ಈಗ ಕಪ್ಪು ವರ್ಣದಲ್ಲೂ ಲಭ್ಯ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ
ರಾಯಲ್ ಎನ್‌ಫೀಲ್ಡ್‌ನ ಅತ್ಯಂತ ಜನಪ್ರಿಯ ಬುಲೆಟ್‌ಗಳಲ್ಲಿ ಕಾಂಟಿನೆಂಟಲ್ ಜಿಟಿ ಒಂದಾಗಿದೆ. ಇದು ಬಿಡುಗಡೆಯಾದ ಸಂದರ್ಭದಲ್ಲಿ ಕೇವಲ ಒಂದು ಬಣ್ಣದಲ್ಲಿ ಮಾತ್ರ ಲಭ್ಯವಾಗಿತ್ತು. ಇದರಿಂದ ಗ್ರಾಹಕರು ನಿರಾಸೆಗೊಂಡಿದ್ದರು.
ಈಗ ಹೇಳಿಕೆ ಕೊಟ್ಟಿರುವ ಎನ್‌ಫೀಲ್ಡ್, ಕಾಂಟಿನೆಂಟಲ್ ಜಿಟಿ ಈಗ ಕೆಂಪ್ಪು, ಹಳದಿ ಹಾಗೂ ಕಪ್ಪು ಬಣ್ಣಗಳಲ್ಲೂ ಲಭ್ಯ ಎಂದಿದೆ. ಈ ಕೆಫೆ ರೇಸರ್ ಮಾದರಿಯ ಬಿಡುಗಡೆ ಬಳಿಕ ಎನ್‌ಫೀಲ್ಡ್ ಹೆಚ್ಚಿನ ಯಶಸ್ಸು ಸಾಧಿಸಿತ್ತು.

ಇದು ದೇಶ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಯಲ್ಲೂ ಹೆಚ್ಚಿನ ಸದ್ದು ಮಾಡುತ್ತಿದೆ. 535 ಸಿಸಿ ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಕಾಂಟಿನೆಂಟಲ್ ಜಿಟಿ 44 ತಿರುಗುಬಲದಲ್ಲಿ 29.1 ಅಶ್ವಶಕ್ತಿ ಉತ್ಪಾದಿಸುತ್ತದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಸಹ ಹೊಂದಿದೆ.

ಹೊಸ ಬಣ್ಣದ ಆಯ್ಕೆಗಳಿಗಾಗಿ ನೀವು ಹೆಚ್ಚುವರಿ ಮೊತ್ತ ಪಾವತಿಸಬೇಕಾದ ಅಗತ್ಯವಿರುವುದಿಲ್ಲ. ಇದರ ಮುಂಬೈ ಎಕ್ಸ್ ಶೋ ರೂಂ ಬೆಲೆ 1.93 ಲಕ್ಷ ರು.ಗಳಾಗಿದೆ.


Click it and Unblock the Notifications








