ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

ಅಮೆರಿಕ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Indian Motorcycle ತನ್ನ ಹೊಸ 2022ರ Chief lineup ಬೈಕ್‌ಗಳನ್ನು ಬಿಡುಗಡೆಗೊಳಿಸಿವೆ. ಈ Indian Chief lineup ಮಾದರಿಗಳ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.20.75 ಲಕ್ಷಗಳಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

Indian Chief lineup ನಲ್ಲಿ ಡಾರ್ಕ್ ಹಾರ್ಸ್, ಇಂಡಿಯನ್ ಚೀಫ್ ಬಬ್ಬರ್ ಡಾರ್ಕ್ ಹಾರ್ಸ್ ಮತ್ತು ಇಂಡಿಯನ್ ಸೂಪರ್ ಚೀಫ್ ಲಿಮಿಟೆಡ್ ಎಂಬ ಮೂರು ಬೈಕ್‌ಗಳನ್ನು ಒಳಗೊಂಡಿದೆ. ಹೊಸ Chief lineup ಮಾದರಿಗಳು ಕ್ಲಾಸಿಕ್ ಸ್ಟೀಲ್ ವೆಲ್ಡ್ ಟ್ಯೂಬ್ ಫ್ರೇಮ್ ಅನ್ನು ಆಧರಿಸಿದೆ, ಇದು ಕ್ರಿಯಾತ್ಮಕ ಮತ್ತು ಸುಲಭ ನಿರ್ವಹಣಾ ಸಾಮರ್ಥ್ಯಗಳನ್ನು ನೀಡುತ್ತದೆ. ಇನ್ನು ಹೊಸ ಚೀಫ್ ಮತ್ತು ಚೀಫ್ ಬಾಬರ್ ಡಾರ್ಕ್ ಹಾರ್ಸ್ ಮಾದರಿಗಳು ಪ್ರೀಮಿಯಂ ಗ್ಲೋಸ್ ಬ್ಲಾಕ್ ಫಿನಿಶ್‌ಗಳನ್ನು ಪಡೆದರೆ, ಸೂಪರ್ ಚೀಫ್ ಲಿಮಿಟೆಡ್ ಅನ್ನು ಕ್ರೋಮ್‌ನ ಪ್ರೀಮಿಯಂ ಶೇಡ್‌ನಲ್ಲಿ ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

Indian Chief lineup ಬೈಕ್‌ಗಳು 15.1-ಲೀಟರ್ ಇಂಧನ ಟ್ಯಾಂಕ್, ಬಾಬ್ಡ್ ರಿಯರ್ ಫೆಂಡರ್, ಡ್ಯುಯಲ್ ಔಟ್‌ಬೋರ್ಡ್ ಪ್ರಿಲೋಡ್-ಹೊಂದಾಣಿಕೆ ಹಿಂಭಾಗದ ಶಾಕ್ ಗಳು, ಡ್ಯುಯಲ್ ಎಕ್ಸಾಸ್ಟ್, ಎಲ್ಇಡಿ ಲೈಟಿಂಗ್, ಕೀಲೆಸ್ ಇಗ್ನಿಷನ್ ಮತ್ತು ಪಿರೆಲ್ಲಿ ನೈಟ್ ಡ್ರ್ಯಾಗನ್ ಟೈರ್‌ಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯದ ಜೊತೆಗೆ ಈ ಬೈಕ್‌ಗಳು ಸ್ಪೋರ್ಟ್ಸ್, ಸ್ಟ್ಯಾಂಡರ್ಡ್ ಮತ್ತು ಟೂರ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿವೆ. ಇನ್ನು ಈ ಮೂರು ಮಾದರಿಗಳು 101 ಎಂಎಂ ರೌಂಡ್ ಟಚ್ ಸ್ಕ್ರೀನ್ 'ರೈಡ್ ಕಮಾಂಡ್' ಸಿಸ್ಟಂ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

