ಮೊನ್ನೆಯಷ್ಟೆ ಬಿಡುಗಡೆಯಾದ 2025 TRK ಅಡ್ವೆಂಚರ್ ಬೈಕ್ ಸೀರೀಸ್ ವಿಶೇಷತೆಗಳು!

ಪ್ರಮುಖ ಮೋಟಾರ್‌ಸೈಕಲ್ ತಯಾರಕ ಬೆನೆಲ್ಲಿ ಇಂಡಿಯಾ, ತನ್ನ ಹೊಸ TRK 2025 ಸಿರೀಸ್ ಮೋಟಾರ್‌ಸೈಕಲ್‌ಗಳನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ TRK 2025 ಸಿರೀಸ್ ಮೋಟಾರ್‌ಸೈಕಲ್‌ಗಳು 2 ವರ್ಷಗಳ ಅನಿಯಮಿತ ಕಿ.ಮೀ ವಾರಂಟಿ ಮತ್ತು ಗ್ರಾಹಕರಿಗೆ 24x7 ರಸ್ತೆಬದಿಯ ಸಹಾಯದ ಸೌಲಭ್ಯದೊಂದಿಗೆ ಬರುತ್ತದೆ. ಉತ್ಸಾಹಭರಿತ ಸವಾರರಿಗೆ ಅತ್ಯುತ್ತಮ ಮೌಲ್ಯವನ್ನು ಸಂಯೋಜಿಸುವ ಮೋಟಾರ್‌ಸೈಕಲ್‌ಗಳನ್ನು ತಲುಪಿಸುವ ಬೆನೆಲ್ಲಿಯ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ನವೀಕರಿಸಿದ ಬೆಲೆ (ಎಕ್ಸ್-ಶೋರೂಂ): ಹೊಸ TRK 502 ಮತ್ತು TRK 502X ಅನ್ನು ಹತ್ತಿರದ ಅಧಿಕೃತ ಬೆನೆಲ್ಲಿ ಇಂಡಿಯಾ ಡೀಲರ್‌ಶಿಪ್‌ನಲ್ಲಿ ಟೆಸ್ಟ್ ರೈಡ್ ಮಾಡಿ ಬುಕ್‌ ಮಾಡಬಹುದು. ಬೆಲೆಗಳ ವಿಷಯಕ್ಕೆ ಬಂದರೆ ಹೊಸ TRK 502X ಸೀಮಿತ ಆವೃತ್ತಿಯ ಬೆಲೆಯು ರೂ.6.85 ಲಕ್ಷವಿದ್ದರೇ, TRK 502 ಬೆಲೆಯು ರೂ.6.20 ಲಕ್ಷವಿದೆ, ಹಾಗಯೇ TRK 502X ಆವೃತ್ತಿಯ ಬೆಲೆಯು ರೂ.6.70 ಲಕ್ಷವಿದೆ.

new-trk-2025-series-adv-motorcycles-top-things

ಮೋಟಾರ್‌ಸೈಕಲ್‌ಗಳ ದೀರ್ಘ ಶೀತ ಸವಾರಿಗಳ ಸಮಯದಲ್ಲಿ ಉತ್ತಮ ಸೌಕರ್ಯಕ್ಕಾಗಿ ಬಿಸಿಯಾದ ಹಿಡಿತಗಳು ಮತ್ತು ಬಿಸಿಯಾದ ಆಸನ (Heated Grips and Heated Seat) ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಸ್ಮಾರ್ಟ್‌ಫೋನ್ ಸಂಪರ್ಕ, ಸ್ಕ್ರೀನ್ ಮಿರರ್ ಮತ್ತು ಟ್ರ್ಯಾಕ್-ಬ್ಯಾಕ್ ಕಾರ್ಯನಿರ್ವಹಣೆಯೊಂದಿಗೆ ಸಂಯೋಜಿತ ನ್ಯಾವಿಗೇಷನ್ ಸಿಸ್ಟಮ್, TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಫ್‌ಲೈನ್ ಮ್ಯಾಪ್‌ಗಳು,

ಲಭ್ಯವಿರುವ ಬಣ್ಣಗಳು: ಬೆನೆಲ್ಲಿ TRK 502 ಆವೃತ್ತಿಯು ಬ್ಲಾಕ್ ಮತ್ತು ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಯೆಲ್ಲೋ ಸೀಮಿತ ಆವೃತ್ತಿಯೊಂದಿಗೆ ವಿಶಿಷ್ಟವಾದ ಗೋಲ್ಡ್ ರಿಮ್‌ಗಳನ್ನು ಈ ಆವೃತ್ತಿಯಲ್ಲಿ ನೀಡಲಾಗಿದೆ. ಬೆನೆಲ್ಲಿ TRK 502X ಆವೃತ್ತಿಯು ವೈಟ್ ಮತ್ತು ಗ್ರೀನ್ ಬಣ್ಣವನ್ನು ಪ್ರಮಾಣಿತವಾಗಿ ಹೊಂದಿದೆ.

