ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

ಅಮೆರಿಕ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Indian Motorcycle ಶೀಘ್ರದಲ್ಲೇ ತಮ್ಮ ಹೊಸ ಸುಧಾರಿತ ಬೈಕ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಹಕರಿಗೆ ಕಸ್ಟಮೈಸ್ ಮಾಡಬಹುದಾದ ಆಕ್ಸೆಸರೀಸ್‌ಗಳ ಆಯ್ಕೆಗಳನ್ನು ಕೂಡ ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

Indian Motorcycle ಕಂಪನಿಯು ಹೊಸ Chief line-up ಅನ್ನು ಇದೇ ತಿಂಗಳ 27ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ Indian Chief line-up ನಲ್ಲಿ ಮೂರು ಮಾದರಿಗಳನ್ನು ಒಳಗೊಂಡಿದೆ. ಈ ಮೂರು ಮಾದರಿಗಳು ಇಂಡಿಯನ್ ಚೀಫ್ ಡಾರ್ಕ್ ಹಾರ್ಸ್, ಚೀಫ್ ಬಾಬರ್ ಡಾರ್ಕ್ ಹಾರ್ಸ್ ಹಾಗೂ ಸೂಪರ್ ಚೀಫ್ ಲಿಮಿಟೆಡ್ ಬೈಕುಗಳಾಗಿವೆ. ಈ ಮೂರು ಮಾದರಿಗಳು ದೊಡ್ಡ ಥಂಡರ್ ಸ್ಟ್ರೋಕ್ 116 ಮೋಟರ್ ಗಳನ್ನು ಒಳಗೊಂಡಿವೆ. Chief line-up ಬೈಕ್‌ಗಳ ಖರೀದಿಗಾಗಿ ಬುಕ್ಕಿಂಗ್ ಆರಂಭವಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

ಈ ಬೈಕ್‌ಗಳನ್ನು ಖರೀದಿಸಲು ಬಯಸುವ ಗ್ರಾಹಕರು ರೂ.3 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. Indian Chief line-up ಹೊಸ ಬೈಕ್‌ಗಳ ಆರಂಭಿಕ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ.20,75,922ಗಳಾಗಿದೆ. ಹೊಸ ಬೈಕುಗಳಲ್ಲಿ ವಿಭಿನ್ನ ವಿನ್ಯಾಸ, ಫೀಚರ್'ಗಳ ಜೊತೆಗೆ ಹಲವಾರು ತಾಂತ್ರಿಕ ಅಪ್‍ಡೇಟ್‌ಗಳನ್ನು ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

ಹೊಸ ಬೈಕ್‌ಗಳ ಜೊತೆಗೆ ಒರಿಜಿನಲ್ ಬಿಡಿಭಾಗಗಳನ್ನು ಸಹ ನಿಡುವುದರಿಂದ ಗ್ರಾಹಕರು ವಿಭಿನ್ನ ಸವಾರಿ ಅನುಭವವನ್ನು ಪಡೆಯಬಹುದಾಗಿದೆ. Indian Chief line-up ಹೊಸ ಬೈಕ್ 64 ಇಂಚಿನ ಶಾರ್ಟ್ ವ್ಹೀಲ್ ಬೇಸ್ ಹಾಗೂ 26 ಇಂಚಿನ ಎತ್ತರದ ಸೀಟ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

Chief line-up ನಲ್ಲಿರುವ ಬೈಕ್ 46 ಎಂಎಂ ಫ್ರಂಟ್ ಅಡ್ಜಸ್ಟಬಲ್ ಫೋರ್ಕ್ ಹೊಂದಿದೆ. ಈ ಬೈಕಿನಲ್ಲಿ 28.5 ಡಿಗ್ರಿ ಲೀನ್ ಆಂಗಲ್ ನೀಡಲಾಗಿದೆ. ಸವಾರನ ಅನುಕೂಲಕ್ಕಾಗಿ ಈ ಬೈಕಿನಲ್ಲಿ ವಿವಿಧ ಕಸ್ಟಮೈಸ್ ಆಯ್ಕೆಗಳನ್ನು ಕೂಡ ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

ಹೊಸ Indian Chief line-up ಬೈಕ್‌ಗಳು ಹಳೆಯ ಮಾದರಿಯಲ್ಲಿರುವಂತಹ ಸಾಂಪ್ರದಾಯಿಕ ವಿ-ಟ್ವಿನ್ ಎಂಜಿನ್‌ ಹೊಂದಿದೆ. ಈ ಬೈಕ್ ಪವರ್ ಉತ್ಪಾದನೆ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ದೇಶಿಯ ಮಾರುಕಟ್ಟೆಯಲ್ಲಿರುವ ಇತರ ಕಂಪನಿಯ ಬೈಕ್‌ಗಳಿಗೆ ಕಠಿಣ ಪೈಪೋಟಿ ನೀಡಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

ಈ ಐಕಾನಿಕ್ ಬೈಕ್‌ಗಳು ಕ್ರೂಸ್ ಕಂಟ್ರೋಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್'ನಂತಹ ಫೀಚರ್ಸ್ ಗಳನ್ನು ಹೊಂದಿರಲಿವೆ. ಭಾರತದಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಕಂಪನಿಗೆ ಬೈಕ್‌ಗಳಿಗೆ ಇಂಗ್ಲೆಂಡ್ ಮೂಲದ ಟ್ರಯಂಫ್ ಕಂಪನಿಯ ಬೈಕ್‌ಗಳು ನೇರ ಪ್ರತಿಸ್ಪರ್ಧಿಗಳಾಗಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

