ಎಪ್ರಿಲ್‌ನಲ್ಲಿ ಮೊಜೊ ಎಂಟ್ರಿ; ಹೊಸ ಮಾದರಿ ಮಹೀಂದ್ರ ಗುರಿ
ಈಗಷ್ಟೇ ಕರ್ನಾಟಕದಲ್ಲಿ ಹೊಸ ಗಸ್ಟೊ ಸ್ಕೂಟರ್ ಬಿಡುಗಡೆಗೊಳಿಸಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್, ಭವಿಷ್ಯದಲ್ಲಿ ಇನ್ನು ಆಕರ್ಷಕ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಈ ಪೈಕಿ ನಾವು ಈಗಾಗಲೇ ವರದಿ ಮಾಡಿರುವ ಮಹೀಂದ್ರ ಮೊಜೊ ಸೂಪರ್ ಬೈಕ್ ಮುಂದಿನ ಆರ್ಥಿಕ ಸಾಲಿನಲ್ಲಿ ಅಂದರೆ 2015 ಎಪ್ರಿಲ್ ತಿಂಗಳಲ್ಲಿ ದೇಶದ ಮಾರುಕಟ್ಟೆ ತಲುಪಲಿದೆ.

ಪ್ರತಿ ಆರು ತಿಂಗಳಲ್ಲಿ ಪ್ರತಿಯೊಂದು ಸೆಗ್ಮೆಂಟ್‌ನಲ್ಲೂ ಹೊಸ ಮಾದರಿ ಬಿಡುಗಡೆ ಮಾಡುವುದು ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ಟು ವೀಲರ್ಸ್ ಗುರಿಯಾಗಿದೆ.
ಅಲ್ಲದೆ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಹೊಸ ಮಾದರಿಯನ್ನು ಪರಿಚಯಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ.
2015 ಜನವರಿ 07 ಬೆಂಗಳೂರಿನಲ್ಲಿ ಬಿಡುಗಡೆಗೊಂಡಿದ್ದ ಗಸ್ಟೊ ಎರಡು ವೆರಿಯಂಟ್‌ಗಳಲ್ಲಿ (ಎಚ್‌ಎಕ್ಸ್ ಹಾಗೂ ವಿಎಕ್ಸ್) ಲಭ್ಯವಿರಲಿದೆ. ಇದರ ಬೆಲೆ ಅನುಕ್ರಮವಾಗಿ 48,400 ರು. ಹಾಗೂ 50,400 ರು.ಗಳಾಗಿರಲಿದೆ.


Click it and Unblock the Notifications