ಇದನ್ನು ಸ್ವಿಚ್ ಗೇರ್ ಮೂಲಕ ಅಥವಾ ಡಿಜಿಟಲ್ ಐಪಿಎಸ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಮೂಲಕ ಕಂಟ್ರೋಲ್ ಮಾಡಬಹುದು. ಈ ಸಿಸ್ಟಂ ಎರಡು ವಿಭಿನ್ನ ಗೇಜ್ ಕಾನ್ಫಿಗರೇಶನ್‌ಗಳೊಂದಿಗೆ ನೀಡುತ್ತದೆ. ಇದು ಬೈಕ್ ಮಾಹಿತಿ, ರೈಡ್ ಡೇಟಾ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮಾದಹಿತಿಗಳನ್ನು ನೀಡುತ್ತದೆ. ಈ ಸಿಸ್ಟಂ ಅನ್ನು ಬ್ಲೂಟೂತ್ ಅಥವಾ ಯುಎಸ್‌ಬಿ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದು.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

ಒಮ್ಮೆ ಸ್ಮಾರ್ಟ್‌ಫೋನ್‌ಗೆ ಸಂಪರ್ಕಗೊಂಡ ನಂತರ, ಸಿಸ್ಟಂ ಫೋನ್ ಮಾಹಿತಿ, ಇತ್ತೀಚಿನ ಕರೆಗಳು, ಸಂಪರ್ಕಗಳು, ನಂಬರ್ ಪ್ಯಾಡ್ ಮತ್ತು ಟೆಸ್ಟ್ ಮೆಸೇಜ್ ಅನ್ನು ನೊಡಬಹುದು, ಈ ರೀತಿಯ ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿದೆ,

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

Indian Chief lineup ನಲ್ಲಿರುವ ಎಲ್ಲಾ ಮೂರು ಬೈಕ್‌ಗಳು ಸ್ಟೀಲ್-ಟ್ಯೂಬ್ ಫ್ರೇಮ್ ಅನ್ನು ಬಳಸುತ್ತವೆ. ಇನ್ನು ಈ ಬೈಕ್ ಗಳಲ್ಲಿ 1,890 ಸಿಸಿ, ಟ್ವಿನ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 3,200rpm ನಲ್ಲಿ 162Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಮೋಟಾರ್ ಸಹ ಹಿಂದಿನ ಸಿಲಿಂಡರ್ ನಿಷ್ಕ್ರಿಯಗೊಳಿಸುವ ಕಾರ್ಯವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

ಬೆಲೆ ಘೋಷಣೆಯ ಬಳಿಕ ಪೋಲಾರಿಸ್ ಇಂಡಿಯಾ ಪ್ರೈ. ಲಿಮಿಟೆಡ್, ಕಂಟ್ರಿ ಮ್ಯಾನೇಜರ್ ಆದ ಲಲಿತ್ ಶರ್ಮಾ ಅವರು ಮಾತನಾಡಿ, ಚೀಫ್ ಒಂದು ಜನಪ್ರಿಯ ಬ್ರಾಂಡ್ ಆಗಿದ್ದು ಅದು ಅದ್ಭುತ ಇತಿಹಾಸವನ್ನು ಹೊಂದಿದೆ. ಪ್ರಪಂಚದಾದ್ಯಂತ ಈ ಬೈಕ್ ಗಳಿಗೆ ಅಭಿಮಾನಿಗಳಿವೆ. ಈ ಬ್ರಾಂಡ್‌ನ 100ನೇ ವಾರ್ಷಿಕೋತ್ಸವದ ಅಂಗವಾಗಿ, ನಾವು ಇಂದು ಮೋಟಾರ್‌ಸೈಕಲ್‌ಗಳ ಹೊಸ Chief ರೇಂಜ್ ಪ್ರಾರಂಭಿಸಿದ್ದೇವೆ.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

Indian Chief lineup ಬೈಕ್ ಗಳು ಭಾರತದ ಪ್ರತಿಯೊಬ್ಬ ಕ್ರೂಸರ್ ಉತ್ಸಾಹಿಗಳನ್ನು ಅವರ ತಾಂತ್ರಿಕ ಸಾಮರ್ಥ್ಯ ಮತ್ತು ಆಧುನಿಕ ಕಾರ್ಯಕ್ಷಮತೆಯಿಂದ ರೋಮಾಂಚನಗೊಳಿಸುತ್ತದೆ ಎಂದು ಹೇಳಿದರು.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

