ಸೆ.24ರಂದು ಬೆನೆಲ್ಲಿ ಟಿಎನ್‌ಟಿ 600ಐ ಎಲ್‌ಇ ಬಿಡುಗಡೆ
ಡಿಎಸ್‌ಕೆ ಜೊತೆಗಾರಿಕೆಯಲ್ಲಿ ಭಾರತ ಪ್ರವೇಶಿಸಿರುವ ಇಟಲಿಯ ಐಕಾನಿಕ್ ಬೆನೆಲ್ಲಿ ಮಗದೊಂದು ಸೀಮಿತ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ನಮ್ಮ ಬೆಂಗಳೂರಿನಲ್ಲೂ ಬೆನೆಲ್ಲಿ ಬೈಕ್ ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ [ನಮ್ಮ ಬೆಂಗಳೂರು ಸಕತ್ ಫಾಸ್ಟ್ ಮಗಾ].
ಅದುವೇ ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 600ಐ ಎಲ್‌ಇ
ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 600ಐ ಎಲ್‌ಇ ಇದೇ ಸೆಪ್ಟೆಂಬರ್ 24ರಂದು ಬಿಡುಗಡೆಯಾಗಲಿದೆ. ಇಲ್ಲಿ ಎಲ್‌ಇ ಎಂಬುದು ಲಿಮಿಟೆಡ್ ಎಡಿಷನ್ ಎಂಬುದನ್ನು ಸೂಚಿಸುತ್ತದೆ.

ಸದ್ಯ ಭಾರತ ಮಾರುಕಟ್ಟೆಯಲ್ಲಿರುವ ಐದು ಬೆನೆಲ್ಲಿ ಬೈಕ್ ಗಳು ಇಂತಿದೆ:
- ಬೆನೆಲ್ಲಿ ಟಿಎನ್‌ಟಿ 899
- ಬೆನೆಲ್ಲಿ 1130ಆರ್,
- ಬೆನೆಲ್ಲಿ 600ಜಿಟಿ,
- ಬೆನೆಲ್ಲಿ 600ಐ ಮತ್ತು
- ಬೆನೆಲ್ಲಿ ಟಿಎನ್‌ಟಿ 302
ನೂತನ ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 600ಐ ಎಲ್‌ಇ ಮಾದರಿಯು ಈಗ ಮಾರಾಟದಲ್ಲಿರುವ 600ಐ ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಪ್ರಸ್ತುತ 600ಐ ಮುಂಬೈ ಎಕ್ಸ್ ಶೋ ರೂಂ ಬೆಲೆ 5.29 ಲಕ್ಷ ರು.ಗಳಿಷ್ಟಿದೆ.
ಇನ್ನುಳಿದಂತೆ ಎಂಜಿನ್ ತಾಂತ್ರಿಕತೆ, ಬೆಲೆ ಹಾಗೂ ಇತರ ವೈಶಿಷ್ಟ್ಯಗಳ ಬಗೆಗಿನ ಸಂಪೂರ್ಣ ಮಾಹಿತಿಯು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ. ಅಲ್ಲಿಯ ವರೆಗೆ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಹಮ್ಮಿಕೊಂಡಿರುವ ಕೆಲವು ಶಕ್ತಿಶಾಲಿ ಬೆನೆಲ್ಲಿ ಬೈಕ್ ಗಳ ಎಕ್ಸ್ ಕ್ಲೂಸಿವ್ ರಿವ್ಯೂಗಳನ್ನು ಓದಿರಿ [ಕೆಳಗಡೆ ಕೊಡಲಾಗಿದೆ].
ಬೆನೆಲ್ಲಿ ಬಿಎನ್600ಐ; ಇಟಲಿಯ ಪವರ್ ಭಾರತಕ್ಕೆ
ಬೆನೆಲ್ಲಿ ಟಿಆನ್‌ಟಿ899 - ಕನಸಿನ ಬೈಕ್ ನೈಜತೆಯ ಸ್ಪರ್ಶ ಪಡೆದಾಗ
ಕೆಟಿಎಂ vs ಬೆನೆಲ್ಲಿ: ಶಕ್ತಿಶಾಲಿ ಬೈಕ್ ಗಳ ಮಹಾ ಸಮರ


Click it and Unblock the Notifications








