ಡಿಸ್ಕ್ ಬ್ರೇಕಲ್ಲೂ ಬರುತ್ತಿದೆ ನಿಮ್ಮ ನೆಚ್ಚಿನ ಜೂಪಿಟರ್
ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಟಿವಿಎಸ್ ಮೋಟಾರ್ಸ್, ಬಿಡುಗಡೆ ಮಾಡಿರುವ ಅತ್ಯಂತ ಯಶಸ್ಸಿನ ಮಾದರಿಗಳಲ್ಲಿ ಜೂಪಿಟರ್ ಒಂದಾಗಿದೆ. ಈ ಜೂಪಿಟರ್ ಉತ್ತಮ ಮಾರಾಟದಿಂದ ಉತ್ಸಾಹಿತಗೊಂಡಿರುವ ಸಂಸ್ಥೆಯು ಅತಿ ಶೀಘ್ರದಲ್ಲೇ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಒದಗಿಸುವ ಇರಾದೆಯನ್ನು ಹೊಂದಿದೆ.
ಈ ಮೂಲಕ ಜೂಪಿಟರ್ ಸ್ಕೂಟರ್ ಚಾಲನೆ ಮತ್ತಷ್ಟು ಸುರಕ್ಷಿತವೆನಿಸಲಿದೆ. ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಒಳಗೊಂಡ ಜೂಪಿಟರ್ ಸ್ಕೂಟರ್ ಮುಂಬರುವ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು ಈಗಿರುವ ಮಾದರಿಗೆ ಹೋಲಿಸಿದಾಗ ಸ್ವಲ್ಪ ದುಬಾರಿಯೆನಿಸುವ ಸಾಧ್ಯತೆಯಿದೆ.

ಎಂಜಿನ್ ತಾಂತ್ರಿಕತೆ
- ಎಂಜಿನ್ - 110 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್
- ಅಶ್ವಶಕ್ತಿ - 7
- ತಿರುಗುಬಲ - 8 ಎನ್ಎಂ
- ಇಂಧನ ಕ್ಷಮತೆ - 62 kpl



Click it and Unblock the Notifications








