ದೇಶದಲ್ಲಿ ಮೂರನೇ ಘಟಕ ತೆರೆಯಲಿರುವ ರಾಯನ್ ಎನ್‌ಫೀಲ್ಡ್

Written By:

ಬೇಡಿಕೆಗೆ ತಕ್ಕಂತೆ ಗರಿಷ್ಠ ನಿರ್ಮಾಣ ಸಾಮರ್ಥ್ಯವನ್ನು ಗುರಿಯಾಗಿರಿಸಿರುವ ಚೆನ್ನೈ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ರಾಯಲ್ ಎನ್ ಫೀಲ್ಡ್ ಮೂರನೇ ಘಟಕವನ್ನು ಸದ್ಯದಲ್ಲೇ ತೆರೆಯಲಿದೆ.

ಐಚರ್ ಮೋಟಾರ್ಸ್ ಅಧೀನತೆಯಲ್ಲಿರುವ ರಾಯಲ್ ಎನ್ ಫೀಲ್ಡ್ ಸದ್ಯ ಚೆನ್ನೈ ಹೊರ ವಲಯದಲ್ಲಿ ಎರಡು ಘಟಕಗಳನ್ನು ಹೊಂದಿದೆ. ಇದೀಗ ಮೂರನೇ ಘಟಕವನ್ನು ಚೆನ್ನೈನಲ್ಲೇ ತೆರೆದುಕೊಳ್ಳುವ ಇರಾದೆಯಲ್ಲಿದೆ.

ರಾಯಲ್ ಎನ್ ಫೀಲ್ಡ್

ಪ್ರಸ್ತುತ ವಾರ್ಷಿಕವಾಗಿ 4.5 ಲಕ್ಷ ಯುನಿಟ್ ಗಳ ನಿರ್ಮಾಣ ಸಾಮರ್ಥ್ಯ ಹೊಂದಿರುವ ಎನ್ ಫೀಲ್ಡ್, ದ್ವಿಗುಣಗೊಳಿಸುವ ಇರಾದೆಯಲ್ಲಿದೆ. ಇದರಂತೆ ವಲ್ಲಂ ವಡಂಗಾಲ್ ನಲ್ಲಿ ಮೂರನೇ ಘಟಕ ತೆರೆಯಲಿದೆ.

ಇದೇ ಸಂದರ್ಭದಲ್ಲಿ ಮಾತನಾಡಿರುವ ರಾಯಲ್ ಎನ್‌ಫೀಲ್ಡ್ ಸಿಇಒ ಮುಂದಿನ ಸಾಲಿನಲ್ಲಿ ಎರಡು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

English summary
Royal Enfield To Set Up Third Manufacturing Plant In India
Story first published: Saturday, November 7, 2015, 16:08 [IST]
Please Wait while comments are loading...

Latest Photos