ನಮ್ಮ ಬೆಂಗಳೂರು ಸಕತ್ ಫಾಸ್ಟ್ ಮಗಾ..!
ಏನಾದರು ಅರ್ಥವಾಯಿತೇ? ಇದು ಕಳೆದ ಭಾನುವಾರ ಬೆಂಗಳೂರಿನ ಡಿಎಸ್‌ಕೆ ಶೋ ರೂಂನಲ್ಲಿ ಕಂಡಬಂದಿರುವ ಕಟೌಟ್. ಹೌದು, 'ನಮ್ಮ ಬೆಂಗಳೂರು ಸಕತ್ ಫಾಸ್ಟ್ ಮಗಾ' ಡಿಎಸ್ ಕೆ ಬೆನೆಲ್ಲಿ ಪಾಲಿಗಂತೂ ಅಕ್ಷರಶ: ನಿಜವೆನಿಸಿದೆ.
ಭಾರತ ಮಾರುಕಟ್ಟೆಗೆ ಪ್ರವೇಶಿಸಿ ಮೂರು ತಿಂಗಳೊಳಗೆ ಡಿಎಸ್ ಕೆ ಬೆನೆಲ್ಲಿ 100ರಷ್ಟು ಮೋಟಾರ್ ಸೈಕಲ್ ಗಳನ್ನು ನಮ್ಮ ಬೆಂಗಳೂರಿನಿಂದಲೇ ಮಾರಾಟ ಮಾಡಿದೆ. ಈ ಮೂಲಕ ದೇಶದಲ್ಲೇ ನಂ.1 ಸೂಪರ್ ಬೈಕ್ ಮಾರಾಟ ಕೇಂದ್ರವಾಗಿ ಮಾರ್ಪಾಟ್ಟಿದೆ. ಪುಣೆ, ಮುಂಬೈ, ದೆಹಲಿಗಳಂತಹ ನಗರಗಳನ್ನು ಹಿಂದಿಕ್ಕಿ ಬೆಂಗಳೂರು ಇಂತಹದೊಂದು ಸಾಧನೆ ಮಾಡಿದೆ. ಇದರಂತೆ ಬೆಂಗಳೂರು ಡಿಎಸ್ ಕೆ ಬೆನೆಲ್ಲಿ ಸಂಘವು ಈ ಯಶಸ್ಸನ್ನು ಆಚರಿಸಿಕೊಳ್ಳಲು ಭಾನುವಾರ ವಿಶೇಷ ರೈಡಿಂಗನ್ನು ಆಯೋಜಿಸಿತ್ತು. ಇದರಲ್ಲಿ ಡ್ರೈವ್ ಸ್ಪಾರ್ಕ್ ತಂಡವು ಭಾಗವಹಿಸಿತ್ತು.

ಡಿಎಸ್ ಕೆ ಬೆನೆಲ್ಲಿ ಪ್ರಕಾರ ಸಂಸ್ಥೆಯು ಈಗಾಗಲೇ 700ರಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ. ಬೆಂಗಳೂರಿನಲ್ಲಿ ಡಿಎಸ್ ಕೆ ಬೆನೆಲ್ಲಿ ಶೋ ರೂಂ ರಿಚ್ ಮಂಡ್ ಸಮೀಪ ಲಾಲ್ ಬಾಗ್ ರಸ್ತೆ, ನಂ.14, ಲ್ಯಾಂಗ್ ಫೋರ್ಡ್ ಅವೆನ್ಯೂ ಕೇಂದ್ರದಲ್ಲಿದೆ.

ಹಾರ್ಲೆ ಡೇವಿಡ್ಸನ್, ಹ್ಯೊಸಂಗ್, ಟ್ರಯಂಪ್, ಡುಕಾಟಿಗಳಂತಹ ಸೂಪರ್ ಬೈಕ್ ಗಳಿಗೆ ಸಮವಾಗಿ ಬೆಳೆದು ನಿಂತಿರುವ ಇಟಲಿ ಮೂಲದ ಬೆನೆಲ್ಲಿ ಭಾರತದಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ನಮ್ಮ ಪ್ರಧಾನ ಸಂಪಾದಕರು ಡಿಎಸ್ ಕೆ ಬೆನೆಲ್ಲಿಯ ಟಿಎನ್ ಟಿ 600ಐ ಓಡಿಸುವ ಅವಕಾಶ ಪಡೆದಿದ್ದರು. ಇದಲ್ಲದೆ ಸಂಸ್ಥೆಯ ಹೆಸರಾಂತ ಟಿಎನ್ ಟಿ 899, ಟಿಎನ್ ಟಿ 1130, ಟಿಎನ್ ಟಿ 600ಜಿಟಿ ಮತ್ತು ಟಿಎನ್ ಟಿ300 ಸೂಪರ್ ಬೈಕ್ ಗಳು ಹಾಜರಾಗಿದ್ದರು.

ಈ ನಡುವೆ ಪ್ರತಿಕ್ರಿಯಿಸಿರುವ ಡಿಎಸ್ ಕೆ ಮೋಟೋವೀಲ್ಸ್ ಮುಖ್ಯಸ್ಥರಾದ ಶಿರಿಶ್ ಕುಲಕರ್ಣಿ, 'ಬೆಂಗಳೂರಿನಲ್ಲಿ ಮಾತ್ರವಾಗಿ 100ರಷ್ಟು ಮಾರಾಟವನ್ನು ಸಾಧಿಸಿರುವುದು ಸಂಸ್ಥೆಯ ಬ್ರಾಂಡ್ ಮೌಲ್ಯದ ಜೊತೆಗೆ ವಾಹನ ಪ್ರೇಮಿಗಳ ಸೂಪರ್ ಬೈಕ್ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ' ಎಂದಿದ್ದಾರೆ.

ಬೆನೆಲ್ಲಿ ಟಿಎನ್ ಟಿ 600ಐ ತಾಂತ್ರಿಕತೆ
ಎಂಜಿನ್: 600 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್,
ಅಶ್ವಶಕ್ತಿ: 83.87
ತಿರುಗುಬಲ: 54.6
ಗೇರ್ ಬಾಕ್ಸ್: 6 ಸ್ಪೀಡ್

ಬೆಲೆ ಮಾಹಿತಿ
ನಮ್ಮ ಬೆಂಗಳೂರಿನಲ್ಲಿ ಡಿಎಸ್ ಕೆ-ಬೆನೆಲ್ಲಿ 600ಐ, 5.24 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ) ದುಬಾರಿಯೆನಿಸಿದೆ. ಪುಣೆ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆ ಮಾಡಲಾಗುತ್ತಿರುವುದು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.


Click it and Unblock the Notifications








