ಗೋವಾದಲ್ಲಿ ಬೈಕ್ ಹಬ್ಬ; ಹಾರ್ಲೆ ಪ್ರೇಮಿಗಳ ಪ್ರವಾಹ
ಗೋವಾದಲ್ಲಿ ಸಾಗುತ್ತಿರುವ 2015 ಇಂಡಿಯಾ ಬೈಕ್ ವೀಕ್ ಹಬ್ಬಕ್ಕೆ ಅಮೆರಿಕದ ಐಕಾನಿಕ್ ಹಾರ್ಲೆ ಡೇವಿಡ್ಸನ್ ಮಾಲಿಕರ ಪ್ರವಾಹವೇ ಕಂಡುಬರುತ್ತಿದೆ.
ಕಳೆದ ವರ್ಷದ ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಹಾರ್ಲೆ ಮೂರನೇ ಆವೃತ್ತಿಯಲ್ಲೂ ವಿಶೇಷ ಕಾರ್ಯಕ್ರಮದ ಆಯೋಜನೆಯೊಂದಿಗೆ ಚಮತ್ಕಾರ ಮಾಡಿದೆ.

2015 ಇಂಡಿಯಾ ಬೈಕ್ ವೀಕ್ ಸಂಬಂಧ ಹಾರ್ಲೆ ಸಂಸ್ಥೆಯು ಮಾಲಿಕರಿಗಾಗಿ (H.O.G) ವಿಶೇಷ ಸಮ್ಮಿಲವನ್ನು ಏರ್ಪಡಿಸಿದೆ. ಇದರಂತೆ ದೇಶದ್ಯಾಂತ 2000ಕ್ಕಿಂತಲೂ ಹಾರ್ಲೆ ಮಾಲಿಕರು ಬೈಕ್ ವೀಕ್‌ನತ್ತ ಹೆಜ್ಜೆ ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ದೇಶದಲ್ಲಿ ಐದು ವಸಂತಗಳನ್ನು ಪೂರೈಸಿರುವ ಹಾರ್ಲೆ ಇದನ್ನು ಭರ್ಜರಿಯಾಗಿಯೇ ಆಚರಿಸಿಕೊಂಡಿದೆ. ನಿಮ್ಮ ಮಾಹಿತಿಗಾಗಿ ಹಾರ್ಲೆ ಸಂಸ್ಥೆಯು ತವರೂರಾದ ಅಮೆರಿಕ ಹೊರತುಪಡಿಸಿದರೆ ಭಾರತದಲ್ಲಿ ಘಟಕ ಹೊಂದಿದೆ.
ಇದಕ್ಕೂ ಮೊದಲು ಹಾರ್ಲೆ ಸಂಸ್ಥೆಯು ದೇಶದ್ಯಾಂತ ರಾಲಿಯನ್ನು ಏರ್ಪಡಿಸಿತ್ತು. ಇದರಂತೆ ರಾಲಿಯಲ್ಲಿ ವಿಜೇತರಿಗೆ ಬಹುಮಾನವನ್ನು ನೀಡಲಾಗುತ್ತಿದೆ.
ಅಂದ ಹಾಗೆ ಇಂಡಿಯಾ ಬೈಕ್ ವೀಕ್ 2015 ಫೆಬ್ರವರಿ 20 ಹಾಗೂ 21ರಂದು ಆಯೋಜನೆಯಾಗುತ್ತಿದೆ.


Click it and Unblock the Notifications








