ಬೆಂಗಳೂರಿಗೆ ಭರ್ಜರಿ ಎಂಟ್ರಿ ಕೊಟ್ಟ ಇಂಡಿಯನ್ ಮೋಟಾರುಸೈಕಲ್ಸ್
ಇಂಡಿಯನ್ ಮೋಟಾರುಸೈಕಲ್ಸ್ ದುಬಾರಿ ಬೈಕ್ ಗಳು ನಮ್ಮ ಬೆಂಗಳೂರು ನಗರವನ್ನು ಪ್ರವೇಶ ಪಡೆದಿದೆ. ಇದು ದೇಶದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಮಾರಾಟವಾಗಲಿದೆ.
ಪ್ರಸ್ತುತ ಎಲ್ಲ ಶ್ರೇಣಿಯ ಇಂಡಿಯನ್ ಮೋಟಾರುಸೈಕಲ್ಸ್ ಬೈಕ್ ಗಳು ಬೆಂಗಳೂರಿನಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ನೂತನ ಶೋ ರೂಂ ನಗರದಲ್ಲಿ ಲೋಕಾರ್ಪಣೆಯಾಗಿದೆ.

ಸಂಸ್ಥೆಯ ಫ್ಲ್ಯಾಗ್ ಶಿಪ್ ಮಾದರಿಗಳಾದ ಡಾರ್ಕ್ ಹೌಸ್, ರೋಡ್ ಮಾಸ್ಟರ್ ಮುಂತಾದ ಐಕಾನಿಕ್ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಇಂಡಿಯನ್ ಡಾರ್ಕ್ ಹೌಸ್ ಹಾಗೂ ರೋಡ್ ಮಾಸ್ಟರ್ ಅನುಕ್ರಮವಾಗಿ 21.99 ಹಾಗೂ 34.99 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಇಂಡಿಯನ್ ಡಾರ್ಕ್ ಹೌಸ್
ಇಂಡಿಯನ್ ಡಾರ್ಕ್ ಹೌಸ್ 1811 ಸಿಸಿ ಥಂಡರ್ ಸ್ಟ್ರೋಕ್ 111 ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 100 ಅಶ್ವಶಕ್ತಿ (138.9 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇಂಡಿಯನ್ ಡಾರ್ಕ್ ಹೌಸ್ ಮಾದರಿಯಲ್ಲಿ ಎಬಿಎಸ್, ಕೀಲೆಸ್ ಸ್ಟಾರ್ಟ್, ಕ್ರೂಸ್ ಕಂಟ್ರೋಲ್, ವಿನಿಲ್ ಸೀಟು, ಅಲ್ಯೂಮಿನಿಯಂ ಫ್ರೋಮ್ ಮತ್ತು ಇಂಟೇಗ್ರೇಟಡ್ ಏರ್ ಬಾಕ್ಸ್ ಮುಂತಾದ ಸೌಲಭ್ಯಗಳಿರಲಿದೆ.

ಇನ್ನೊಂದೆಡೆ ಸಂಸ್ಥೆಯ ಮಗದೊಂದು ಫ್ಯಾಗ್ ಶಿಪ್ ಮಾದರಿಯಾಗಿರುವ ರೋಡ್ ಮಾಸ್ಟರ್ ಸಹ ಡಾರ್ಕ್ ಹೌಸ್ ಗೆ ಸಮಾನವಾದ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇವೆರಡು ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಅಲ್ಟಿಮೇಟ್ ಕ್ರೂಸರ್ ಮೋಟಾರುಸೈಕಲ್ ಆಗಿರುವ ರೋಡ್ ಮಾಸ್ಟರ್ ನಲ್ಲೂ ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್, ಹೋರಿಜನ್ ಪವರ್ ವಿಂಡ್ ಶೀಲ್ಡ್, ಟೈರ್ ಪ್ರೆಶರ್ ಮಾನಿಟರಿಂಗ್, ರಿಮೋಟ್ ಲಾಕಿಂಗ್ ಟ್ರಂಕ್, ಸ್ಯಾಡಲ್ ಬ್ಯಾಗ್, ಟ್ಯಾನ್ ಲೆಥರ್ ಸೀಟು, ಕ್ರೂಸ್ ಕಂಟ್ರೋ ಮತ್ತು ಎಬಿಎಸ್ ವ್ಯವಸ್ಥೆಗಳು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ರೋಡ್ ಮಾಸ್ಟರ್ ಮೂರು ಬಣ್ಣಗಳಲ್ಲಿ ದೊರಕಲಿದೆ. ಅವುಗಳೆ ಥಂಡರ್ ಬ್ಲ್ಯಾಕ್, ಇಂಡಿಯನ್ ರೆಡ್ ಮತ್ತು ಇಂಡಿಯನ್ ಐವರಿ ಕ್ರೀಮ್. ಇನ್ನೊಂದೆಡೆ ಡಾರ್ಕ್ ಹೌಸ್ ಏಕ ಮಾತ್ರ ಬ್ಲ್ಯಾಕ್ ಸ್ಪೋಕ್ ಬಣ್ಣದಲ್ಲಿ ಲಭ್ಯವಿರಲಿದೆ.

ಬೆಂಗ್ಳೂರಲ್ಲಿ ಎಲ್ಲಿ ?
Exquisite Moto LLP, Prestige Nugget, # 126, Infantry road, Bangalore - 560001.


Click it and Unblock the Notifications








