ಹೋಂಡಾದಿಂದ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ

By Nagaraja

ಶ್ರೀರಾಮ್ ಆಟೋಮಾಲ್ ಇಂಡಿಯಾ ಜೊತೆ ಪಾಲುದಾರಿಕೆಗೆ ಸಹಿ ಹಾಕಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಸಂಸ್ಥೆಯು ದೇಶದಲ್ಲಿ ಸಕೆಂಡ್ ಹ್ಯಾಂಡ್ (pre-owned) ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಲಿದೆ.

ಈ ಪಾಲುದಾರಿಕೆಯೊಂದಿಗೆ ಮುಂದಿನ ಮೂರು ವರ್ಷಗಳಲ್ಲಿ 3.5 ಲಕ್ಷ ದ್ವಿಚಕ್ರ ವಾಹನಗಳ ಮಾರಾಟವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ.

honda cb shine

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಎಚ್‌ಎಂಎಸ್‌ಐ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿರುವ ವೈಎಸ್ ಗುಲೆರಿಯಾ ಪ್ರಸ್ತುತ ಉದ್ಯಮದಲ್ಲಿ ಸಂಘಟಿಕ ಹಾಗೂ ವಿಶ್ವಾಸಾರ್ಹ ರಚನೆಯ ಕೊರತೆಯಿದೆ ಎಂದಿದ್ದಾರೆ.

ದೇಶದಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದು ಒಟ್ಟಾರೆ ಮಾರಾಟದಲ್ಲಿ ಶೇಕಡಾ 15ರಷ್ಟು ತನ್ನ ಪಾಲನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಮುಂಬರುವ ಮೂರು ವರ್ಷಗಳಲ್ಲಿ ದೇಶದ 40 ಪಟ್ಟಣಗಳಲ್ಲಿ ಶೇಕಡಾ 100ರಷ್ಟು ಸೇವೆ ಒದಗಿಸುವುದು ನಮ್ಮ ಗುರಿಯಾಗಿದೆ. ಈಗ ಶ್ರೀರಾಮ್ ಆಟೋಮಾಲ್ ಜೊತೆಗಿನ ಪಾಲುದಾರಿಗೆಯೊಂದಿಗೆ ವಿಶ್ವಾಸಾರ್ಹ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಸಹಕಾರಿಯಾಗಲಿದೆ ಎಂದಿದ್ದಾರೆ.

'ಬೆಸ್ಟ್ ಡೀಲ್' ಬ್ರಾಂಡ್ ಹೆಸರಲ್ಲಿ ದೇಶದ 11 ರಾಜ್ಯಗಳಲ್ಲಿ ಸಂಸ್ಥೆಯು ಈಗಾಗಲೇ ಮಾನ್ಯತೆ ಪಡೆದ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ.

More from DriveSpark

Article Published On: Friday, January 23, 2015, 9:31 [IST]
English summary
Honda Motorcycle & Scooter India (HMSI) has tied up with Shriram Automall India for selling pre-owned two-wheelers in the country. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+