Auto Expo 2023: ಬೆನೆಲ್ಲಿ 752S ಸ್ಪೋರ್ಟ್ ನೇಕೆಡ್ ಬೈಕ್ ಅನಾವರಣ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಬೆನೆಲ್ಲಿ 752S ಬೈಕ್ ಅನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಈ ಹೊಸ ಬೆನೆಲ್ಲಿ 752S ಬೈಕ್ ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿರುವ ಸ್ಪೋರ್ಟ್ ನೇಕೆಡ್ ಮೋಟಾರ್‌ಸೈಕಲ್ ಆಗಿದ್ದು, ಇದೇ ಎಂಜಿನ್ ಅನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ ಬೆನೆಲ್ಲಿಯ ಲಿಯೊನ್ಸಿನೊ 800 ಬೈಕಿನಲ್ಲಿ ನೀಡಲಾಗಿದೆ.

ಹೊಸ ಬೆನೆಲ್ಲಿ 752S ಬೈಕ್ ಆಧುನಿಕ ಆಕರ್ಷಕ ವಿನ್ಯಾಸವನ್ನು ಹೊಂದಿದೆ ಮತ್ತು ಕೆಲವು ಹೈ-ಸ್ಪೆಕ್ ಸಸ್ಪೆನ್ಷನ್ ಮತ್ತು ಟೈರ್ ಭಾಗಗಳನ್ನು ಹೊಂದಿದೆ, ಇದು ಬೆನೆಲ್ಲಿ ಹೇಳಿಕೊಂಡಿದೆ. ಇವುಗಳು ಸವಾರರು ಆರಾಮದಾಯಕವಾದ ಸವಾರಿಯನ್ನು ಖಚಿತಪಡಿಸುತದೆ.ಈ ಹೊಸ ಬೆನೆಲ್ಲಿ 752S ಬೈಕಿನಲ್ಲಿ 754 cc ವಾಟರ್-ಕೂಲ್ಡ್, ಪ್ಯಾರಲಲ್-ಟ್ವಿನ್ DOHC ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 rpm ನಲ್ಲಿ 75 bhp ಪವರ್ ಮತ್ತು 6,500 rpm ನಲ್ಲಿ 67 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

Auto Expo 2023: ಬೆನೆಲ್ಲಿ 752S ಸ್ಪೋರ್ಟ್ ನೇಕೆಡ್ ಬೈಕ್ ಅನಾವರಣ

ಈ ಹೊಸ ಬೆನೆಲ್ಲಿ 752S ಬೈಕ್ 2,130 mm ಉದ್ದ, 810 mm ಅಗಲ ಮತ್ತು 1,100 mm ಎತ್ತರವನ್ನು ಹೊಂದಿದೆ. ಇನ್ನು ಈ ಬೈಕ್ 1,460 mm ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಬೆನೆಲ್ಲಿ 752S ಬೈಕ್ 226 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 14.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಪೋರ್ಟ್ ನೇಕೆಡ್ 752S ಬೈಕ್ 810 mm ಸೀಟ್ ಎತ್ತರವನ್ನು ಹೊಂದಿದೆ.

ಹೊಸ ಬೆನೆಲ್ಲಿ 752S ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟ್ರೆಸ್ಟಲ್ ಸ್ಟೀಲ್ ಟ್ಯೂಬ್ ಫ್ರೇಮ್ ಜೊತೆಗೆ 50 mm ಇನ್ವರ್ಟಡ್ ಮಾರ್ಜೋಕಿ ಫೋರ್ಕ್‌ಗಳನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ KYB ಮೊನೊಶಾಕ್ ಜೊತೆಗೆ ಹೊಂದಾಣಿಕೆ ಮಾಡಬಹುದಾದ ಪ್ರಿಲೋಡ್ ಜೊತೆಗೆ ಸ್ವಿಂಗರ್ಮ್ ಅನ್ನು ಹೊಂದಿದೆ. ಈ ಬೈಕ್ ಉತ್ತಮ ಸಸ್ಪೆಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

Auto Expo 2023: ಬೆನೆಲ್ಲಿ 752S ಸ್ಪೋರ್ಟ್ ನೇಕೆಡ್ ಬೈಕ್ ಅನಾವರಣ

ಇನ್ನು ಪ್ರಮುಖವಾಗಿ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬೆನೆಲ್ಲಿ 752S ಸ್ಪೋರ್ಟ್ಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 4 ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ 320 ಎಂಎಂ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಂಭಾಗದಲ್ಲಿ ಒಂದೇ 260 ಎಂಎಂ ಡಿಸ್ಕ್ ಅನ್ನು ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನಿಂದ ಒಳಗೊಂಡಿದೆ. ಇನ್ನು ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಅನ್ನು ನೀಡಲಾಗಿದೆ.

