ಇನ್ನು ಮುಂದೆ ಫ್ಲಿಪ್‌ಕಾರ್ಟ್‌ನಲ್ಲಿ ಬಜಾಜ್, ಕೆಟಿಎಂ, ಕವಾಸಕಿ ಬೈಕ್ ಖರೀದಿಸಿ!

By Nagaraja

ಬೆಂಗಳೂರು ತಳಹದಿಯ ಇ-ಕಾಮರ್ಸ್ ದೈತ್ಯ ಸಂಸ್ಥೆ ಫ್ಲಿ‌ಪ್‌ಕಾರ್ಟ್ ಉದ್ಯಾನ ನಗರಿಯ ಗ್ರಾಹಕರಿಗೆ ವಿನೂತನ ಸೇವೆಯೊಂದನ್ನು ಆರಂಭಿಸಿದ್ದು, ಫ್ಲಿ‌ಪ್‌ಕಾರ್ಟ್ ಮುಖಾಂತರ ನಿಮ್ಮ ನೆಚ್ಚಿನ ಬಜಾಜ್, ಕೆಟಿಎಂ ಹಾಗೂ ಕವಾಸಕಿ ಬೈಕ್ ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

ಪ್ರಸ್ತುತ ಸೇವೆಯು ಸದ್ಯಕ್ಕೆ ಬೆಂಗಳೂರಿನ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಈ ಯೋಜನೆಯನ್ನು ದೇಶದ ಇತರ ಮಹಾ ನಗರಗಳಿಗೂ ವಿಸ್ತರಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಈ ಎಲ್ಲದರ ಮುಖಾಂತರ ಗ್ರಾಹಕರು ಗರಿಷ್ಠ ಆಫರ್ ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಇನ್ನು ಮುಂದೆ ಫ್ಲಿಪ್‌ಕಾರ್ಟ್‌ನಲ್ಲಿ ಬಜಾಜ್, ಕೆಟಿಎಂ, ಕವಾಸಕಿ ಬೈಕ್ ಖರೀದಿಸಿ!

ಬಜಾಜ್ ಸಿಟಿ100ನಿಂದ ಆರಂಭವಾಗಿ ಅತಿ ದುಬಾರಿ ಕವಾಸಕಿ ಎಚ್2 ವರೆಗಿನ ಬೈಕ್ ಗಳನ್ನು ಗ್ರಾಹಕರನ್ನು ಫ್ಲಿಪ್‌ಕಾರ್ಟ್ ಮುಖಾಂತರ ಬುಕ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಮುಂದೆ ಫ್ಲಿಪ್‌ಕಾರ್ಟ್‌ನಲ್ಲಿ ಬಜಾಜ್, ಕೆಟಿಎಂ, ಕವಾಸಕಿ ಬೈಕ್ ಖರೀದಿಸಿ!

ಇದಕ್ಕಾಗಿ ಗ್ರಾಹಕರು ಆರಂಭಿಕ ಬುಕ್ಕಿಂಗ್ ಮೊತ್ತ 3,000 ರುಪಾಯಿಗಳನ್ನು ಆನ್ ಲೈನ್ ಮುಖಾಂತರವೇ ಪಾವತಿಸಬೇಕಾಗಿದೆ. ತದಾ ಬಳಿಕ ಫ್ಲಿ‌ಪ್‌ಕಾರ್ಟ್ ಇದನ್ನು ಸಂಬಂಧಿತ ಡೀಲರುಗಳಿಗೆ ಸಂಪರ್ಕ ಕಲ್ಪಿಸಿಕೊಡಲಿದೆ.

ಇನ್ನು ಮುಂದೆ ಫ್ಲಿಪ್‌ಕಾರ್ಟ್‌ನಲ್ಲಿ ಬಜಾಜ್, ಕೆಟಿಎಂ, ಕವಾಸಕಿ ಬೈಕ್ ಖರೀದಿಸಿ!

ಗ್ರಾಹಕರು ಬುಕ್ ಮಾಡಿರುವ ಮಾದರಿಯ ಆಧಾರದಲ್ಲಿ ಬಜಾಜ್, ಕೆಟಿಎಂ ಅಥವಾ ಕವಾಸಕಿ ಡೀಲರುಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ. ಅಲ್ಲದೆ ಗಾಡಿಯನ್ನು ಟೆಸ್ಟ್ ಡ್ರೈವ್ ಮಾಡುವ ಅವಕಾಶವೂ ಇರುತ್ತದೆ.

ಇನ್ನು ಮುಂದೆ ಫ್ಲಿಪ್‌ಕಾರ್ಟ್‌ನಲ್ಲಿ ಬಜಾಜ್, ಕೆಟಿಎಂ, ಕವಾಸಕಿ ಬೈಕ್ ಖರೀದಿಸಿ!

