ಹಬ್ಬದ ಆವೃತ್ತಿಗೆ ಮೆರಗು ತುಂಬಲು ಬರುತ್ತಿದೆ ಹೋಂಡಾ ಹಾರ್ನೆಟ್

Written By:

ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆದ ರೇವ್ ಫೆಸ್ಟ್‌ನಲ್ಲಿ ಅತಿ ನೂತನ ಸಿಬಿ ಹಾರ್ನೆಟ್ 160ಆರ್ ಬೈಕ್ ಅನ್ನು ಪರಿಚಯಿಸಿದ್ದ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಈ ಬಹುನಿರೀಕ್ಷಿತ ಬೈಕ್ ಅನ್ನು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರಮುಖವಾಗಿಯೂ ಸಿಬಿ ಟ್ರಿಗರ್ ಸ್ಥಾನವನ್ನು ತುಂಬಲಿರುವ ಹಾರ್ನೆಟ್, ಮುಂಬರುವ ಹಬ್ಬದ ಆವೃತ್ತಿಗೆ ಮತ್ತಷ್ಟು ಮೆರಗು ನೀಡಲಿದೆ. ಇದು ಪ್ರಸಕ್ತ ಸಾಲಿನಲ್ಲಿ 15 ಮಾದರಿಗಳನ್ನು ಬಿಡುಗಡೆ ಮಾಡುವ ಸಂಸ್ಥೆಯ ಯೋಜನೆಯ ಭಾಗವಾಗಿರಲಿದೆ.

ಹೋಂಡಾ ಹಾರ್ನೆಟ್
 • ಎಂಜಿನ್: 162.71 ಸಿಸಿ
 • ಏರ್ ಕೂಲ್ಡ್,
 • ಸಿಂಗಲ್ ಸಿಲಿಂಡರ್

(ಸಿಬಿ ಯೂನಿಕಾರ್ನ್‌ 160ಗೆ ಸಮಾನ)

ನಿರ್ವಹಣೆ

 • ಅಶ್ವಶಕ್ತಿ: 14.5
 • ತಿರುಗುಬಲ: 14.61 ಎನ್‌ಎಂ
 • ಗೇರ್ ಬಾಕ್ಸ್: ಫೈವ್ ಸ್ಪೀಡ್
ಹೋಂಡಾ ಹಾರ್ನೆಟ್

ವೈಶಿಷ್ಟ್ಯಗಳು

 • ಹ್ಯಾಲೋಗನ್ ಹೆಡ್ ಲ್ಯಾಂಪ್,
 • ಸಾಂಪ್ರಾದಾಯಿಕ ಸಿಂಗಲ್ ರಾಡ್ ಹ್ಯಾಂಡಲ್ ಬಾರ್,
 • ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ಇಂಡಿಕೇಷನ್ ಲೈಟ್,
 • ಕ್ಲಿಯರ್ ಲೆನ್ಸ್ ಟರ್ನ್ ಇಂಡಿಕೇಟರ್,
 • ಮಸಲರ್ ಇಂಧನ ಟ್ಯಾಂಕ್,
 • ಎಲ್‌ಇಡಿ ಮೀಟರ್,
 • ನ್ಯೂ ವೇವ್ ಡಿಸ್ಕ್ ಜೊತೆ ಸಿಬಿಎಸ್,
 • ಅಗಲವಾದ ಚಕ್ರಗಳು,
 • ಎಖ್ಸ್ ಆಕಾರದ ಎಲ್‌ಇಡಿ ಟೈಲ್ ಲ್ಯಾಂಪ್

ವಿನ್ಯಾಸ ಸ್ಪೂರ್ತಿ: 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಸಿಎಕ್ಸ್-01 ಕಾನ್ಸೆಪ್ಟ್ ಮಾದರಿಯಿಂದ ಸ್ಪೂರ್ತಿ ಪಡೆದುಕೊಂಡು ಸಿಬಿ ಹಾರ್ನೆಟ್ ವಿನ್ಯಾಸ ರಚಿಸಲಾಗಿದೆ.

ಹೋಂಡಾ ಹಾರ್ನೆಟ್

ಪ್ರತಿಸ್ಪರ್ಧಿಗಳು

 • ಸುಜುಕಿ ಜಿಕ್ಸರ್ 150,
 • ಯಮಹಾ ಎಫ್‌ಝಡ್,
 • ಪಲ್ಸರ್ ಎಎಸ್ 150,
 • ಹೀರೊ ಎಕ್ಸ್ ಟ್ರೀಮ್

ಬೆಲೆ ಮಾಹಿತಿ

ನೂತನ ಹೋಂಡಾ ಸಿಬಿ ಹಾರ್ನೆಟ್ 160 ಆರ್ ಬೆಲೆ ಬಿಡುಗಡೆ ವೇಳೆಯಷ್ಟೇ ತಿಳಿದು ಬರಲಿದೆ. ಪ್ರಸ್ತುತ ಬೈಕ್ 85,000 ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

English summary
Honda CB Hornet 160R Launch Most Likely By October End
Story first published: Wednesday, September 9, 2015, 12:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark