ಆಕ್ಟಿವಾ ಅಮೋಘ ಓಟ; ಜೂಪಿಟರ್ ಶೈನಿಂಗ್: ಟಾಪ್ 10 ಪಟ್ಟಿ ನೋಡಿ

By Nagaraja

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆ ಬದಲಾಗುತ್ತಿದೆ. ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ವಾಹನ ಸವಾರರು ಸ್ಕೂಟರ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯಿಸ ತೊಡಗಿದ್ದಾರೆ. ಇದರೊಂದಿಗೆ ಪ್ರತಿಸ್ಪರ್ಧಿಗಳ ಸಂಖ್ಯೆಯೂ ಹೆಚ್ಚಾಗಿದೆ.

2015 ನವೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟಗೊಂಡಿರುವ ಅಗ್ರ 10 ಸ್ಕೂಟರ್ ಗಳು ಯಾವುವು? ಈ ಬಗ್ಗೆ ಸಮಗ್ರ ಲೇಖನದೊಂದಿಗೆ ಕನ್ನಡ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ ಬರುತ್ತಿದೆ.

10. ಟಿವಿಎಸ್ ಜೆಸ್ಟ್

10. ಟಿವಿಎಸ್ ಜೆಸ್ಟ್

10ನೇ ಸ್ಥಾನದಲ್ಲಿರುವ ಜೆಸ್ಟ್ 2015 ನವೆಂಬರ್ ತಿಂಗಳಲ್ಲಿ 7,906 ಯುನಿಟ್ ಗಳಷ್ಟು ಮಾರಾಟವನ್ನು ಕಂಡುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಒಂದು ಸ್ಥಾನದ ಕುಸಿತವನ್ನು ಜೆಸ್ಟ್ ಅನುಭವಿಸಿದೆ.

ಎಂಜಿನ್: 110 ಸಿಸಿ, 8 ಅಶ್ವಶಕ್ತಿ, 8.7 ಎನ್‌ಎಂ ತಿರುಗುಬಲ,

ಮೈಲೇಜ್: 62 ಕೀ.ಮೀ.

09. ಮಹೀಂದ್ರ ಗಸ್ಟೊ

09. ಮಹೀಂದ್ರ ಗಸ್ಟೊ

ಕಳೆದ ಸಾಲಿನಲ್ಲಿ ಪಟ್ಟಿಯಲ್ಲೂ ಕಾಣಿಸಿಕೊಳ್ಳದ ಮಹೀದ್ರ ಗಸ್ಟೊ ಈ ಬಾರಿ ಒಂಬತ್ತನೇ ಸ್ಥಾನಕ್ಕೆ ಲಗ್ಗೆಯಿಡುವ ಮೂಲಕ ಅಚ್ಚರಿ ಮೂಡಿಸಿದೆ. ಅಲ್ಲದೆ 8,646 ಯುನಿಟ್ ಗಳ ಭರ್ಜರಿ ಮಾರಾಟವನ್ನು ದಾಖಲಿಸಿದೆ.

ಎಂಜಿನ್: 108 ಸಿಸಿ, 8 ಅಶ್ವಶಕ್ತಿ, 9 ಎನ್‌ಎಂ ತಿರುಗುಬಲ,

ಮೈಲೇಜ್: 61 ಕೀ.ಮೀ.

07. ಹೀರೊ ಪ್ಲೆಶರ್

07. ಹೀರೊ ಪ್ಲೆಶರ್

12,387 ಯುನಿಟ್ ಗಳ ಮಾರಾಟ ದಾಖಲಿಸಿರುವ ಹೀರೊ ಪ್ಲೆಶರ್, ಬರೋಬ್ಬರಿ ಶೇಕಡಾ 40ರಷ್ಟು ಮಾರಾಟ ಇಳಿಕೆಯಾಗಿದೆ.

