ಅತಿ ಶೀಘ್ರದಲ್ಲೇ ಕವಾಸಕಿ ಅಡ್ವೆಂಚರ್ ಬೈಕ್ ಭಾರತಕ್ಕೆ

By Nagaraja

ಅತಿ ಶೀಘ್ರದಲ್ಲೇ ಕವಾಸಕಿ ಮಗದೊಂದು ಅಡ್ವೆಂಚರ್ ಬೈಕ್ ಭಾರತಕ್ಕೆ ಆಗಮನವಾಗಲಿದೆ. ಬಲ್ಲ ಮೂಲಗಳ ಪ್ರಕಾರ ಕವಾಸಕಿ ವೆರ್ಸಿಸ್ 650 ಬೈಕ್ ಮುಂಬರುವ ಡಿಸೆಂಬರ್ 24ರಂದು ಎಂಟ್ರಿ ಕೊಡಲಿದೆ.

ಕವಾಸಕಿ ಸಾಹಸ ಬೈಕ್ ವಾಣಿಜ್ಯ ನಗರಿ ಮುಂಬೈನಲ್ಲಿ ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಕವಾಸಕಿ ವಿವಿಧ ಶ್ರೇಣಿಯ ಬೈಕ್ ಗಳು ಪ್ರದರ್ಶನಗೊಳ್ಳಲಿದೆ.

ಕವಾಸಕಿ ಅಡ್ವೆಂಚರ್

ಪ್ರಸ್ತುತ ಕವಾಸಕಿ ವೆರ್ಸಿಸ್ 1000 ಬೈಕ್ ಭಾರತ ಮಾರುಕಟ್ಟೆಯಲ್ಲಿದೆ. ಈಗ ಬರಲಿರುವ ಅಡ್ವೆಂಜರ್ ಮತ್ತಷ್ಟು ಕ್ರೀಡಾ ವಾಹನ ಪ್ರೇಮಿಗಳಿಗೆ ಅದ್ಭುತ ಚಾಲನಾ ಅನುಭವ ನೀಡಲಿದೆ.

ಕವಾಸಕಿ ವೆರ್ಸಿಸ್ 650 ಒಂದು ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕಾಗಿದ್ದು, ಈಗಿರುವ ನಿಂಜಾ 650 ಹಾಗೂ ಝಡ್800 ಮಾದರಿಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ಕವಾಸಕಿ ಅಡ್ವೆಂಚರ್

649 ಸಿಸಿ ಪ್ಯಾರಲಲ್ ಟು ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಕವಾಸಕಿ 64 ಎನ್‌ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮುಖಾಂತರ ಕವಾಸಕಿ ಅಡ್ವೆಂಚರ್ ಬೈಕ್ ಭಾರತ ಪ್ರವೇಶ ಪಡೆಯಲಿದೆ. ಇದರಲ್ಲಿ ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

Article Published On: Monday, December 21, 2015, 16:58 [IST]
English summary
Kawasaki Versys 650 Adventure Motorcycle India Launch Most Likely On Dec 24
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+