ಹೋಂಡಾ ಸಿಬಿ ಹಾರ್ನೆಟ್ 160ಆರ್ ಖರೀದಿಗಾಗಿ ಆಂಡ್ರಾಯ್ಡ್ ಆಪ್

By Nagaraja

ಇದೇ ಮೊದಲ ಬಾರಿಗೆ ಹೋಂಡಾ ಬೈಕ್‌ವೊಂದರ ಖರೀದಿಗಾಗಿ ಆಂಡ್ರಾಯ್ಡ್ ಆಪ್ ತೆರೆಯಲಾಗಿದೆ. ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಕೆಲವು ದಿನಗಳ ಹಿಂದೆಯಷ್ಟೇ ಅತಿ ನೂತನ ಹಾರ್ನೆಟ್ 160ಆರ್ ಬೈಕ್ ಬಿಡುಗಡೆಗೊಳಿಸಿತ್ತು.

ಇದಾದ ಬೆನ್ನಲ್ಲೇ ಆಸಕ್ತ ಗ್ರಾಹಕರ ಬುಕ್ಕಿಂಗಾಗಿ ಆಂಡ್ರಾಯ್ಡ್ ಆಪ್ ತೆರೆಯಲಾಗಿದೆ. ಇದರಂತೆ ಸಂಸ್ಥೆಯು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹಾರ್ನೆಟ್ ಬಿಡುಗಡೆಯಾದ ಒಂದು ವಾರದೊಳಗೆ 10,000ದಷ್ಟು ಮಂದಿ ಆಪ್ ಡೌನ್ ಲೋಡ್ ಮಾಡಿರುತ್ತಾರೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್

ಇದರಿಂದ ಪುಳಕಿತಗೊಂಡಿರುವ ಹೋಂಡಾ ಸಂಸ್ಥೆಯು ಆರಂಭಿಕ 21 ನಗರಗಳಿಂದ ಹಾರ್ನೆಟ್ ಲಭ್ಯತೆಯನ್ನು 53 ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ಇವುಗಳಲ್ಲಿ ಬೆಂಗಳೂರು, ಅಹಮಾದಾಬಾದ್, ಚೆನ್ನೈ, ದೆಹಲಿ, ಹೈದರಾಬಾದ್, ಇಂಧೋರ್, ಕೋಲ್ಕತ್ತಾ, ನವಿ ಮುಂಬೈ, ಥಾಣೆ, ಕೊಚ್ಚಿ, ಲಕ್ನೋ, ಸೂರತ್, ಪುಣೆ, ಗೋವಾ, ವಿಶಾಖಪಟ್ಟಣ, ವಿಜಯವಾಡ, ದೆಹ್ರಾಡೂನ್, ಆಗ್ರಾ, ಭೋಪಾಲ್, ಗ್ವಾಲಿಯರ್, ಜಬಲ್ ಪುರ್, ರಾಯ್ ಪುರ್, ಅಜ್ಮೆರ್, ಅಮೃತ್ ಸರ್, ಚಂಡೀಗಡ, ಫಿರಿದಾಬಾದ್, ಗುರ್ಗಾಂವ್, ಜೈಪುರ, ಜಲಂಧರ್, ಜಮ್ಮು ಮತ್ತು ಕಾಶ್ಮೀರ, ಜೋಧ್ ಪುರ್, ಲುಧಿಯಾನಾ, ಮೊಹಾಲಿ, ಪಾಟಿಯಾಲ, ಉದಯ್ ಪುರ, ಮದುರೈ, ನಾಶಿಕ್ ಮತ್ತು ನಾಗ್ಪುರ ಪ್ರಮುಖ ನಗರಗಳಾಗಿವೆ.

ಇತರೆ ಸಣ್ಣ ನಗರಗಳಿಂದ ಬರುವ ಗ್ರಾಹಕ ಬೇಡಿಕೆಯ ಆಧಾರದಲ್ಲಿ ಹೋಂಡಾ ಬೈಕ್ ಒದಗಿಸಲಿದೆ. ಆಸಕ್ತ ಗ್ರಾಹಕರು 5,000 ರು. ಪಾವತಿಸಿ ಹೋಂಡಾ ಹಾರ್ನೆಟ್ ಬುಕ್ ಮಾಡಬಹುದಾಗಿದೆ.

Article Published On: Saturday, December 19, 2015, 9:30 [IST]
English summary
Honda CB Hornet 160R App Receives 10,000 Downloads
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+