new-trk-2025-series-adv-motorcycles-top-things

ಮಿತಿಗಳನ್ನು ಮೀರಿ ಸಾಹಸದ ಸವಾರಿಗಳನ್ನು ಮಾಡುವ ಅನ್ವೇಷಕರಿಗಾಗಿ ಹೊಸ TRK 2025 ಸಿರೀಸ್ ಮೋಟಾರ್‌ಸೈಕಲ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ TRK ಪ್ಲಾಟ್‌ಫಾರ್ಮ್‌ನ ಮೇಲೆ ನಿರ್ಮಿಸಲಾದ ಹೊಸ ಮೋಟಾರ್‌ಸೈಕಲ್‌ಗಳು ಸುಧಾರಿತ ತಂತ್ರಜ್ಞಾನ, ವರ್ಧಿತ ಸೌಕರ್ಯ ಮತ್ತು ಒರಟಾದ ಅತ್ಯಾಧುನಿಕ ಡಿಸೈನ್‌ಗಳನ್ನು ಹೊಂದಿವೆ ಎಂದು ಬೆನೆಲ್ಲಿ ಕಂಪನಿ ತಿಳಿಸಿದೆ.

ಹೊಸ ಹ್ಯಾಂಡ್ ಗಾರ್ಡ್‌ಗಳು ಮತ್ತು ಎಂಜಿನ್ ಪ್ಲೇಟ್ ಮಿಶ್ರಣ ರಕ್ಷಣೆ, ಗರಿಷ್ಠ ಪವರ್ ಮತ್ತು ಸೌಂದರ್ಯಕ್ಕಾಗಿ ಮ್ಯಾಟ್ ಬ್ಲಾಕ್ ಎಲೆಕ್ಟ್ರೋಫೋರೆಸಿಸ್‌ನೊಂದಿಗೆ ದೃಢವಾದ ಟ್ರೆಲ್ಲಿಸ್ ಫ್ರೇಮ್, ಕಸ್ಟಮೈಸ್ ಮಾಡಿದ ಏರ್ಗನಾಮಿಕ್ಸ್ ಪಿಚ್ ಮಟ್ಟದ ಇಂಡಿಕೇಟರ್‌ಗಳೊಂದಿಗೆ ಅಡ್ಜಸ್ಟಬಲ್ ಹ್ಯಾಂಡಲ್‌ಬಾರ್ ಮೌಂಟ್‌ಗಳು, ವೈವಿಧ್ಯಮಯ ಭೂಪ್ರದೇಶಗಳನ್ನು ಸುಲಭವಾಗಿ ಕರಗತ ಮಾಡಿಕೊಳ್ಳಲು ಆಪ್ಟಿಮೈಸ್ಡ್ ಗ್ರೌಂಡ್ ಕ್ಲಿಯರೆನ್ಸ್ (190 ಮಿಮೀ) ಮತ್ತು ಸೀಟ್ ಎತ್ತರ (800 ಮಿಮೀ) ವನ್ನು ಒದಗಿಸಲಾಗಿದೆ.

new-trk-2025-series-adv-motorcycles-top-things

ವರ್ಧಿತ ಸುರಕ್ಷತೆ ಮತ್ತು ಕಾರ್ಯಕ್ಷಮತೆಗಾಗಿ ಟ್ಯೂಬ್‌ಲೆಸ್ ಟೈರ್‌ಗಳು ಮತ್ತು ಟೈರ್ ಒತ್ತಡದ ಮೇಲ್ವಿಚಾರಣಾ ವ್ಯವಸ್ಥೆ (TPMS), ಸುಧಾರಿತ ನಿರ್ವಹಣೆ ಮತ್ತು ತೂಕದ ಆಪ್ಟಿಮೈಸೇಶನ್ ಅನ್ನು ಖಾತ್ರಿಪಡಿಸುವ ಮರುವಿನ್ಯಾಸಗೊಳಿಸಲಾದ ಅಲ್ಯೂಮಿನಿಯಂ ಸ್ವಿಂಗರ್ಮ್, ಸುಗಮ ಡೌನ್‌ಶಿಫ್ಟ್‌ಗಳು ಮತ್ತು ಸುಧಾರಿತ ಸವಾರಿ ಸ್ಥಿರತೆಗಾಗಿ ಸ್ಲಿಪ್ಪರ್ ಕ್ಲಚ್ ಒದಗಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 10, 2025, 13:00 [IST]
English summary
New trk 2025 series adv motorcycles top things
Read more on benelli india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+