ಬೆನೆಲ್ಲಿ ಟಿಎನ್‌ಟಿ25 ಅಗ್ಗದ ಬೈಕ್ ಭರ್ಜರಿ ಬಿಡುಗಡೆ
ನಾವೀಗಲೇ ವರದಿ ಮಾಡಿರುವಂತೆಯೇ ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 25 ಬೈಕ್ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಇದು ಇಟಲಿಯ ಐಕಾನಿಕ್ ಸಂಸ್ಥೆಯು ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಆರನೇ ಉತ್ಪನ್ನವಾಗಿದೆ.
ಪ್ರಾರಂಭಿಕ ಬೆಲೆ: 1.68 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
ಟಿಎನ್‌ಟಿ25 ದೇಶದಲ್ಲಿ ಬೆನೆಲ್ಲಿ ಬಿಡುಗಡೆ ಮಾಡಿರುವ ಅತ್ಯಂತ ಕಡಿಮೆ ಬೆಲೆಯ ಬೈಕಾಗಿದ್ದು, ಯುವ ಗ್ರಾಹಕರಿಗೆ ಹೆಚ್ಚು ಪ್ರಿಯವೆನಿಸಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಬೆನೆಲ್ಲಿ ಟಿಎನ್‌ಟಿ25 ಬೇಸ್: 1.68 ಲಕ್ಷ ರು.
- ಬೆನೆಲ್ಲಿ ಟಿಎನ್‌ಟಿ25 ಪ್ರೀಮಿಯಂ: 1.75 ಲಕ್ಷ ರು.

ಬೆನೆಲ್ಲಿ ಟಿಎನ್‌ಟಿ25 ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 21.61 ಎನ್‌ಎಂ ತಿರುಗುಬಲದಲ್ಲಿ 28.15 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಟಿಎನ್‌ಟಿ300 ವಿನ್ಯಾಸಕ್ಕೆ ಸಾಮತ್ಯೆಯನ್ನು ಪಡೆದುಕೊಂಡಿರುವ ಬೆನೆಲ್ಲಿ ಟಿಎನ್‌ಟಿ25 ಅಂದಾಜು ಪ್ರತಿ ಲೀಟರ್ ಗೆ 30 ರಿಂದ 35 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

159 ಕೆ.ಜಿ ಭಾರವನ್ನು ಹೊಂದಿರುವ ಟಿಎನ್‌ಟಿ25 ಬೈಕ್ 17 ಲೀಟರ್ ಗಳ ಇಂಧನ ಟ್ಯಾಂಕ್ ಪಡೆದುಕೊಂಡಿರುತ್ತದೆ.

ಅಪ್ ಸೈಡ್ ಡೌನ್ (ಯುಎಸ್‌ಡಿ) ಫ್ರಂಟ್ ಫಾರ್ಕ್, ಹಿಂದುಗಡೆ ಮೊನೊಶಾಕ್ ಸಸ್ಪೆನ್ಷನ್, ಅಲಾಯ್ ವೀಲ್ ಹಾಗೂ ಮುಂದುಗಡೆ ಹಾಗೂ ಹಿಂದುಗಡೆ ಡಿಸ್ಕ್ ಬ್ರೇಕ್ ಕಂಡುಬರಲಿದೆ.

ಇದಕ್ಕೂ ಮೊದಲು 2015 ಇಂಡಿಯಾ ಬೈಕ್ ವೀಕ್ ನಲ್ಲಿ ಪ್ರದರ್ಶನಗೊಂಡಿರುವ ಬೆನೆಲ್ಲಿ ಟಿಎನ್‌ಟಿ25 ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಇದರ ಪ್ರೀಮಿಯಂ ವೆರಿಯಂಟ್ 1.75 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ (ಎಕ್ಸ್ ಶೋ ರೂಂ ದೆಹಲಿ).

ಬೆನೆಲ್ಲಿ ಟಿಎನ್‌ಟಿ25 ಬೇಸ್ ಹಾಗೂ ಪ್ರೀಮಿಯಂ ವೆರಿಯಂಟ್ ನ ಪ್ರಮುಖ ವ್ಯತ್ಯಾಸ ಏನೆಂದರೆ ಚಕ್ರಗಳಾಗಿವೆ. ಬೇಸ್ ವೆರಿಯಂಟ್ ಎಂಆರ್‌ಎಫ್ ಚಕ್ರಗಳನ್ನು ಹೊಂದಿದ್ದಲ್ಲಿ ಪ್ರೀಮಿಯಂ ವೆರಿಯಂಟ್ ಇಟಲಿಯ ಮೆಟ್ಜೆಲ್ಲರ್ ಟೈರ್ ಗಳನ್ನು ಪಡೆಯಲಿದೆ.

ಆಯಾಮ
ಉದ್ದ 2080 ಎಂಎಂ,
ಅಗಲ 805 ಎಂಎಂ,
ಎತ್ತರ 1090 ಎಂಎಂ,
ಚಕ್ರಾಂತರ 1385 ಎಂಎಂ

ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೂತನ ಬೆನೆಲ್ಲಿ ಟಿಎನ್‌ಟಿ25 ಬೈಕ್‌ನ ಪ್ರಮುಖ ಆಕರ್ಷಣೆಯಾಗಲಿದೆ.

ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ದೇಶ ತಲುಪಲಿರುವ ಟಿಎನ್‌ಟಿ25 ಮಹಾರಾಷ್ಟ್ರದ ಘಟಕದಲ್ಲಿ ಜೋಡಣೆಯಾಗಲಿದೆ.


Click it and Unblock the Notifications








