2016 ಆಟೋ ಎಕ್ಸ್ ಪೋ ರಂಜಿಸಲಿರುವ ಬೈಕ್‌ಗಳು!

By Nagaraja

ದೇಶದ ವಾಹನ ಪ್ರೇಮಿಗಳು ಅತ್ಯಂತ ಕಾತರದಿಂದ ಕಾದು ಕುಳಿತಿರುವ ಎರಡು ವರ್ಷಗಳಿಗೊಮ್ಮೆ ಆಯೋಜನೆಯಾಗುತ್ತಿರುವ ಅತಿ ದೊಡ್ಡ 2016 ಆಟೋ ಎಕ್ಸ್ ಪೋ ವಾಹನ ಪ್ರದರ್ಶನ ಮೇಳಕ್ಕೆ ಕಾಲ ಸನ್ನಿಹಿತವಾಗಿದೆ.

Also Read: ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿರುವ ಬೈಕ್‌ಗಳು ಮುಂದಕ್ಕೆ ಓದಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂದಿನ ತಿಂಗಳಾರಂಭದಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಕಾರುಗಳಂತೆಯೇ ಬೈಕ್ ಗಳು ತನ್ನ ಪರಾಕ್ರಮವನ್ನು ಮೆರೆಯಲಿದೆ. ಇದರಂತೆ ಈ ಬೃಹತ್ ಆಟೋ ಎಕ್ಸ್ ಪೋದಲ್ಲಿ ನಿರೀಕ್ಷೆ ಮಾಡಬಹುದಾದ ಕೆಲವು ಗಮನಾರ್ಹ ಬೈಕ್ ಗಳ ಬಗ್ಗೆ ನಾವಿಲ್ಲಿ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

ಹೀರೊ ಎಚ್‌ಎಕ್ಸ್250ಆರ್

ಹೀರೊ ಎಚ್‌ಎಕ್ಸ್250ಆರ್

ಅಮೆರಿಕದ ಖ್ಯಾತ ಎರಿಕ್ ಬ್ಯುಯೆಲ್ ರೇಸಿಂಗ್ ಸಂಸ್ಥೆಯ ಸಹಯೋಗದಲ್ಲಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್, ಅತಿ ನೂತನ ಎಚ್‌ಎಕ್ಸ್250ಆರ್ ನಿರ್ವಹಣಾ ಬೈಕ್ ಹೊರತರಲಿದೆ. ಇದು 249 ಸಿಸಿ, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಗಂಟೆಗೆ 0-100 ಕೀ.ಮೀ. ವೇಗತೆಯನ್ನು ಪಡೆಯಲಿದೆ.

ಅಂದಾಜು ಬೆಲೆ: 1.5 ಲಕ್ಷ ರು.ಗಳಿಂದ 2 ಲಕ್ಷ ರು.

ಹೀರೊ ಎಚ್‌ಎಕ್ಸ್250ಆರ್

ಹೀರೊ ಎಚ್‌ಎಕ್ಸ್250ಆರ್

ಜೈಪುರದಲ್ಲಿ ಹೊಸ ಸಂಶೋಧನಾ ಹಾಗೂ ಅಧ್ಯಯನ ಘಟಕ ತೆರೆಯಲಿರುವ ಹೀರೊ ಈ ಯೋಜನೆಗಾಗಿ ಬರೋಬ್ಬರಿ 450 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ. ಹೀರೊ ಎಚ್‌ಎಕ್ಸ್250ಆರ್ ಇಲ್ಲಿಂದಲೇ ಹೊರ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಯಮಹಾ ಎಂಟಿ15

ಯಮಹಾ ಎಂಟಿ15

ಕೆಲವು ಸಮಯಗಳ ಹಿಂದೆಯಷ್ಟೇ ಥಾಯ್ಲೆಂಡ್ ಮಾರುಕಟ್ಟೆಯನ್ನು ಪ್ರವೇಶಿಸಿರುವ ಯಮಹಾ ಎಂಟಿ15 ಅಥವಾ ಎಂ ಸ್ಲೇಝ್ ಅತಿ ಶೀಘ್ರದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ.

