Just In
- 7 hrs ago
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- 8 hrs ago
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- 8 hrs ago
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- 9 hrs ago
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Movies
'ಕ್ರಾಂತಿ' ಬೈಕ್ ಪ್ರಚಾರ ಮಾಡಿ ಇದ್ದ ಕೆಲಸ ಹೋಯ್ತು ಎಂದ ಅಭಿಮಾನಿ: ವಿಡಿಯೋ ವೈರಲ್
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತಷ್ಟು ದುಬಾರಿಯಾದ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ಇಂಡಿಯಾ ತನ್ನ ಬಿಎಸ್-6 ಲಿಯಾನ್‍ಸಿನೊ 500 ಬೈಕಿನ ಬೆಲೆಯನ್ನು ಪರಿಷ್ಕರಿಸಿದೆ. ಈ ಬೆನೆಲ್ಲಿ ಲಿಯಾನ್‍ಸಿನೊ 500 ಮಿಡಲ್ ವೇಟ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ.

ಬೆನೆಲ್ಲಿ ಲಿಯಾನ್‍ಸಿನೊ 500 ಮಿಡಲ್ ವೇಟ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಇತ್ತೀಚಿನ ಪರಿಷ್ಕರಣೆಯು ನಾಲ್ಕನೇ ಬೆಲೆ ಏರಿಕೆಯಾಗಿದೆ ಇದೀಗ ಈ ಬೈಕಿನ ಬೆಲೆಯು 5,35,000 ರೂ. ಆಗಿದೆ. ಈ ಬೈಕ್ ಸ್ಟೀಲ್ ಗ್ರೇ ಮತ್ತು ಲಿಯೊನ್ಸಿನೊ ರೆಡ್ ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದೀಗ ಬೆನೆಲ್ಲಿ ಲಿಯಾನ್‍ಸಿನೊ 500 ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಸ್ಟೀಲ್ ಗ್ರೇ ಮತ್ತು ಲಿಯೊನ್ಸಿನೊ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯವುದೇ ಬದಲಾವಣೆಗಳನ್ನು ಹೊಂದಿಲ್ಲ. ಈ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕಿನಲ್ಲಿ 499ಸಿಸಿ ಪ್ಯಾರಲಲ್ ಟ್ವಿನ್ ಲಿಕ್ವಿಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 4500 ಆರ್‌ಪಿಎಂನಲ್ಲಿ 46 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕ್ ರೆಟ್ರೊ ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಹೊಂದಿದೆ. ಈ ಮಿಡಲ್ ವೇಟ್ ಸ್ಟ್ರೀಟ್ ಸ್ಕ್ರ್ಯಾಂಬ್ಲರ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಈ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕಿನಲ್ಲಿ ಹಿಂದಿನ ಮಾದರಿಯಲ್ಲಿ ಇದ್ದ ಅದೇ ಫೀಚರ್ ಗಳನ್ನು ಮುಂದುವರೆಸಲಾಗಿದೆ. ಇನ್ನು ಈ ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಇನ್ನು ಈ ಬೈಕಿನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕ್ಲಸ್ಟರ್ ಓಡೋ ಮೀಟರ್, ಫ್ಯೂಯಲ್ ಗೇಜ್, ಸ್ಪೀಡ್ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸಲಾಗುತ್ತದೆ.

ಈ ಬೆನೆಲ್ಲಿ ಲಿಯಾನ್‍ಸಿನೊ 500 ಬೈಕಿನ ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ, ರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಲೋ ಸೆಟ್ ಹ್ಯಾಂಡಲ್‌ಬಾರ್, ಹಿಂಭಾಗದಲ್ಲಿ ಮಿನಿಮಲ್ ಪ್ಯಾನೆಲ್ ಮತ್ತು ಮುಂಭಾಗದ ಫೆಂಡರ್‌ನಲ್ಲಿ ಮೆಟಾಲಿಕ್ ಆರ್ನಾಮೆಂಟ್‍ಗಳಿವೆ. ಇದರಂದಿಗೆ ಎಲ್ಇಡಿ ಡಿಆರ್‍ಎಲ್ ಹಾಗೂ ಎಲ್ಇಡಿ ಟರ್ನ್ ಇಂಡಿಕೇಟರ್‍ಗಳನ್ನು ಹೊಂದಿದೆ.

ಸ್ಕ್ರ್ಯಾಂಬ್ಲರ್ ಶೈಲಿಯ ಲಿಯಾನ್‍ಸಿನೊ 500 ಬೈಕ್ ಟ್ಯೂಬುಲರ್ ಸ್ಟೀಲ್ ಟ್ರೆಲ್ಲಿಸ್ ಫ್ರೇಂಗಳನ್ನು ಹೊಂದಿದೆ. ಲಿಯಾನ್‍ಸಿನೊ 500 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಅಪ್‌ಸೈಡ್ ಡೌನ್ 50 ಎಂಎಂ ಯುಎಸ್‌ಡಿ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ. ಇವುಗಳು ಪ್ರಿ ಲೋಡ್ ಅಡ್ಜಸ್ಟ್ ಮೆಂಟ್ ಅನ್ನು ಹೊಂದಿವೆ.

