ಐದು ತಿಂಗಳಲ್ಲೇ 10 ಲಕ್ಷ ಆಕ್ಟಿವಾ ಮಾರಾಟ
ಬೈಕ್ ಮಾರಾಟವನ್ನೇ ಮೀರಿ ನಿಂತಿರುವ ದೇಶದ ಜನಪ್ರಿಯ ಸ್ಕೂಟರ್ ಆಕ್ಟಿವಾ 2015-16 ಆರ್ಥಿಕ ಸಾಲಿನ ಮೊದಲ ಐದು ತಿಂಗಳೊಳಗೆ 10 ಲಕ್ಷ ಮಾರಾಟವನ್ನು ಕಂಡಿದೆ. ಇದು ಇನ್ನೇನು ಆರಂಭವಾಗಲಿರುವ ಹಬ್ಬದ ಆವೃತ್ತಿಯಲ್ಲಿ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಂಎಸ್‌ಐ) ಸಂಸ್ಥೆಗೆ ಮತ್ತಷ್ಟು ಮಾರಾಟವನ್ನು ಉತ್ತೇಜನ ನೀಡುವ ಸಾಧ್ಯತೆಯಿದೆ.
ಕಳೆದೆರಡು ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿರುವ ಆಕ್ಟಿವಾ ಸಂಸ್ಥೆಯ ಒಟ್ಟು ಮಾರಾಟದ ಅರ್ಧದಷ್ಟು (ಶೇಕಡಾ 51) ಆಕ್ರಮಿಸಿಕೊಂಡಿದೆ. ಅಲ್ಲದೆ 2015-16ನೇ ಸಾಲಿನಲ್ಲಿ ಎಪ್ರಿಲ್ ನಿಂದ ಆಗಸ್ಟ್ ವರೆಗೆ 10,01,350 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಆಕ್ಟಿವಾ ಕಳೆದ ವರ್ಷಕ್ಕಿಂತಲೂ ಶೇಕಡಾ 20ರಷ್ಟು ಮಾರಾಟ ವರ್ಧನೆ ದಾಖಲಿಸಿದೆ. ಆಕ್ಟಿವಾ ಈಗಾಗಲೇ ಒಂದು ಕೋಟಿ ರು.ಗಿಂತಲೂ ಹೆಚ್ಚು ಮಾರಾಟವನ್ನು ಸಾಧಿಸಿದೆ.
2001ನೇ ಇಸವಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಿರುವ ಆಕ್ಟಿವಾ ಮೂರು ಮಾದರಿಗಳಲ್ಲಿ ಲಭ್ಯವಿದೆ. ಅವುಗಳೆಂದರೆ,
ಆಕ್ಟಿವಾ ತ್ರಿಜಿ, ಆಕ್ಟಿವಾ ಐ ಮತ್ತು ಆಕ್ಟಿವಾ 125.
ಈ ಪೈಕಿ ಆಕ್ಟಿವಾ 3ಜಿ ಹಾಗೂ ಆಕ್ಟಿವಾ ಐ 109.2 ಸಿಸಿ ಹಾಗೂ ಆಕ್ಟಿವಾ 125 ಸ್ಕೂಟರ್ 124.9 ಸಿಸಿ ಮೋಟಾರು ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.


Click it and Unblock the Notifications








