಗಿ ಚೆನ್ನೈ ನಗರದ್ಯಾಂತ ಪ್ರವಾಹದ ಸ್ಥಿತಿಯುಂಟಾಗಿತ್ತು. ಇದರ ಪರಿಣಾಮ ಕೋಟಿಗಟ್ಟಲೆ ರುಪಾಯಿಗಳ ನಷ್ಟ ಸಂಭವಿಸಿದೆ. ಈಗ ಪುನವರ್ಸತಿ ಕಾರ್ಯಕ್ಕೆ ಚುರುಕು ಮುಟ್ಟಿಸಿರುವ ಬಜಾಜ್ ಆಟೋ ಮತ್ತು ಬಜಾಜ್ ಫಿನಾನ್ಸ್ 10 ಕೋಟಿ ರು.ಗಳ ಧನ ಸಹಾಯ ನೀಡಿದೆ.
ಪ್ರಧಾನ ಮಂತ್ರಿಯವರ ಪರಿಹಾರ ನಿಧಿಗೆ ಬಜಾಜ್ ಧನ ಸಹಾಯವನ್ನು ನೀಡಿದೆ. ಬಜಾಜ್ ಆಟೋ ಹಾಗೂ ಬಜಾಜ್ ಫಿನಾನ್ಸ್ ತಲಾ ಐದು ಕೋಟಿ ರು.ಗಳ ಧನ ಸಹಾಯ ನೀಡಿದೆ.

ತಮಿಳುನಾಡಿನಲ್ಲಿ ಸಂಭವಿಸಿರುವ ನೆರೆಯಿಂದಾಗಿ ಹಲವಾರು ಮಂದಿ ಸಾವನ್ನಪ್ಪಿದ್ದರೆ ಭಾರಿ ಸಂಖ್ಯೆಯ ನಷ್ಟವುಂಟಾಗಿತ್ತು. ಈಗ ಮೂಲ ಸೌಕರ್ಯ ಪುನ ಸ್ಥಾಪಿಸುವ ಕಾರ್ಯದಲ್ಲಿ ತಮಿಳುನಾಡು ಹಾಗೂ ಕೇಂದ್ರ ಸರಕಾರಗಳು ಮಗ್ನವಾಗಿದೆ.
ಇದಕ್ಕೂ ಮೊದಲು ಹ್ಯುಂಡೈ ಎರಡು ಕೋಟಿ ಹಾಗೂ ರೆನೊ-ನಿಸ್ಸಾನ್ ಒಂದು ಕೋಟಿ ರು.ಗಳ ಧನ ಸಹಾಯವನ್ನು ನೀಡಿತ್ತು.


Click it and Unblock the Notifications