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಗಳಿವೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಇದರೊಂದಿಗೆ ಬೆನೆಲ್ಲಿ ತನ್ನ ಟಿಆರ್‌ಕೆ 251 ಕ್ವಾರ್ಟರ್-ಲೀಟರ್ ಅಡ್ವೆಂಚರ್ ಟೂರರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಅಡ್ವೆಂಚರ್ ಬೈಕ್ ಪ್ರಸ್ತುತ ಭಾರತದಲ್ಲಿ ಬೆನೆಲ್ಲಿಯ ಅತ್ಯಂತ ಕೈಗೆಟುಕುವ ಮಾದರಿಯಾಗಿದೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಅಡ್ವೆಂಚರ್ ಟೂರರ್ ಬೈಕ್ ಸಾಕಷ್ಟು ಸ್ಟೈಲಿಂಗ್ ಅಂಶವು ಟಿಆರ್‌ಕೆ 502 ಮಾದರಿಯಿಂದ ಎರವಲು ಪಡೆದುಕೊಂಡಿದೆ.

ಈ ಕ್ವಾರ್ಟರ್-ಲೀಟರ್ ಬೈಕಿನಲ್ಲಿ ಇದು ದೊಡ್ಡ ವಿಂಡ್‌ಸ್ಕ್ರೀನ್, ಫ್ರಂಟ್ ಹೆವಿ ಕ್ವಾರ್ಟರ್ ಫೇರಿಂಗ್, ತೆರೆದ ಟ್ರೆಲ್ಲಿಸ್ ಫ್ರೇಮ್ ಮತ್ತು ಸ್ಕಲಪಟಡ್ ಫ್ಯೂಯಲ್ ಟ್ಯಾಂಕ್‌ನಂತಹ ಸಿಗ್ನೇಚರ್ ಅಡ್ವೆಂಚರ್ ಸ್ಟೈಲಿಂಗ್ ಅಂಶಗಳನ್ನು ಪಡೆಯುತ್ತದೆ. ಇನ್ನು ಬೆನೆಲ್ಲಿ ಟಿಆರ್‌ಕೆ 251 ಅಡ್ವೆಂಚರ್ ಟೂರರ್ ಬೈಕ್ ಮುಂಭಾಗ ಮತ್ತು ಬದಿಯ ಫೇರಿಂಗ್ ಮತ್ತು ಟೈಲ್ ವಿಭಾಗದಲ್ಲಿ ಸ್ಪೋರ್ಟಿ ಗ್ರಾಫಿಕ್ಸ್ ನಿಂದ ಗೋಚರಿಸುತ್ತದೆ. ಅಗಲ ಮತ್ತು ಎತ್ತರದ ಹ್ಯಾಂಡಲ್‌ಬಾರ್‌ಗಳು ಸೆಂಟರ್-ಸೆಟ್ ಫುಟ್‌ಪೆಗ್‌ಗಳನ್ನು ಹೊಂದಿದೆ. 800 ಎಂಎಂ ಪ್ರವೇಶಿಸಬಹುದಾದ ಸ್ಯಾಡಲ್ ಎತ್ತರವು ಆರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ.

ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಅರ್ಬನ್ ಕ್ರೂಸರ್ ವಿನ್ಯಾಸವು ಹೆಚ್ಚು ಜನಪ್ರಿಯವಾದ ಡುಕಾಟಿ ಡಯಾವೆಲ್ 1260 ನಿಂದ ಸ್ಫೂರ್ತಿ ಪಡೆದಿದೆ. ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ ದೊಡ್ಡ ಫ್ಯೂಯಲ್ ಟ್ಯಾಂಕ್, ಸಿಂಗಲ್ ಪೀಸ್ ಸೀಟ್, ಬಲ್-ಬ್ಯಾರೆಲ್ ಎಕ್ಸಾಸ್ಟ್ ಮತ್ತು ಲಂಬವಾಗಿ ಜೋಡಿಸಲಾದ ಸ್ಪ್ಲಿಟ್ ಟೈಲ್-ಲ್ಯಾಂಪ್‌ಗಳು ಹೊಂದಿದೆ. ಈ ಬೈಕಿನಲ್ಲಿ ಸಂಪೂರ್ಣವಾದ ಡಿಜಿಟಲ್ ಟಿಎಫ್ ಡಿಸ್ ಪ್ಲೇಯನ್ನು ಹೊಂದಿದೆ. ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನಲ್ಲಿ 500 ಸಿಸಿ ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ, ಇದೇ ಎಂಜಿನ್ ಅನ್ನು ಬೆನೆಲ್ಲಿ ಲಿಯಾನ್‍ಸಿನೊ ಮತ್ತು ಟಿಆರ್‌ಕೆ 502 ಬೈಕ್ ಗಳಿಗೆ ನೀಡಲಾಗಿದೆ.

ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಆಧರಿಸಿರುವ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಯುಎಸ್ಡಿ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಈ ಹೊಸ ಬೆನೆಲ್ಲಿ 502ಸಿ ಕ್ರೂಸರ್ ಬೈಕ್ 2,280 ಎಂಎಂ ಉದ್ದ ಮತ್ತು 1,140 ಎಂಎಂ ಎತ್ತರವನ್ನು ಹೊದಿದೆ. ಇನ್ನು ಈ ಮಾದರಿಯು 1,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಬೈಕ್ 750 ಎಂಎಂ ಎತ್ತರದ ಸೀಟ್ ಅನ್ನು ಹೊಂದಿದೆ.