ಎಂಜಿನ್: 102 ಸಿಸಿ, 7 ಅಶ್ವಶಕ್ತಿ, 7.8 ಎನ್‌ಎಂ ತಿರುಗುಬಲ,

ಮೈಲೇಜ್: 63 ಕೀ.ಮೀ.

07. ಸುಜುಕಿ ಆಕ್ಸೆಸ್

07. ಸುಜುಕಿ ಆಕ್ಸೆಸ್

ಏಳನೇ ಸ್ಥಾನದಲ್ಲಿರುವ ಸುಜುಕಿ ಆಕ್ಸೆಸ್ 12,959 ಯುನಿಟ್ ಗಳ ಮಾರಾಟವನ್ನು ಕಂಡಿದೆ. ಕಳೆದ ವರ್ಷ ಸುಜುಕಿ ಆಕ್ಸೆಸ್ 20,234 ಯುನಿಟ್ ಗಳಷ್ಟು ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ಎಂಜಿನ್: 124 ಸಿಸಿ, 8.5 ಅಶ್ವಶಕ್ತಿ, 9.8 ಎನ್‌ಎಂ ತಿರುಗುಬಲ,

ಮೈಲೇಜ್: 53 ಕೀ.ಮೀ.

06. ಯಮಹಾ ಫಾಸಿನೊ

06. ಯಮಹಾ ಫಾಸಿನೊ

ಆರನೇ ಸ್ಥಾನದಲ್ಲಿರುವ ಯಮಹಾದ ಫಾಸಿನೊ ಸ್ಕೂಟರ್ 2015 ನವೆಂಬರ್ ತಿಂಗಳಲ್ಲಿ 13,078 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಎಂಜಿನ್: 113 ಸಿಸಿ, 7 ಅಶ್ವಶಕ್ತಿ, 8.1 ಎನ್‌ಎಂ ತಿರುಗುಬಲ,

ಮೈಲೇಜ್: 46 ಕೀ.ಮೀ.

05. ಹೋಂಡಾ ಡಿಯೊ

05. ಹೋಂಡಾ ಡಿಯೊ

ಯುವ ಜನಾಂಗವನ್ನು ಹೆಚ್ಚು ಆಕರ್ಷಿಸಿರುವ ಹೋಂಡಾ ಡಿಯೊ ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದೆ. ಅಲ್ಲದೆ 2015 ನವೆಂಬರ್ ತಿಂಗಳಲ್ಲಿ 17,090 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ಎಂಜಿನ್: 109 ಸಿಸಿ, 6 ಅಶ್ವಶಕ್ತಿ, 8 ಎನ್‌ಎಂ ತಿರುಗುಬಲ,

ಮೈಲೇಜ್: 62 ಕೀ.ಮೀ.

04. ಹೀರೊ ಡ್ಯುಯೆಟ್

04. ಹೀರೊ ಡ್ಯುಯೆಟ್

ಇತ್ತೀಚೆಗಷ್ಟೇ ಬಿಡುಗಡೆ ಕಂಡಿರುವ ಹೀರೊ ಡ್ಯುಯೆಟ್ ಅಗ್ರ ಐದರ ಪಟ್ಟಿಗೆ ಲಗ್ಗೆಯಿಟ್ಟಿದೆ. ಅಲ್ಲದೆ ಈ ಅವಧಿಯಲ್ಲಿ 18,240 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಎಂಜಿನ್: 110 ಸಿಸಿ, 8.3 ಅಶ್ವಶಕ್ತಿ, 8.3 ಎನ್‌ಎಂ ತಿರುಗುಬಲ,

ಮೈಲೇಜ್: 63 ಕೀ.ಮೀ.