ಯಮಹಾ ಎಂಟಿ15

ಯಮಹಾ ಎಂಟಿ15

ಇದರಲ್ಲಿ ಆರ್15 ಮಾದರಿಗೆ ಸಮಾನವಾದ ಎಂಜಿನ್ ಬಳಕೆಯಾಗಲಿದೆ. ಅಂತೆಯೇ 1.66 ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬಿಎಂಡಬ್ಲ್ಯು ಜಿ310ಆರ್

ಬಿಎಂಡಬ್ಲ್ಯು ಜಿ310ಆರ್

'ಕೆ03' ಎಂಬ ಕೋಡ್ ಪಡೆದುಕೊಂಡಿರುವ ಬಿಎಂಡಬ್ಲ್ಯು ಹೊಸ ಬೈಕಾದ ಜಿ310ಆರ್, ಟಿವಿಎಸ್ ಸಹಯೋಗದಲ್ಲಿ ಭಾರತವನ್ನು ಪ್ರವೇಶಿಸಲಿದೆ. ಇದು 500 ಸಿಸಿ ಒಳಗಡೆ ಬಿಎಂಡಬ್ಲ್ಯುನಿಂದ ನಿರ್ಮಾಣವಾಗುತ್ತಿರುವ ಮೊದಲ ಬೈಕ್ ಆಗಿದೆ.

ಬಿಎಂಡಬ್ಲ್ಯು ಜಿ310ಆರ್

ಬಿಎಂಡಬ್ಲ್ಯು ಜಿ310ಆರ್

ಸಬ್ 500 ಸಿಸಿ ರೋಡ್ ಸ್ಟರ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಜಿ310 ಆರ್ ದೇಶದಲ್ಲಿರುವ ಟಿವಿಎಸ್ ಘಟಕದಲ್ಲಿ ನಿರ್ಮಾಣವಾಗಲಿದೆ. ಅಲ್ಲದೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಹೋಂಡಾ ಪಿಸಿಎಕ್ಸ್150

ಹೋಂಡಾ ಪಿಸಿಎಕ್ಸ್150

ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್, ಭಾರತದಲ್ಲಿ ಅತಿ ಶಕ್ತಿಶಾಲಿ ಪಿಸಿಎಕ್ಸ್150 ಸ್ಕೂಟರ್ ಬಿಡುಗಡೆ ಮಾಡಲಿದೆ. ಇದರ 153 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ 14 ಎನ್‌ಎಂ ತಿರುಗುಬಲದಲ್ಲಿ 13.4 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ವಿ ಮ್ಯಾಟ್ರಿಕ್ಸ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.

ಹೋಂಡಾ ಪಿಸಿಎಕ್ಸ್150

ಹೋಂಡಾ ಪಿಸಿಎಕ್ಸ್150

ಹೊಸ 150ಸಿಸಿ ಸ್ಕೂಟರ್ ಎಂಜಿನ್ ವಿಚಾರದಲ್ಲಿ ಮಾತ್ರವಲ್ಲದೆ ಆಕಾರದಲ್ಲೂ ದೊಡ್ಡದಾಗಿರಲಿದೆ. ಇದು 130 ಕೆ.ಜಿ ತೂಕವನ್ನು ಪಡೆದುಕೊಳ್ಳಲಿದೆ. ಅಂತೆಯೇ ವಿ ಮ್ಯಾಟಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

ಹೋಂಡಾ ಸಿಬಿಆರ್ 500ಆರ್‌

ಹೋಂಡಾ ಸಿಬಿಆರ್ 500ಆರ್‌

ಹೋಂಡಾದ ಮಗದೊಂದು ಶಕ್ತಿಶಾಲಿ ಸಿಬಿಆರ್ 500ಆರ್‌ ಭಾರತಕ್ಕೆ ಬರಲು ಸಜ್ಜಾಗುತ್ತಿದ್ದು, ಬೈಕ್ ಪ್ರೇಮಿಗಳಿಗೆ ಅದ್ಭುತ ಅನುಭವ ನೀಡಲಿದೆ. 471 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೋಂಡಾ ಸಿಬಿಆರ್500ಆರ್ 43 ಎನ್‌ಎಂ ತಿರುಗುಬಲದಲ್ಲಿ 47 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 4ರಿಂದ 5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಮಾರುಕಟ್ಟೆಯನ್ನು ತಲುಪಲಿದೆ.

