ಡುಕಾಟಿ ಪ್ರೀಮಿಯಂ ಬೈಕ್ ಮಾರ್ಚ್‌ನಲ್ಲಿ ರಿ ಎಂಟ್ರಿ

By Nagaraja

ಕೆಲವು ಸಮಯಗಳ ಹಿಂದೆ ಭಾರತಕ್ಕೆ ಕಾಲಿರಿಸಿದ್ದ ಡುಕಾಟಿ ಕಾರಣಾಂತರಗಳಿಂದಾಗಿ ಹಿಂದಕ್ಕೆ ಸರಿದಿತ್ತು. ಈಗ ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಡುಕಾಟಿ ಮಗದೊಮ್ಮೆ ದೇಶಕ್ಕೆ ಕಾಲಿರಿಸುವ ಇರಾದೆ ಹೊಂದಿದೆ.

ಬಲ್ಲ ಮೂಲಗಳ ಪ್ರಕಾರ ಇಟಲಿಯ ಈ ಐಷಾರಾಮಿ ಬೈಕ್ ತಯಾರಿಕ ಸಂಸ್ಥೆಯು 2015 ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ರಿ ಎಂಟ್ರಿ ಕೊಡಲಿದೆ. ತನ್ನ ಎರಡನೇ ಪ್ರವೇಶದಲ್ಲಿ ಸಂಪೂರ್ಣ ಶ್ರೇಣಿಯ ಬೈಕ್‌ಗಳನ್ನು ಪರಿಚಯಿಸುವುದು ಸಂಸ್ಥೆಯ ಗುರಿಯಾಗಿದೆ.|

ducati

ಇದಕ್ಕೂ ಮೊದಲು ಮುಂಬೈ ಹಾಗೂ ಗುರ್ಗಾಂವ್‌ನಲ್ಲಿ ಹೊಸ ಡೀಲರ್‌ಶಿಪ್ ತೆರೆಯಲಾಗುವುದು. ಇದಾದ ಬೆನ್ನಲ್ಲೇ ಬೆಂಗಳೂರಿನಲ್ಲೂ ವಿತರಕ ಜಾಲ ತೆರೆಯುವ ಯೋಜನೆ ಹೊಂದಿದೆ.

ಈ ಬಾರಿ ಸ್ವತಂತ್ರವಾಗಿ ಭಾರತ ಪ್ರವೇಶ ಮಾಡುವುದು ಸಂಸ್ಥೆಯ ಇರಾದೆಯಾಗಿದೆ. ಇದು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಭಾರತಕ್ಕೆ ವಾಹನಗಳನ್ನು ಪರಿಚಯಿಸಲಿದೆ. ಇನ್ನು ಭವಿಷ್ಯದಲ್ಲಿ ಸ್ಥಳೀಯವಾಗಿ ಜೋಡಣೆ ಕಾರ್ಯಕ್ಕೆ ಚುರುಕು ಮುಟ್ಟಿಸುವ ಮೂಲಕ ಸ್ಪರ್ಧಾತ್ಮಕ ಬೆಲೆಯನ್ನು ಕಾಪಾಡಿಕೊಳ್ಳಲಿದೆ.

ಹಾರ್ಲೆ ಡೇವಿಡ್ಸನ್, ಟ್ರಯಂ, ಇಂಡಿಯನ್ ಮೋಟಾರ್ ಸೈಕಲ್, ಕವಾಸಕಿ, ಕೆಟಿಎಂ ಹಾಗೂ ಹ್ಯೊಸಂಗ್‌ಗಳಂತಹ ಮುಂಚೂಣಿಯ ಸಂಸ್ಥೆಗಳು ಭಾರತದತ್ತ ಮುಖ ಮಾಡಿರುವ ಹಿನ್ನೆಯಲ್ಲಿ ಡುಕಾಟಿ ಕೂಡಾ ಅತಿ ಬೇಗನೇ ದೇಶದ ಹೈ ಎಂಡ್ ಬೈಕ್‌ಗಳಲ್ಲಿ ತನ್ನ ಛಾಪು ಮೂಡಿಸುವ ಇರಾದೆಯಲ್ಲಿದೆ.

More from DriveSpark

Article Published On: Tuesday, February 10, 2015, 12:03 [IST]
English summary
The Italian luxury two-wheeler manufacturer is planning on marking its comeback to India in March of 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+