03 ಹೀರೊ ಮ್ಯಾಸ್ಟ್ರೋ

03 ಹೀರೊ ಮ್ಯಾಸ್ಟ್ರೋ

ಹೀರೊ ಮ್ಯಾಸ್ಟ್ರೋ ಪರಿಣಾಮಕಾರಿ ಮಾರಾಟವನ್ನು ಕಾಯ್ದುಕೊಳ್ಳುವಲ್ಲಿ ಯಶ ಕಂಡಿದೆ. ಕಳೆದ ಬಾರಿ 41,959 ಯುನಿಟ್ ಗಳಿಷ್ಟಿದ್ದ ಹೀರೊ ಮ್ಯಾಸ್ಟ್ರೋ ಮಾರಾಟವು ಈ ಬಾರಿ 35,672 ಯುನಿಟ್ ಗಳಿಗೆ ಇಳಿಕೆ ಕಂಡರೂ ಅಗ್ರ ಮೂರರ ಸ್ಥಾನಕ್ಕೇರಿದೆ.

ಎಂಜಿನ್: 109 ಸಿಸಿ, 8.2 ಅಶ್ವಶಕ್ತಿ, 9.1 ಎನ್‌ಎಂ ತಿರುಗುಬಲ,

ಮೈಲೇಜ್: 68 ಕೀ.ಮೀ.

02. ಜಿವಿಎಸ್ ಜೂಪಿಟರ್

02. ಜಿವಿಎಸ್ ಜೂಪಿಟರ್

ನಿರೀಕ್ಷೆಯಂತೆಯೇ ಟಿವಿಎಸ್ ಜೂಪಿಟರ್ ಹೋಂಡಾ ಆಕ್ಟಿವಾ ಬಳಿಕದ ಅತ್ಯುತ್ತಮ ಕಾರೆಂಬ ಹೆಗ್ಗಳಿಕೆಯನ್ನು ಕಾಪಾಡಿಕೊಂಡಿದೆ. ಕಳೆದ ಸಾಲಿಗೆ ಹೋಲಿಸಿದಾಗ ಮಾರಾಟದಲ್ಲಿ ಶೇಕಡಾ 61ರಷ್ಟು ನೆಗೆತ ಕಂಡಿರುವ ಜೂಪಿಟರ್ 2015 ನವೆಂಬರ್ ತಿಂಗಳಲ್ಲಿ 51,768 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ಎಂಜಿನ್: 109 ಸಿಸಿ, 7.8 ಅಶ್ವಶಕ್ತಿ, 8 ಎನ್‌ಎಂ ತಿರುಗುಬಲ,

ಮೈಲೇಜ್: 62 ಕೀ.ಮೀ.

01. ಹೋಂಡಾ ಆಕ್ಟಿವಾ

01. ಹೋಂಡಾ ಆಕ್ಟಿವಾ

ಸದ್ಯಕ್ಕಂತೂ ಹೋಂಡಾ ಆಕ್ಟಿವಾ ಅಗ್ರಸ್ಥಾನಕ್ಕೆ ಯಾರೂ ಪ್ರತಿಸ್ಫರ್ಧಿಗಳಿಲ್ಲ. ಇದನ್ನು ಸಾಬೀತುಪಡಿಸಿರುವ ಆಕ್ಟಿವಾ 2015 ನವೆಂಬರ್ ತಿಂಗಳಲ್ಲಿ 1,83,824 ಯುನಿಟ್ ಗಳಷ್ಟು ಮಾರಾಟವನ್ನು ಕಾಯ್ದುಕೊಂಡಿದೆ. ಈ ಮೂಖಾಂತರ ಬೈಕ್ ಮಾರಾಟಕ್ಕೆ ಭಾರಿ ಹೊಡೆತ ನೀಡಿದೆ.

ಎಂಜಿನ್: 109 ಸಿಸಿ, 8 ಅಶ್ವಶಕ್ತಿ, 8.7 ಎನ್‌ಎಂ ತಿರುಗುಬಲ,

ಮೈಲೇಜ್: 66 ಕೀ.ಮೀ.

More from DriveSpark

Article Published On: Wednesday, December 30, 2015, 11:54 [IST]
English summary
Top 10 Selling Scooters In November 2015
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+