ಹೋಂಡಾ ಸಿಬಿಆರ್500ಆರ್

ಹೋಂಡಾ ಸಿಬಿಆರ್500ಆರ್

ಹೋಂಡಾ ಸಿಬಿಆರ್500ಆರ್ ಎಂಬುದು ಸಿಬಿಆರ್1000ಆರ್‌ಆರ್ ಆವೃತ್ತಿಯ ತದ್ರೂಪವಾಗಿರಲಿದೆ. ಈ ಮೂಲಕ ಬೆಳೆದು ಬರುತ್ತಿರುವ ಮಾರುಕಟ್ಟೆಯನ್ನು ಹೋಂಡಾ ಗುರಿಯಾಗಿರಿಸಿಕೊಳ್ಳುತ್ತಿದೆ. ಅಲ್ಲದೆ ಗರಿಷ್ಠ 170 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಹೀರೊ ಲೀಪ್ ಎಲೆಕ್ಟ್ರಿಕ್ ಸ್ಕೂಟರ್

ಹೀರೊ ಲೀಪ್ ಎಲೆಕ್ಟ್ರಿಕ್ ಸ್ಕೂಟರ್

2016ನೇ ಸಾಲಿನಲ್ಲಿ ಲೀಪ್ (Leap) ಹೈಬ್ರಿಡ್ ಸ್ಕೂಟರ್ ಭಾರತ ಪ್ರವೇಶ ಪಡೆಯಲಿದೆ. ಇದರಲ್ಲಿ 124 ಸಿಸಿ ಪೆಟ್ರೋಲ್ ಎಂಜಿನ್ ಜೊತೆಗೆ 8ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು ಕಂಡುಬರಲಿದೆ.

ಹೀರೊ ಲೀಪ್ ಎಲೆಕ್ಟ್ರಿಕ್ ಸ್ಕೂಟರ್

ಹೀರೊ ಲೀಪ್ ಎಲೆಕ್ಟ್ರಿಕ್ ಸ್ಕೂಟರ್

ಇದರಲ್ಲಿ ಸಣ್ಣದಾದ ಮೂರು ಲೀಟರ್ ಇಂಧನ ಟ್ಯಾಂಕ್ ಇರಲಿದ್ದು, ಲಿಥಿಯಂ ಇಯಾನ್ ಬ್ಯಾಟರಿಯ ಬಲದೊಂದಿಗೆ 340 ಕೀ.ಮೀ. ವರೆಗೆ ಮೈಲೇಜ್ ನೀಡಲಿದೆ. ಅಂತೆಯೇ 140 ಕೆ.ಜಿ ಭಾರದ ಈ ಸ್ಕೂಟರ್ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇರಲಿದೆ.

ಡಿಎಸ್‌ಕೆ ಬೆನೆಲ್ಲಿ ಟೊರ್ನಡೊ 302

ಡಿಎಸ್‌ಕೆ ಬೆನೆಲ್ಲಿ ಟೊರ್ನಡೊ 302

ಡಿಎಸ್‌ಕೆ ಜೊತೆಗಾರಿಕೆಯಲ್ಲಿ ಭಾರತಕ್ಕೆ ಕಾಲಿರಿಸಿರುವ ಬೆನೆಲ್ಲಿ ತನ್ನ ಶ್ರೇಣಿಯ ಬೈಕ್‌ಗಳೊಂದಿಗೆ ಭಾರತಕ್ಕೆ ಕಾಲಿರಿಸಿರುವ ಇಟಲಿಯ ಐಕಾನಿಕ್ ಬೆನೆಲ್ಲಿ ಸಂಸ್ಥೆಯು ಮಗದೊಂದು ಶಕ್ತಿಶಾಲಿ 300 ಸಿಸಿ ಬೈಕ್ ದೇಶಕ್ಕೆ ಪರಿಚಯಿಸಲಿದೆ. ಅದುವೇ ಡಿಎಸ್‌ಕೆ ಬೆನೆಲ್ಲಿ ಟೊರ್ನಡೊ 302.

ಡಿಎಸ್‌ಕೆ ಬೆನೆಲ್ಲಿ ಟೊರ್ನಡೊ 302

ಡಿಎಸ್‌ಕೆ ಬೆನೆಲ್ಲಿ ಟೊರ್ನಡೊ 302

300 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ಡಿಎಸ್‌ಕೆ ಬೆನೆಲ್ಲಿ ಟೊರ್ನಡೊ 302 ಬೈಕ್ 26.5 ಎನ್‌ಎಂ ತಿರುಗುಬಲದಲ್ಲಿ 38 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂದಾಜು ಬೆಲೆ: 2.97 ಲಕ್ಷ ರು.

