ಜುಲೈನಲ್ಲಿ ಹೋಂಡಾ ಸೂಪರ್ ಸ್ಪೋರ್ಟ್ ಬೈಕ್ ಬಿಡುಗಡೆ ಸಾಧ್ಯತೆ
ದ್ವಿಚಕ್ರ ವಿಭಾಗದಲ್ಲಿ ಅಧಿಪತ್ಯ ಸ್ಥಾಪಿಸಿರುವ ಹೋಂಡಾ ಮೋಟಾರ್ಸ್ ಆ್ಯಂಡ್ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ಮುಂಬರುವ ಜುಲೈ ತಿಂಗಳಲ್ಲಿ ಸಿಬಿಆರ್ 650ಎಫ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಭಾರತದಲ್ಲಿ ಲಭ್ಯವಾಗಲಿರುವ ಈ ಸೂಪರ್ ಸ್ಪೋರ್ಟ್ ಮೋಟಾರ್ ಸೈಕಲ್ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮುಖಾಂತರ ಮಾರುಕಟ್ಟೆಗೆ ತಲುಪಲಿದೆ. ಅಂದರೆ ಶೇಕಡಾ 5ರಿಂದ 8ರಷ್ಟು ಮಾತ್ರ ಬಿಡಿಭಾಗಗಳು ಸ್ಥಳೀಯವಾಗಿ ಜೋಡಣೆಯಾಗಲಿದೆ.

ಅಂದರೆ ಸಂಸ್ಥೆಯಿಂದ ದೇಶದಲ್ಲಿ ಪರಿಚಯವಾಗಲಿರುವ ಮೊದಲ ಸೂಪರ್ ಸ್ಪೋರ್ಟ್ ಮೋಟಾರ್‌ಸೈಕಲ್ 7ರಿಂದ 8 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಅತಿ ದುಬಾರಿ ಬೈಕ್ ಗಳ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ.
ಪ್ರತಿಸ್ಪರ್ಧಿಗಳು:
- ಕವಾಸಕಿ ನಿಂಜಾ 650,
- ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 600ಐ

- 649 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್,
- 85.8 ಅಶ್ವಶಕ್ತಿ,
- 63 ತಿರುಗುಬಲ,
- 6 ಸ್ಪೀಡ್ ಗೇರ್ ಬಾಕ್ಸ್
ಮೊದಲ ಪ್ರದರ್ಶನ: 2014 ಆಟೋ ಎಕ್ಸ್ ಪೋ
ಬಿಡುಗಡೆ ಅವಧಿ: 2015 ಜೂನ್ (ಸಾಧ್ಯತೆ)


Click it and Unblock the Notifications