ಚಿಕಾಗೊಗೆ ದಾಳಿಯಿಟ್ಟ ಚೀಫ್ ಡಾರ್ಕ್ ಹಾರ್ಸ್
ಇತ್ತೀಚೆಗಷ್ಟೇ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಇಂಡಿಯನ್ ಮೋಟಾರ್‌ಸೈಕಲ್ ಸ್ವಲ್ಪ ದುಬಾರಿಯೆನಿಸಿದ್ದರೂ ವಿಭಿನ್ನ ವಿನ್ಯಾಸದಿಂದಲೇ ಜನ ಮನ ಗೆದ್ದಿದ್ದವು. ಮಗದೊಮ್ಮೆ ಇಂಡಿಯನ್ ಮೋಟಾರ್ ಸೈಕಲ್ ಕುರಿತು ನಾವಿಲ್ಲಿ ಉಲ್ಲೇಖಿಸಲು ಇಚ್ಛಿಸುತ್ತಿದ್ದೇವೆ.
2015 ಚಿಕಾಗೊ ಮೋಟಾರು ಶೋದಲ್ಲಿ ಇಂಡಿಯನ್ ಮೋಟಾರ್‌ಸೈಕಲ್‌ನಿಂದ ನೂತನ ಮಾದರಿಯೊಂದು ಪ್ರದರ್ಶನಗೊಂಡಿದೆ. ಇದುವೇ ನಮ್ಮ ಕುತೂಹಲಕ್ಕೆ ಕಾರಣವಾಗಿರುವುದು.

ಚೀಕಾಗೊದಲ್ಲಿ ಅನಾವರಣಗೊಂಡಿರುವ 'ಚೀಫ್ ಡಾರ್ಕ್ ಹೌಸ್' ನಿಕಟ ಭವಿಷ್ಯದಲ್ಲೇ ಭಾರತಕ್ಕೂ ಪ್ರವೇಶಿಸುತ್ತಿದೆ ಎಂಬುದು ಇಲ್ಲಿನ ಗಮನಾರ್ಹ ಸಂಗತಿಯಾಗಿದೆ.
ಅಮೆರಿಕದ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಇಂಡಿಯನ್ ಮೋಟಾರ್‌ಸೈಕಲ್ಸ್, 'ಚೀಫ್ ಡಾರ್ಕ್ ಹೌಸ್' ಮಾದರಿಗೆ ಭಾರತೀಯ ರುಪಾಯಿ ಪ್ರಕಾರ 10.58 ಲಕ್ಷ ರು. (ತೆರಿಗೆ ಹೊರತಾಗಿ) ನಿಗದಿಪಡಿಸಿದೆ. ಭಾರತಕ್ಕೆ ಆಗಮಿಸುವಾಗ ಇದು 20 ಲಕ್ಷ ರು.ಗಳಷ್ಟು ಇನ್ನಷ್ಟು ದುಬಾರಿಯಾಗಲಿದೆ.

ಅಂದ ಹಾಗೆ ಚೀಫ್ ಡಾರ್ಕ್ ಹೌಸ್, ವಿ ಟ್ವಿನ್ 1,811 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 138.9 ತಿರುಗುಬಲ ನೀಡಲಿದ್ದು, 6 ಸ್ಪೀಡ್ ಗೇರ್ ಬಾಕ್ಸ್ ಕೂಡಾ ಇರಲಿದೆ.
ಇನ್ನು ಇಂಡಿಯನ್ ಡಾರ್ಕ್ ಹಾರ್ಸ್, ಎಬಿಎಸ್, ಕ್ರೂಸ್ ಕಂಟ್ರೋಲ್, ಕೀಲೆಸ್ ಇಗ್ನಿಷನ್, ಫೆಂಡರ್, ಬ್ರೇಕ್ ಕಾಲಿಪರ್ ಕವರ್ ಮುಂತಾದ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆಯಲಿದೆ.


Click it and Unblock the Notifications