ಸುಜುಕಿ ಜಿಕ್ಸರ್ 250

ಸುಜುಕಿ ಜಿಕ್ಸರ್ 250

ಜಿಕ್ಸರ್ 150 ಸಿಸಿ ಶ್ರೇಣಿಯ ಬೈಕ್ ಗಳ ಯಶಸ್ಸಿನ ಬಳಿಕ ಮತ್ತಷ್ಟು ಪುಳಕಿತಗೊಂಡಿರುವ ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ, ಭಾರತದಲ್ಲಿ ನೂತನ ಸುಜುಕಿ ಜಿಕ್ಸರ್ 250 ಸಿಸಿ ಬೈಕ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಸುಜುಕಿ ಜಿಕ್ಸರ್ 250

ಸುಜುಕಿ ಜಿಕ್ಸರ್ 250

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಹೊಸ ಯೋಜನೆಗಳನ್ನು ಪ್ರಕಟಿಸುವುದು ಜಿಕ್ಸರ್ ಯೋಜನೆಯಾಗಿದೆ. ನೂತನ ಬೈಕ್ ನ ಎಂಜಿನ್ ಅಭಿವೃದ್ಧಿಪಡಿಸಲು ಜಪಾನ್ ಎಂಜಿನಿಯರ್ ಗಳು ಒಂದಾಗಲಿದ್ದಾರೆ. ಇದು ಪ್ರಮುಖವಾಗಿಯೂ ಹೋಂಡಾ ಸಿಬಿಆರ್ 250ಆರ್, ಹ್ಯೊಸಂಗ್ ಜಿಡಿ250ಆರ್ ಮತ್ತು ಬೆನೆಲ್ಲಿ ಟಿಎನ್‌ಟಿ 25 ಸವಾಲನ್ನು ಎದುರಿಸಲಿದೆ.

ರೆನೆಗೇಡ್ ಸ್ಪೋರ್ಟ್ ಎಸ್

ರೆನೆಗೇಡ್ ಸ್ಪೋರ್ಟ್ ಎಸ್

ಮುಂದಿನ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿರುವ ಯುಂಎಂ ರೆನೆಗೇಡ್ ಸ್ಪೋರ್ಟ್ ಎಸ್ ಬೈಕ್ ದೇಶದ ವಾಹನ ಪ್ರೇಮಿಗಳ ಪಾಲಿಗೆ ಹೊಸ ಅನುಭವವಾಗಲಿದೆ. ಇದರ 279 ಸಿಸಿ ಎಂಜಿನ್ 26 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

 ರೆನೆಗೇಡ್ ಸ್ಪೋರ್ಟ್ ಎಸ್

ರೆನೆಗೇಡ್ ಸ್ಪೋರ್ಟ್ ಎಸ್

ರಾಯಲ್ ಎನ್ ಪೀಲ್ಡ್ 350 ಹಾಗೂ ಬಜಾಜ್ ಅವೆಂಜರ್ ಕ್ರೂಸರ್ ಬೈಕ್ ಗಳಿಗೆ ಪ್ರಮುಖ ಎದುರಾಳಿಯಾಗಿರುವ ರೆನೆಗೇಡ್ ಸ್ಪೋರ್ಟ್ ಎಸ್ ಎರಡು ಲಕ್ಷ ರು. ಅಂದಾಜು ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

 ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ

ನೂತನ ಟಿವಿಎಸ್ ಆಪಾಚೆ ಆರ್‌ಟಿಆರ್ 200 4ವಿ ಇದೇ ಬರುವ 2016 ಜನವರಿ 20ರಂದು ಭರ್ಜರಿ ಬಿಡುಗಡೆ ಕಾಣಲಿದ್ದು, ಮುಂಬರುವ 2016 ಆಟೋ ಎಕ್ಸ್ ಪೋದಲ್ಲೂ ತನ್ನ ಮೋಡಿ ಮಾಡಲಿದೆ.

 ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ

197.75 ಸಿಸಿ ಸಿಂಗಲ್ ಸಿಲಿಂಡರ್ ಒಯಿಲ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ 18.1 ಎನ್‌ಎಂ (7,000 rpm) ತಿರುಗುಬಲದಲ್ಲಿ 20.23 ಅಶ್ವಶಕ್ತಿಯನ್ನು (8,500 rpm) ಉತ್ಪಾದಿಸಲಿದೆ.

ಇವನ್ನೂ ಓದಿ

ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾಗಲಿರುವ 10 ಆಕರ್ಷಕ ಸ್ಕೂಟರ್

More from DriveSpark

Article Published On: Monday, January 18, 2016, 14:35 [IST]
English summary
Most Anticipated And Expected Two-wheelers In 2016 India Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+