Indian Motorcycle ಕಂಪನಿಯು 2022ರ ಇಂಡಿಯನ್ ಚೀಫ್ ಬಾಬರ್ ಡಾರ್ಕ್ ಹಾರ್ಸ್‌ ಬೈಕಿನ ಟೀಸರ್ ಚಿತ್ರವನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿತು. ಈ ಚಿತ್ರದಲ್ಲಿ ಈ ಬೈಕಿನ ವಿ-ಟ್ವಿನ್ ಎಂಜಿನ್, ಫ್ಯೂಯಲ್ ಟ್ಯಾಂಕ್ ಮತ್ತು ಹಿಂಭಾಗದ ಕೌಲ್‌ನ ಲುಕ್ ಅನ್ನು ಬಹಿರಂಗಪಡಿಸಿದೆ. ಇದರೊಂದಿಗೆ ಈ ಹೊಸ ಬೈಕಿನ ರಿಯರ್‌ವ್ಯೂ ಮೀರರ್ಸ್, ಹೆಡ್‌ಲೈಟ್ ಮಾಸ್ಕ್, ಫ್ರಂಟ್ ಫೆಂಡರ್ ಮತ್ತು ಟರ್ನ್ ಸಿಗ್ನಲ್‌ಗಳು ಟೀಸರ್ ಚಿತ್ರದಲ್ಲಿ ಕಾಣಸಿಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

Indian Motorcycle ಕಂಪನಿಯು ತನ್ನ 2021ರ line-up ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಲಾಗಿತ್ತು. ಈ ಜನಪ್ರಿಯ ಮಾದರಿಗಳನ್ನು ಅಪ್ಡೇಟ್ ಮಾಡಿ ಭಾರತದಲ್ಲಿ ಪರಿಚಯಿಸಿತು. ಇದರಲ್ಲಿ 2021ರ ಸ್ಕೌಂಟ್ ಸರಣಿಯಲ್ಲಿನ ನವೀಕರಣಗಳು ರಿಫ್ರೆಶ್ ಮಾಡಿದ ಹೊಸ ಬಣ್ಣದ ಬಣ್ಣಗಳನ್ನು ಒಳಗೊಂಡಿರುತ್ತವೆ. ಸ್ಕೌಟ್ ಮಾದರಿಯನ್ನು ಬಾಬರ್, ಸ್ಟ್ಯಾಂಡರ್ಡ್ ಮತ್ತು ಬಾಬರ್ ಟ್ವೆಂಟಿ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

ಸ್ಕೌಟ್ ಬೈಕ್ ಥಂಡರ್ ಬ್ಲ್ಯಾಕ್, ಡೀಪ್ ವಾಟರ್ ಮೆಟಾಲಿಕ್, ವೈಟ್ ಸ್ಮೋಕ್, ಮರೂನ್ ಮೆಟಾಲಿಕ್ ಓವರ್ ಕ್ರಿಮ್ಸನ್ ಮೆಟಾಲಿಕ್, ಬ್ಲೂ ಸ್ಲೇಟ್ ಮೆಟಾಲಿಕ್/ಕೋಬ್ರಾ ಸಿಲ್ವರ್, ಮತ್ತು ಸ್ಟೆಲ್ತ್ ಗ್ರೇ/ಥಂಡರ್ ಬ್ಲ್ಯಾಕ್ ಎಂಬ ಬಣ್ಣಗಳಲಿ ಲಭ್ಯವಿರುತ್ತದೆ. ಸ್ಕೌಟ್ ಲೈನ್-ಅಪ್ ವಿ-ಟ್ವಿನ್ 1133 ಸಿಸಿ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 5600 ಆರ್ಪಿಎಂನಲ್ಲಿ 97 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಆರು-ವೇಗದ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

ಇನ್ನು ವಿಂಟೇಜ್ ಮಾದರಿಯು ಕ್ರಿಮ್ಸನ್ ಮೆಟಾಲಿಕ್ ಮತ್ತು ಡೀಪ್ ವಾಟರ್/ಡರ್ಟ್ ಟ್ರ್ಯಾಕ್ ಟ್ಯಾನ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ವಿಂಟೇಜ್ ಡಾರ್ಕ್ ಹಾರ್ಸ್ ಒಂದೇ ಥಂಡರ್ ಬ್ಲ್ಯಾಕ್ ಸ್ಮೋಕ್ ಬಣ್ಣದಲ್ಲಿ ಲಭ್ಯವಿದೆ. ಇದರೊಂದಿಗೆ ಇಂಡಿಯನ್ ಸ್ಪ್ರಿಂಗ್‌ಫೀಲ್ಡ್ ಲೈನ್‌ಅಪ್‌ ಬೈಕ್‌ಗಳು ಸ್ಟ್ಯಾಂಡರ್ಡ್ ಮತ್ತು ಡಾರ್ಕ್ ಹಾರ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2022ರ Indian Chief line-up

Indian Chief line-up ಬೈಕ್‌ಗಳು ಬಿಡುಗಡೆಯಾದ ನಂತರ ಅಮೆರಿಕಾ ಮೂಲದ ಇಂಡಿಯನ್ ಮೋಟಾರ್‌ಸೈಕಲ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ಇತರ ಕ್ರೂಸರ್ ಬೈಕ್ ಕಂಪನಿಗಳಿಗೆ ಯಾವ ರೀತಿಯಲ್ಲಿ ಪೈಪೋಟಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಬಹುನಿರೀಕ್ಷಿತ Indian Chief line-up ಬೈಕ್‌ಗಳು ಇದೇ ತಿಂಗಳ 27ರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

More from DriveSpark

Article Published On: Monday, August 23, 2021, 10:07 [IST]
English summary
New indian chief line up 2022 launch details revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+