ಬಾಕಿ ಉಳಿದ ಮೊತ್ತ ಪಾವತಿ ಹಾಗೂ ಪ್ರಮಾಣ ಪತ್ರಗಳ ವಿತರಣೆ ಡೀಲರುಗಳು ಹಾಗೂ ಖರೀದಿಗಾರರ ಮಧ್ಯೆ ನಡೆಯಲಿದೆ. ಇಲ್ಲಿ ಎಕ್ಸ್ ಶೋ ರೂಂ ಬೆಲೆಯನ್ನು ಕೊಡಲಾಗಿದೆ.

ಇನ್ನು ಮುಂದೆ ಫ್ಲಿಪ್‌ಕಾರ್ಟ್‌ನಲ್ಲಿ ಬಜಾಜ್, ಕೆಟಿಎಂ, ಕವಾಸಕಿ ಬೈಕ್ ಖರೀದಿಸಿ!

ಫ್ಲಿಫ್‌ಕಾರ್ಟ್ ಮುಖಾಂತರ ಬುಕ್ ಮಾಡುವ ಗ್ರಾಹಕರು 5,000 ರು.ಗಳ ವರೆಗಿನ ಇ-ಗಿಫ್ಟ್ ವೋಚರ್ ಗೆಲ್ಲುವ ಅವಕಾಶವಿರುತ್ತದೆ. ಅಲ್ಲದೆ ಎರಡು ವರ್ಷ ಅಥವಾ 30,000 ಕೀ.ಮೀ. ವರೆಗಿನ ವಾರಂಟಿ ಸೌಲಭ್ಯವೂ ಸಿಗುತ್ತದೆ.

ಇನ್ನು ಮುಂದೆ ಫ್ಲಿಪ್‌ಕಾರ್ಟ್‌ನಲ್ಲಿ ಬಜಾಜ್, ಕೆಟಿಎಂ, ಕವಾಸಕಿ ಬೈಕ್ ಖರೀದಿಸಿ!

ಫ್ಲಿಫ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ಬಜಾಜ್, ಕೆಟಿಎಂ ಹಾಗೂ ಕವಾಸಕಿ ಬೈಕ್‌ಗಳು: ಬಜಾಜ್ ಅವೆಂಜರ್ 150 ಸ್ಟ್ರೀಟ್, ಅವೆಂಜರ್ 220 ಕ್ರೂಸ್, ಅವೆಂಜರ್ 220 ಸ್ಟ್ರೀಟ್, ಸಿಟಿ100, ಡಿಸ್ಕವರ್ 125, ಬಜಾಜ್ ಡಿಸ್ಕವರ್ 150 ಎಫ್, ಕೆಟಿಎಂ ಡ್ಯೂಕ್ 200, ಕೆಟಿಎಂ ಆರ್‌ಸಿ390, ಕವಾಸಕಿ ಇಆರ್-6ಎನ್, ಕವಾಸಕಿ ಎಚ್2, ಕವಾಸಕಿ ನಿಂಜಾ 1000, ಕವಾಸಕಿ ಝಡ್800, ನಿಂಜಾ 300, ನಿಂಜಾ 650 ಆರ್, ನಿಂಜಾ ಝಡ್‌ಎಕ್ಸ್-10ಆರ್, ನಿಂಜಾ ಝಡ್‌ಎಕ್ಸ್-14ಆರ್, ಬಜಾಜ್ ಪ್ಲಾಟಿನಾ, ಪ್ಲಾಟಿನಾ 100ಇಎಸ್, ಪಲ್ಸರ್ 135, ಪಲ್ಸರ್ 150, ಪಲ್ಸರ್ 180, ಬಜಾಜ್ ಪಲ್ಸರ್ 220ಎಫ್, ಪಲ್ಸರ್ ಎಎಸ್ 150, ಪಲ್ಸಲ್ ಎಎಸ್ 200, ಬಜಾಜ್ ಪಲ್ಸರ್ ಆರ್‌ಎಸ್200 ಜೊತೆ ಎಬಿಎಸ್, ಝಡ್ 250, ಝಡ್ 1000, ಝಡ್800.

ವಿ.ಸೂ: ಹೆಚ್ಚಿನ ಮಾಹಿತಿಗಾಗಿ ಫ್ಲಿಪ್‌ಕಾರ್ಟ್ ನಿಯಮಗಳನ್ನು ಓದಲು ಮರೆಯದಿರಿ.

More from DriveSpark

Article Published On: Monday, December 28, 2015, 11:50 [IST]
English summary
Bajaj, KTM & Kawasaki Available On Flipkart Only In Bangalore
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+