2016 ಆಟೋ ಎಕ್ಸ್ ಪೋದಲ್ಲಿ ಹೋಂಡಾ ಶಕ್ತಿಶಾಲಿ ಸ್ಕೂಟರ್ ಬಿಡುಗಡೆ

Written By:

ಸಾಮಾನ್ಯವಾಗಿ ಪ್ರಯಾಣಿಕ ಯೋಗ್ಯವಾದ ಸ್ಕೂಟರ್ ಗಳು 100ರಿಂದ 125 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆದರೆ ಇವೆಲ್ಲದಕ್ಕಿಂತಲೂ ಮಿಗಿಲಾಗಿ ಶಕ್ತಿಶಾಲಿ ಸ್ಕೂಟರ್ ವೊಂದನ್ನು ಬಿಡುಗಡೆ ಮಾಡುವ ಯೋಜನೆಯನ್ನು ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಹೊಂದಿದೆ.

ಅದುವೇ ಹೋಂಡಾ ಪಿಸಿಎಕ್ಸ್ 150 ಸ್ಕೂಟರ್. ಅಲ್ಲದೆ 2016 ವರ್ಷಾರಂಭದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

To Follow DriveSpark On Facebook, Click The Like Button
honda pcx 150

ಭಾರತೀಯ ಗ್ರಾಹಕರಿಗೆ ಹೋಂಡಾದ 150 ಸಿಸಿ ಸ್ಕೂಟರ್ ಹೊಸ ಅನುಭವವಾಗಲಿದೆ. ಪ್ರಸ್ತುತ ದೇಶದಲ್ಲಿ ಹೋಂಡಾದಿಂದ ಲಭ್ಯವಾಗುವ ಶಕ್ತಿಶಾಲಿ ಸ್ಕೂಟರ್ ಆಕ್ಟಿವಾ 125ಸಿಸಿ ಆಗಿದೆ.

ಹೋಂಡಾ ಪಿಸಿಎಕ್ಸ್ 150 ತಾಂತ್ರಿಕತೆ

ಎಂಜಿನ್: 153 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟಡ್,

ಅಶ್ವಶಕ್ತಿ: 13.4

ತಿರುಗುಬಲ: 14

ಗೇರ್ ಬಾಕ್ಸ್: ವಿ ಮ್ಯಾಟ್ರಿಕ್ಸ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

honda pcx 150

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲೂ ಹೋಂಡಾ ಬಹುನಿರೀಕ್ಷಿತ ಸ್ಕೂಟರ್ ಅನ್ನು ಪ್ರದರ್ಶಿಸಲಾಗಿತ್ತು. ಅಲ್ಲದೆ ಗುಜರಾತ್ ನ ಘಟಕದಲ್ಲಿ ನಿರ್ಮಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ.

Read more on ಹೋಂಡಾ honda
English summary
The Japanese manufacturer had showcased its 150cc scooter last year. It was known as the PCX 150 scooter and will be launched in India during 2016 Auto Expo.
Story first published: Wednesday, May 13, 2015, 9:17 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark