ರೀಗಲ್ ರಾಪ್ಟಾರ್ 3 ಕ್ರೂಸರ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

By Nagaraja

ಕೇವಲ 25 ವರ್ಷಗಳಷ್ಟು ಮಾತ್ರ ಹಳೆಯದಾದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯೊಂದು ಮೂರು ಐಕಾನಿಕ್ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸದ್ದು ಮಾಡಿದೆ. ಹೌದು, ರೀಗಲ್ ರಾಪ್ಟರ್ ಸಂಸ್ಥೆಯು ಭಾರತದಲ್ಲಿ ಮೂರು ಕ್ರೂಸರ್ ಬ್ರಾಂಡ್ ಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ

  • ಕ್ರೂಸರ್ 350,
  • ಬೊಬರ್ 350 ಮತ್ತು
  • ಡೇಟೋನಾ 350

ಹೈದರಾಬಾದ್‌ನ ಫ್ಯಾಬ್‌ಲಸ್ ಮತ್ತು ಬಿಯಾಂಡ್ ಎಂಟರ್ ಪ್ರೈಸಸ್ ಒಡೆತನದಲ್ಲಿರುವ ಎಫ್ ಎಬಿ ಮೋಟಾರ್ಸ್ ಜೊತೆಗಾರಿಕೆಯೊಂದಿಗೆ ರೀಗಲ್ ರಾಪ್ಟಾರ್ ಬೈಕ್ ಗಳು ದೇಶವನ್ನು ಪ್ರವೇಶಿಸಲಿದ್ದು, ಸಿಕೆಡಿ ಮುಖಾಂತರ ದೇಶದಲ್ಲಿ ಮಾರಾಟ ಮಾಡಲಿದೆ. ಆಸಕ್ತ ಗ್ರಾಹಕರು 50,000 ರು.ಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ, ಹೈದರಾಬಾದ್)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ, ಹೈದರಾಬಾದ್)

ರೀಗಲ್ ರಾಪ್ಟಾರ್ ಕ್ರೂಸರ್ 350: 2.96 ಲಕ್ಷ ರು.

ರೀಗಲ್ ರಾಪ್ಟಾರ್ ಬೊಬರ್ 350: 3.33 ಲಕ್ಷ ರು.

ರೀಗಲ್ ರಾಪ್ಟಾರ್ ಡೇಟೋನಾ 350: 3.22 ಲಕ್ಷ ರು.

ರೀಗಲ್ ರಾಪ್ಟಾರ್ ಕ್ರೂಸರ್ 350

ರೀಗಲ್ ರಾಪ್ಟಾರ್ ಕ್ರೂಸರ್ 350

ನಿಮ್ಮ ಮಾಹಿತಿಗಾಗಿ, ರೀಗಲ್ ರಾಪ್ಟಾರ್ 250 ಸಿಸಿಯಿಂದ 1600 ಸಿಸಿ ವರೆಗಿನ ಬೈಕ್ ಗಳನ್ನು ನಿರ್ಮಿಸುತ್ತಿದೆ. ಈ ಪೈಕಿ ರೀಗಲ್ ರಾಪ್ಟಾರ್ ಕ್ರೂಸರ್ 350 ಎಂಟ್ರಿ ಲೆವೆಲ್ ಬೈಕಾಗಿದೆ. ಇದು ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿದ್ದು, 320 ಸಿಸಿ ಪ್ಯಾರಲಲ್ ಟ್ವಿನ್, ಲಿಕ್ವಿಡ್ ಕೂಲ್ಡ್, ಫೋರ್ ಸ್ಟ್ರೋಕ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 22.8 ಅಶ್ವಶಕ್ತಿ ಉತ್ಪಾದಿಸಲು ಶಕ್ತವಾಗಿದೆ. ಫೈವ್ ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ರೀಗಲ್ ರಾಪ್ಟಾರ್ ಬೊಬರ್ 350

ರೀಗಲ್ ರಾಪ್ಟಾರ್ ಬೊಬರ್ 350

ರೀಗಲ್ ರಾಪ್ಟಾರ್ ಬೊಬರ್ 350 ವಿಶಿಷ್ಟ ಸ್ಪೋರ್ಟ್ ಸ್ಟರ್ ಬೈಕಾಗಿದೆ. ಇದು ಆಕ್ರಮಣಕಾರಿ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ. ಪ್ರಸ್ತುತ ಬೈಕ್ ಕೂಡಾ 320 ಸಿಸಿ, ಪ್ಯಾರಲಲ್ ಟ್ವಿನ್, ಲಿಕ್ವಿಡ್ ಕೂಲ್ಡ್, ಫೋರ್ ಸ್ಟ್ರೋಕ್, ಫ್ಯೂಯಲ್ ಇಂಜೆಕ್ಟಡ್ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿದ್ದು, 22.8 ಅಶ್ವಶಕ್ತಿ ಉತ್ಪಾದಿಸುತ್ತದೆ. ಅಂತೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ರೀಗಲ್ ರಾಪ್ಟಾರ್ ಡೇಟೋನಾ 350

ರೀಗಲ್ ರಾಪ್ಟಾರ್ ಡೇಟೋನಾ 350

ರೀಗಲ್ ರಾಪ್ಟಾರ್ ಡೇಟೋನಾ 350 ಹೆಚ್ಚು ಆಧುನಿಕ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ. ಇದರಲ್ಲೂ 320 ಪ್ಯಾರಲಲ್ ಟ್ವಿನ್, ಲಿಕ್ವಿಡ್ ಕೂಲ್ಡ್, ಫೋರ್ ಸ್ಟ್ರೋಕ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ (22.8 ಅಶ್ವಶಕ್ತಿ) ಕಂಡುಬರಲಿದೆ. ಇನ್ನು ಹಿಂಬದಿ ಸವಾರನಿಗೂ ಬ್ಯಾಕ್ ರೆಸ್ಟ್ ಸೌಲಭ್ಯ ಲಭ್ಯವಾಗಲಿದೆ.

ರೀಗಲ್ ರಾಪ್ಟಾರ್ 3 ಕ್ರೂಸರ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

ಒಟ್ಟಿನಲ್ಲಿ ರೀಗಲ್ ರಾಪ್ಟಾರ್ ದೇಶದ ಮೋಟಾರುಸೈಕಲ್ ಪ್ರೇಮಿಗಳಿಗೆ ಹೊಸ ಆಯ್ಕೆಯನ್ನು ನೀಡಲಿದೆ. ಸಂಪೂರ್ಣ ಹೊಸ ಹಾಗೂ ಆಧುನಿಕ ಬ್ರಾಂಡ್ ಆಗಿರುವುದರಿಂದ ವಿಶ್ವಾಸಾರ್ಹತೆ ಕಾಯ್ದುಕೊಳ್ಳುವುದು ಅತಿ ಅಗತ್ಯವಾಗಿದೆ.

More from DriveSpark

Article Published On: Wednesday, June 10, 2015, 14:54 [IST]
English summary
Regal Raptor Has Launched Three Motorcycles In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+