ಬೆಂಗಳೂರಿಗೆ ಭರ್ಜರಿ ಎಂಟ್ರಿ ಕೊಟ್ಟ ಮಹೀಂದ್ರ ಗಸ್ಟೊ ಸ್ಕೂಟರ್

By Nagaraja

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್, ಬೆಂಗಳೂರಿಗೆ ನೂತನ ಗಸ್ಟೊ ಸ್ಕೂಟರನ್ನು ಪರಿಚಯಿಸಿದೆ.

ಮಹೀಂದ್ರ ಗಸ್ಟೊ ಸಂಪೂರ್ಣ ಚಾಲನಾ ಅನುಭವ ಓದಿ

ಎಚ್‌ಎಕ್ಸ್ ಹಾಗೂ ವಿಎಕ್ಸ್‌ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ಗಸ್ಟೊ ಮಾರುಕಟ್ಟೆ ಪ್ರವೇಶ ಪಡೆದಿದ್ದು, ವಿಶೇಷ ಪರಿಚಯಾತ್ಮಕ ದರಗಳೊಂದಿಗೆ ಬಿಡುಗಡೆ ಮಾಡಲಾಗಿದೆ.

mahindra gusto

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
  • ಮಹೀಂದ್ರ ಗಸ್ಟೊ ಎಚ್‌ಎಕ್ಸ್ - 48,400 ರು.
  • ಮಹೀಂದ್ರ ಗಸ್ಟೊ ವಿಎಕ್ಸ್ - 50,400 ರು.

ನಿಮ್ಮ ಮಾಹಿತಿಗಾಗಿ, ಗಸ್ಟೊ ಸ್ಕೂಟರ್ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲೇ ಉತ್ತರ ಹಾಗೂ ಪಶ್ಚಿಮ ಭಾರತವನ್ನು ತಲುಪಿತ್ತು. ಇದೀಗ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದು, ಮೊದಲು ಬೆಂಗಳೂರು ನಗರದ ಬಾಗಿಲು ತೆರೆದುಕೊಂಡಿದೆ. ಇಟಲಿ ಶೈಲಿಯ ತಾಂತ್ರಿಕವಾಗಿ ಮುಂದುವರಿದ ಗಸ್ಟೊ ಸ್ಕೂಟರನ್ನು ಪುಣೆಯಲ್ಲಿ ಮಹೀಂದ್ರ ಟು ವೀಲರ್ಸ್ ಆರ್ ಆಂಡ್ ಡಿ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ವೈಶಿಷ್ಟ್ಯಗಳು

  • ಎತ್ತರ ಹೊಂದಾಣಿಸಬಹುದಾದ ಸೀಟು,
  • ನಾವೀನ್ಯತೆ,
  • ರಿಮೋಟ್ ಪ್ಲಿಪ್ ಕೀ,
  • ಫೈಂಡ್ ಮಿ ಲ್ಯಾಂಪ್,
  • ಗೈಡ್ ಲ್ಯಾಂಪ್,
  • ಶುಭ್ರವಾದ ಹೆಡ್ ಲ್ಯಾಂಪ್,
  • ಎಲ್‌ಇಡಿ ಪೈಲಟ್ ಲ್ಯಾಂಪ್,
  • ಸುಲಭವಾದ ಫ್ರಂಟ್ ಕಿಕ್,
  • ಸ್ಟೋರೆಜ್ ಜಾಗ,
  • ಇಟಲಿಯ ಶೈಲಿ

mahindra gusto bengaluru launch
ನಿರ್ವಹಣೆ
ಅಂದ ಹಾಗೆ ಮಹೀಂದ್ರ ಗಸ್ಟೊ ಸ್ಕೂಟರ್ 109.6 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ 4 ಸ್ಟ್ರೋಮ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು (ಎಂ-ಟೆಕ್ ಎಂಜಿನ್ ತಂತ್ರಜ್ಞಾನ), 8 ಅಶ್ವಶಕ್ತಿ (8.5 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 10.3 ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಮೈಲೇಜ್
ಇನ್ನು ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಹೊಸ ಗಸ್ಟೊ ಪ್ರತಿ ಲೀಟರ್‌ಗೆ 63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

mahindra gusto

ಚಾಲನಾ ಗುಣಮಟ್ಟತೆ
  • 12 ಇಂಚಿನ ಅಲಾಯ್ ವೀಲ್,
  • ಫ್ರಂಟ್ ಟೆಲಿಸ್ಕಾಪಿಕ್ ಸಸ್ಪೆಷನ್,
  • ಲಾಂಗ್ ಸ್ಟ್ರೋಕ್ ಹೈಡ್ರಾಲಿಕ್ ರಿಯರ್ ಸಸ್ಪೆಷನ್,
  • ಗರಿಷ್ಠ ಗ್ರೌಂಡ್ ಕ್ಲಿಯರನ್ಸ್,
  • ಟ್ಯೂಬ್ ಲೆಸ್ ಚಕ್ರ

ಎಂಜಿನ್: 109.6 ಸಿಸಿ, 4 ಸ್ಟ್ರೋಕ್, ಏರ್ ಕೂಲ್ಡ್
ಪವರ್: 8 ಅಶ್ವಶಕ್ತಿ
ಟಾರ್ಕ್: 8.5 ಎನ್‌ಎಂ
ಗರಿಷ್ಠ ವೇಗತೆ: 80 km/h
ಟ್ರಾನ್ಸ್‌ಮಿಷನ್: ಸಿವಿಟಿ
ಮೈಲೇಜ್: 63 km/l
ಫ್ರೇಮ್: ಅಂಡರ್ ಬಾರ್ಡ್ ಟೈಪ್ (ಸ್ಟೀಲ್)- ಟ್ಯೂಬುಲರ್

ಸಸ್ಪೆಷನ್:
ಫ್ರಂಟ್ - ಟೆಲಿಸ್ಕಾಪಿಕ್, ಹೈಡ್ರಾಲಿಕ್ ವಿಧ
ರಿಯರ್ - ಕಾಯಿಲ್ ವಿಧ, ಹೈಡ್ರಾಲಿಕ್

ಚಕ್ರಗಳು
ಫ್ರಂಟ್ - (90/90-12), ಟ್ಯೂಬ್‌ಲೆಸ್
ರಿಯರ್ - (90/90-12), ಟ್ಯೂಬ್‌ಲೆಸ್

ಬ್ರೇಕ್:
ಫ್ರಂಟ್ - 130 mm ಡ್ರಮ್
ರಿಯರ್ - 130 mm ಡ್ರಮ್

mahindra gusto

ಆಯಾಮ (ಉದ್ದ x ಅಗಲ x ಎತ್ತರ x ವೀಲ್‌ಬೇಸ್):

1825 mm x 697 mm x 1188 mm x 1275 mm

ಚಾಲನ ಎತ್ತರ:
ವಿಎಕ್ಸ್- 770 mm or 735 mm
ಡಿಎಕ್ಸ್- 770 mm

ಗ್ರೌಂಡ್ ಕ್ಲಿಯರನ್ಸ್: 165 mm
ಇಂಧನ ಟ್ಯಾಂಕ್ ಸಾಮರ್ಥ್ಯ: 6 ಲೀಟರ್

ಬ್ಯಾಟರಿ:
ವಿಎಕ್ಸ್- 6AH, VRLA

Article Published On: Wednesday, January 7, 2015, 12:52 [IST]
English summary
Mahindra Gusto launched at Bengaluru Price, Specs, features, Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+