ಕವಾಸಕಿ ಅಡ್ವೆಂಚರ್ ಟೂರರ್ ಬೈಕ್ ಭಾರತದಲ್ಲಿ ಬಿಡುಗಡೆ

By Nagaraja

ಜಪಾನ್ ಮೂಲದ ಇಂಡಿಯಾ ಕವಾಸಕಿ ಮೋಟಾರ್ಸ್ (ಕೆಐಎಂ) ದೇಶದಲ್ಲಿ ಅತಿ ನೂತನ ಕವಾಸಕಿ ವೆರ್ಸೆಸ್ 650 ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 6.60 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)

ಇದು ವೆರ್ಸೆಸ್ ಶ್ರೇಣಿಯಲ್ಲಿ ಕವಾಸಕಿ ಬಿಡುಗಡೆ ಮಾಡುತ್ತಿರುವ ಎರಡನೇ ಬೈಕಾಗಿದೆ. ಈ ಮೊದಲು ವರ್ಷಾರಂಭದಲ್ಲಿ ಕವಾಸಕಿ ವೆರ್ಸೆಸ್ 1000 ಮೋಟಾರ್ ಸೈಕಲ್ ಬಿಡುಗಡೆ ಮಾಡಿತ್ತು.

ಕವಾಸಕಿ ಅಡ್ವೆಂಚರ್ ಟೂರರ್ ಬೈಕ್ ಭಾರತದಲ್ಲಿ ಬಿಡುಗಡೆ

ಇದೇ ಸಂದರ್ಭದಲ್ಲಿ ಕವಾಸಕಿ ಕೆಎಲ್‌ಎಕ್ಸ್ 110 ಮಾದರಿಯನ್ನು ಕವಾಸಕಿ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 2.65 ಲಕ್ಷ ರು.ಗಳಾಗಿರಲಿದೆ.

ಕವಾಸಕಿ ಅಡ್ವೆಂಚರ್ ಟೂರರ್ ಬೈಕ್ ಭಾರತದಲ್ಲಿ ಬಿಡುಗಡೆ

ನೂತನ ಕವಾಸಕಿ ವೆರ್ಸೆಸ್ 650 ಬೈಕ್ 649 ಸಿಸಿ ಇನ್ ಲೈನ್ ಟ್ವಿನ್, ಲಿಕ್ವಿಡ್ ಕೂಲ್ಡ್ ಡಿಒಎಚ್‌ಸಿ ಫ್ಲೂಯಲ್ ಇಂಜೆಕ್ಷನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 64.7 ಎನ್‌ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಕವಾಸಕಿ ಅಡ್ವೆಂಚರ್ ಟೂರರ್ ಬೈಕ್ ಭಾರತದಲ್ಲಿ ಬಿಡುಗಡೆ

ಪ್ರಸ್ತುತ ಅಡ್ವೆಂಚರ್ ಟೂರರ್ ಬೈಕ್ ಕಂಪ್ಲೀಟ್ ನೌಕ್ಡ್ ಡೌನ್ ಮುಖಾಂತರ ದೇಶವನ್ನು ತಲುಪಲಿದೆ. ಅಲ್ಲದೆ ನಿಂಜಾ 650 ಸ್ಪೋರ್ಟ್ಸ್ ಟೂರರ್ ಹಾಗೂ ಇಆರ್6ಎನ್ ಸ್ಟ್ರೀಟ್ ಫೈಟರ್ ಜೊತೆಗೂ ಚಾಸೀ ಹಂಚಿಕೊಂಡಿದೆ.

ಕವಾಸಕಿ ಅಡ್ವೆಂಚರ್ ಟೂರರ್ ಬೈಕ್ ಭಾರತದಲ್ಲಿ ಬಿಡುಗಡೆ

ಬಜಾಜ್ ಆಟೋದ ಅಕ್ರುದಿ ಘಟಕದಲ್ಲಿ ನೂತನ ಕವಾಸಕಿ ಬೈಕ್ ಜೋಡಣೆಯಾಗಲಿದೆ. ಈ ಮೂಲಕ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲಿದೆ. ಇದೇ ಘಟಕದಲ್ಲಿ ಕವಾಸಕಿ ಝಡ್250, ನಿಂಜಾ 300, ನಿಂಜಾ 650 ಹಾಗೂ ಇಆರ್6ಎನ್ ಜೋಡಣೆಯಾಗುತ್ತಿದೆ.

ಕವಾಸಕಿ ಅಡ್ವೆಂಚರ್ ಟೂರರ್ ಬೈಕ್ ಭಾರತದಲ್ಲಿ ಬಿಡುಗಡೆ

ಇದು ಪ್ರಮುಖವಾಗಿಯೂ ಡಿಎಸ್ ಕೆ ಬನೆಲ್ಲಿ ಟಿಎನ್ ಟಿ 600 ಜಿಟಿ ಮತ್ತು ಹೋಂಡಾ ಸಿಬಿಆರ್650ಎಫ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Article Published On: Saturday, December 26, 2015, 14:40 [IST]
English summary
Kawasaki Launches Versys 650 Adventure Tourer For Rs 6.6 Lakh In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+