ಇನ್ನು ಬೆನೆಲ್ಲಿ 752S ಬೈಕಿನಲ್ಲಿ 120/70 (ಮುಂಭಾಗ) ಮತ್ತು 180/55 (ಹಿಂಭಾಗ) ಟೈರ್‌ಗಳಲ್ಲಿ 17-ಇಂಚಿನ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಬೆನೆಲ್ಲಿ 752S ಬೈಕ್ ವಿನ್ಯಾಸವು ಅದರ ಒಡ್ಡಿದ ಫ್ರೇಮ್‌ನೊಂದಿಗೆ ನೋಡಲು ಮತ್ತು ನೇಕೆಡ್ ಬೈಕ್‌ಗೆ ಸಾಕಷ್ಟು ಆಕರ್ಷಕವಾಗಿಸುತ್ತದೆ ಮತ್ತು ಸಂಪೂರ್ಣ ಎಲ್‌ಇಡಿ ಲ್ಯಾಂಪ್ ಗಳು ಹೆಡ್‌ಲೈಟ್‌ನೊಂದಿಗೆ ವಿಭಜಿತ ಯುನಿಟ್ ಆಗಿದ್ದು, ವಿಶಿಷ್ಟವಾದ ಟ್ವಿನ್-ಪಾಡ್ ಸೆಟಪ್‌ನೊಂದಿಗೆ ಇದು ಉಳಿದವುಗಳಿಂದ ಎದ್ದು ಕಾಣುವಂತೆ ಮಾಡುತ್ತದೆ.

Auto Expo 2023: ಬೆನೆಲ್ಲಿ 752S ಸ್ಪೋರ್ಟ್ ನೇಕೆಡ್ ಬೈಕ್ ಅನಾವರಣ

ಇನ್ನು ಬೆನೆಲ್ಲಿ 752S ಬೈಕ್ ಮತ್ತೊಂದು ಪ್ರಮುಖ ಅಂಶವೆಂದರೆ ಚಿಕ್ಕದಾದ, ಅಪ್‌ಸ್ವೆಪ್ಟ್ ಮೆಗಾಫೋನ್ ಎಕ್ಸಾಸ್ಟ್, ಇದು ಬೈಕು ತನ್ನ ಟ್ವಿನ್-ಸಿಲಿಂಡರ್ ಆಗಿರುವುದರಿಂದ ಹೆಚ್ಚಿನ ಸೌಂಡ್ ಮಾಡುತ್ತದೆ. ಬೆನೆಲ್ಲಿ 752S ಬೈಕಿನ ಎಲ್ಲಾ ಎಲ್ಲಾ ಸಲಕರಣೆಗಳ ಅವಶ್ಯಕತೆಗಳಿಗಾಗಿ ಫುಲ್ ಕಲರ್ TFT ಡಿಸ್ ಪ್ಲೇಯನ್ನು ಸಹ ನೀಡಲಾಗಿದೆ. 023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಬೆನೆಲ್ಲಿ 752S ಇಟಾಲಿಯನ್ ಬ್ರಾಂಡ್‌ನ ಮತ್ತೊಂದು ನೇಕೆಡ್ ಮಿಡಲ್‌ವೇಟ್ ಬೈಕ್ ಆಗಿದೆ.

ಈ ಬೆನೆಲ್ಲಿ 752S ನೇಕೆಡ್ ಮಿಡಲ್‌ವೇಟ್ ಬೈಕ್ ಮುಂದಿನ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.ಮ್ಆಟೋ ಎಕ್ಸ್‌ಪೋದಲ್ಲಿ ಇಟಲಿ ಮೂಲದ ಬೆನೆಲ್ಲಿ ಲಿಯೊನ್ಸಿನೊ 800 ಬೈಕ್ ಅನ್ನು ಕೂಡ ಪ್ರದರ್ಶಿಸಿದೆ. ಇದು ನೋಡಲು ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಲಿಯೊನ್ಸಿನೊ 500 ರೀತಿ ಕಾಣುತ್ತದೆ. ಇದು ಆಕರ್ಷಕವಾಗಿದ್ದು, ಇದರ ಎಂಜಿನ್ ಕಾರ್ಯಕ್ಷಮತೆ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ. ಈ ಬೈಕ್ ಕೂಡ ಬೆನೆಲ್ಲಿ 752S ಬೈಕಿನಲ್ಲಿರುವ ಅದೇ ಎಂಜಿನ್ ಅನ್ನು ಹೊಂದಿದೆ.

Most Read Articles

Kannada
English summary
Auto expo 2023 new benelli 752s revealed specs features details in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X