ಇಂಡಿಯಾ ಬೈಕ್ ವೀಕ್‌ನಲ್ಲಿ ಡಿಎಸ್‌ಕೆ-ಬೆನೆಲ್ಲಿಯಿಂದ 8 ಸೂಪರ್ ಬೈಕ್
ಈ ಸಾಲಿನ ಇಂಡಿಯಾ ಬೈಕ್ ವೀಕ್ ಹಿಂದೆಂದಿಗಿಂತಲೂ ಅತೀವ ರೋಚಕವೆನಿಸಲಿದೆ. ಏಕೆಂದರೆ ತಮ್ಮ ತಮ್ಮ ನೂತನ ಮಾದರಿಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲು ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯು ತುದಿಗಾಲಲ್ಲಿ ನಿಂತಿದೆ.
ಇದರಂತೆ ಇಟಲಿಯ ಐಕಾನಿಕ್ ಸೂಪರ್ ಬೈಕ್ ತಯಾರಕ ಸಂಸ್ಥೆಯಾಗಿರುವ ಬೆನೆಲ್ಲಿ ಸಂಸ್ಥೆಯು 2015 ಇಂಡಿಯಾ ಬೈಕ್ ವೀಕ್‌ನಲ್ಲಿ ಎಂಟು ಸೂಪರ್ ಬೈಕ್‌ಗಳನ್ನು ಪ್ರದರ್ಶಿಸಲಿದೆ.

ನಿಮ್ಮ ಮಾಹಿತಿಗಾಗಿ, ಈಗಾಗಲೇ ಡಿಎಸ್‌ಕೆ ಪಾಲುದಾರಿಕೆಯಲ್ಲಿ ಬೆನೆಲ್ಲಿ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈಗ ಹೈ ಎಂಡ್ ಬೈಕ್‌ಗಳ ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ಇನ್ನಷ್ಟು ಗಟ್ಟಿ ಮಾಡುವ ಇರಾದೆ ಹೊಂದಿದೆ.
2015 ಮಾರ್ಚ್ ತಿಂಗಳಲ್ಲಿ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿರುವ ಡಿಎಸ್‌ಕೆ ಇದಕ್ಕೂ ಮೊದಲಾಗಿ ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇದು ಇಲ್ಲಿಗೆ ಆಗಮಿಸುವ ಬೈಕ್ ಉತ್ಸಾಹಿಗಳಿಗೆ ಅದ್ಭುತ ಅನುಭ ನೀಡಲಿರುವುದಂತೂ ಗ್ಯಾರಂಟಿ.

2015 ಇಂಡಿಯಾ ಬೈಕ್ ವೀಕ್ ಗೋವಾದಲ್ಲಿ ಫೆಬ್ರವರಿ 20 ಹಾಗೂ 21ರಂದು ಆಯೋಜನೆಯಾಗಲಿದೆ. ಇದರಂತೆ ಬೆನೆಲ್ಲಿ ಟಿಎನ್‌ಟಿ300, ಟಿಎನ್‌ಟಿ 600ಐ, ಟಿಎನ್‌ಟಿ 600 ಜಿಟಿ, ಟಿಎನ್‌ಟಿ 899 ಹಾಗೂ ಟಿಎನ್‌ಟಿ 1130 ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಕಂಪ್ಲೀಟ್ ನೋಕ್ಡ್ ಡೌನ್ (ಸಿಕೆಡಿ) ಮುಖಾಂತರ ಆಗಮನವಾಗಲಿರುವ ಡಿಎಸ್‌ಕೆ ಬೈಕ್‌ಗಳು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲಿದೆ.


Click it and Unblock the Notifications