ಇನ್ನು Indian Motorcycle ಕಂಪನಿಯು ತನ್ನ 2021ರ lineup ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಲಾಗಿತ್ತು. ಈ ಜನಪ್ರಿಯ ಮಾದರಿಗಳನ್ನು ಅಪ್ಡೇಟ್ ಮಾಡಿ ಭಾರತದಲ್ಲಿ ಪರಿಚಯಿಸಿತು. ಇದರಲ್ಲಿ 2021ರ ಸ್ಕೌಂಟ್ ಸರಣಿಯಲ್ಲಿನ ನವೀಕರಣಗಳು ರಿಫ್ರೆಶ್ ಮಾಡಿದ ಹೊಸ ಬಣ್ಣದ ಬಣ್ಣಗಳನ್ನು ಒಳಗೊಂಡಿರುತ್ತವೆ. ಸ್ಕೌಟ್ ಮಾದರಿಯನ್ನು ಬಾಬರ್, ಸ್ಟ್ಯಾಂಡರ್ಡ್ ಮತ್ತು ಬಾಬರ್ ಟ್ವೆಂಟಿ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

ಸ್ಕೌಟ್ ಬೈಕ್ ಥಂಡರ್ ಬ್ಲ್ಯಾಕ್, ಡೀಪ್ ವಾಟರ್ ಮೆಟಾಲಿಕ್, ವೈಟ್ ಸ್ಮೋಕ್, ಮರೂನ್ ಮೆಟಾಲಿಕ್ ಓವರ್ ಕ್ರಿಮ್ಸನ್ ಮೆಟಾಲಿಕ್, ಬ್ಲೂ ಸ್ಲೇಟ್ ಮೆಟಾಲಿಕ್/ಕೋಬ್ರಾ ಸಿಲ್ವರ್, ಮತ್ತು ಸ್ಟೆಲ್ತ್ ಗ್ರೇ/ಥಂಡರ್ ಬ್ಲ್ಯಾಕ್ ಎಂಬ ಬಣ್ಣಗಳಲಿ ಲಭ್ಯವಿರುತ್ತದೆ. ಸ್ಕೌಟ್ ಲೈನ್-ಅಪ್ ವಿ-ಟ್ವಿನ್ 1133 ಸಿಸಿ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 5600 ಆರ್ಪಿಎಂನಲ್ಲಿ 97 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಆರು-ವೇಗದ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ವಿಂಟೇಜ್ ಮಾದರಿಯು ಕ್ರಿಮ್ಸನ್ ಮೆಟಾಲಿಕ್ ಮತ್ತು ಡೀಪ್ ವಾಟರ್/ಡರ್ಟ್ ಟ್ರ್ಯಾಕ್ ಟ್ಯಾನ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಹುನಿರೀಕ್ಷಿತ 2022ರ Indian Chief lineup

Indian Chief lineup ಬೈಕ್ ಗಳು 1626 ಎಂಎಂ ಶಾರ್ಟ್ ವೀಲ್ ಬೇಸ್, ಕಡಿಮೆ ಸೀಟ್ ಎತ್ತರ 662 ಎಂಎಂ ಮತ್ತು 304 ಕೆಜಿಗಿಂತ ಕಡಿಮೆ ಇರುವ ಭಾರತೀಯ ಚೀಫ್ ಲೈನ್ ಅಪ್ ಹೆಚ್ಚಿನ ಸವಾರರಿಗೆ ಆತ್ಮವಿಶ್ವಾಸ ತುಂಬುವ ಸಾಧ್ಯತೆಯಿದೆ. ಈ ಬೈಕ್‌ಗಳು 46 ಎಂಎಂ ಫ್ರಂಟ್ ಫೋರ್ಕ್‌ಗಳು 132 ಎಂಎಂ ಟ್ರ್ಯಾವೆಲ್, 28.5 ಡಿಗ್ರಿ ಲೀನ ಆಂಗಲ್ ಮತ್ತು ಆರಾಮದಾಯಕ ಏರೋಗಾಮಿಕ್ ಆರಾಮದಾಯಕ ಕ್ರೂಸಿಂಗ್ ಆಗಿದೆ,

Most Read Articles

Kannada
English summary
New indian chief lineup 2022 launched in india prices features engine details
Story first published: Friday, August 27, 2021, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X