ಮಹಾಯುದ್ಧ ಪ್ರೇರಣೆ; ಎನ್‌ಫೀಲ್ಡ್ ಸೀಮಿತ ಆವೃತ್ತಿ ಬಿಡುಗಡೆ

Written By:

ದೇಶದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್, ಮಹಾ ಯುದ್ಧದ ರೈಡರುಗಳಿಂದ (despatch riders) ಪ್ರೇರಣೆ ಪಡೆದುಕೊಂಡು ಸೀಮಿತ ಆವೃತ್ತಿಯ ಬೈಕ್‌ಗಳು ಹಾಗೂ ಗೇರ್‌ಗಳನ್ನು ಬಿಡುಗಡೆ ಮಾಡಿದೆ.

ಹಳೆಯ ಕ್ಲಾಸಿಕ್ ಬೈಕ್ ಗಳಿಗೆ ಆಧುನಿಕ ಸ್ಪರ್ಶ ನೀಡಿರುವುದು ರಾಯಲ್ ಎನ್ ಫೀಲ್ಡ್ ನ ಪ್ರಮುಖ ವೈಶಿಷ್ಟ್ಯವಾಗಿದೆ. ಗೇರ್‌ಗಳ ಜೊತೆಗೆ ವಿಶೇಷ ಆಕ್ಸೆಸರಿಗಳು ಆಯ್ದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಆನ್ ಲೈನ್ ಮೂಲಕ ಲಭ್ಯವಾಗಲಿದೆ.

ಮಹಾಯುದ್ಧ ಪ್ರೇರಣೆ; ಎನ್‌ಫೀಲ್ಡ್ ಸೀಮಿತ ಆವೃತ್ತಿ ಬಿಡುಗಡೆ

ರಾಯಲ್ ಎನ್ ಫೀಲ್ಡ್ ಬೈಕ್ ಗಳು ಮೂರು ಬಣ್ಣಗಳಲ್ಲಿ ಲಭ್ಯವಾಗಲಿದೆ. ಈ ಪೈಕಿ ಡೆಸರ್ಟ್ ಸ್ಟ್ರೋಮ್ ಹಾಗೂ ಸ್ವಾಂಡ್ರಾನ್ ಬ್ಲೂ ಭಾರತದಲ್ಲಿ ಲಭ್ಯವಾರದೆ ಬ್ಯಾಟಲ್ ಗ್ರೀನ್ ಅಂತರಾಷ್ಟ್ರೀಯ ಮಾರುಕಟ್ಟೆಗಾಗಿ ಮೀಸಲಿಡಲಾಗಿದೆ.

ಮಹಾಯುದ್ಧ ಪ್ರೇರಣೆ; ಎನ್‌ಫೀಲ್ಡ್ ಸೀಮಿತ ಆವೃತ್ತಿ ಬಿಡುಗಡೆ

ಇನ್ನು ಆಕ್ಸೆಸರಿಯಲ್ಲಿ ಟಿ ಶರ್ಟ್, ಲೆಥರ್ ಜಾಕೆಟ್, ಶೂ, ಗಾರ್ಡ್, ಆರ್ಮರ್ಡ್ ಪಾಕೆಟ್ ಮುಂತಾದವುಗಳು ಒಳಗೊಂಡಿರಲಿದೆ. ಅಂದ ಹಾಗೆ 50 ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಎನ್ ಫೀಲ್ಡ್ ಸೀಮಿತ ಆವೃತ್ತಿಯು ತಲುಪಲಿದೆ.

ಮಹಾಯುದ್ಧ ಪ್ರೇರಣೆ; ಎನ್‌ಫೀಲ್ಡ್ ಸೀಮಿತ ಆವೃತ್ತಿ ಬಿಡುಗಡೆ

ಕ್ಲಾಸಿಕ್ 500 ತಳಹದಿಯಲ್ಲಿ 600ರಷ್ಟು ಇಂತಹ ಸೀಮಿತ ಮಾದರಿಗಳು ನಿರ್ಮಾಣವಾಗಲಿದೆ. ಅಂತೆಯೇ ಪ್ರತಿ ಬಣ್ಣದಲ್ಲೂ 200ರಷ್ಟು ಯುನಿಟ್ ಗಳು ನಿರ್ಮಾಣವಾಗಲಿದೆ.

ಮಹಾಯುದ್ಧ ಪ್ರೇರಣೆ; ಎನ್‌ಫೀಲ್ಡ್ ಸೀಮಿತ ಆವೃತ್ತಿ ಬಿಡುಗಡೆ

ಕ್ಲಾಸಿಕ್ 500 ಮಾದರಿಯು 499ಸಿಸಿ, ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಟ್ವಿನ್ ಸ್ಪಾರ್ಕ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ. ಇದು ಗರಿಷ್ಠ 27.2 ಅಶ್ವಶಕ್ತಿ (41.3 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಮಹಾಯುದ್ಧ ಪ್ರೇರಣೆ; ಎನ್‌ಫೀಲ್ಡ್ ಸೀಮಿತ ಆವೃತ್ತಿ ಬಿಡುಗಡೆ

ಅದೇ ಹೊತ್ತಿಗೆ ಎರಡು ಹೊಸ ಫ್ಲ್ಯಾಟ್ ಫಾರ್ಮ್ ಗಳ ಅಭಿವೃದ್ಧಿಯಲ್ಲಿ ಎನ್ ಫೀಲ್ಡ್ ತೊಡಗಿದ್ದು, 2016ರ ವೇಳೆಯಾಗುವಾಗ 250ರಿಂದ 750 ಸಿಸಿ ವರೆಗಿನ ಶ್ರೇಣಿಯ ಬೈಕ್ ಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

English summary
Royal Enfield Unveils Limited Edition Classic 500 & Gears
Story first published: Friday, May 29, 2015, 11:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark