ಟಿವಿಎಸ್ ಜೂಪಿಟರ್ ವಿಶೇಷ ಆವೃತ್ತಿ ಬಿಡುಗಡೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್, ತನ್ನ ಜನಪ್ರಿಯ ಜೂಪಿಟರ್ ಸ್ಕೂಟರ್‌ನ ಒಂದನೇ ವಾರ್ಷಿಕೋತ್ಸವದ ಈ ಸುಸಂದರ್ಭದಲ್ಲಿ ವಿಶೇಷ ಆವೃತ್ತಿಯೊಂದನ್ನು ಪರಿಚಯಿಸಿದೆ. ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಸ್ಕೂಟರ್‌ಗಳಲ್ಲಿ ಒಂದಾಗಿರುವ ಜೂಪಿಟರ್ ವಿಶೇಷ ಆವೃತ್ತಿಯು ಕೇವಲ ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿರಲಿದೆ.

ವಿಶೇಷ ಬಣ್ಣದ ಆಯ್ಕೆ, ಸ್ಪೆಷೆಲ್ ಎಡಿಷನ್ ಸ್ಟಿಕ್ಕರ್ ಜೊತೆಗೆ ಕೆಲವೊಂದು ಗಮನಾರ್ಹ ಫೀಚರುಗಳನ್ನು ಹೊಸ ಆವೃತ್ತಿಯಲ್ಲಿ ನೋಡಬಹುದಾಗಿದೆ. ಇದರ 'ಡ್ಯುರಾ ಕೂಲ್' ಸೀಟುಗಳು ವಿಶೇಷ ಆಕರ್ಷಣೆಯಾಗಿರಲಿದೆ. ಸಾಮಾನ್ಯ ಸೀಟುಗಳಿಗೆ ಹೋಲಿಸಿದರೆ ಇದು ಬೇಗನೇ ಬಿಸಿಯಾಗುವುದಿಲ್ಲ ಎಂದು ಸಂಸ್ಥೆಯು ತಿಳಿಸಿದೆ. ಹಾಗಾಗಿ ಸವಾರರಿಗೆ ಬಿಸಿಲಿನಲ್ಲೂ ಪಾರ್ಕ್ ಮಾಡುವುದಕ್ಕೆ ಯಾವುದೇ ತೊಂದರೆಯಿರುವುದಿಲ್ಲ.

tvs jupiter

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಟಿವಿಎಸ್ ಮೋಟಾರು ಕಂಪನಿ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಕೆ.ಎನ್. ರಾಧಾಕೃಷ್ಣನ್, "ಜೂಪಿಟರ್ ಸ್ಕೂಟರ್‌ಗೆ ಗ್ರಾಹಕರಿಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದ್ದು, ನಾವು ತಾಜಾ ಉತ್ಪನ್ನಗಳನ್ನು ತಲುಪಿಸುವುದರಲ್ಲಿ ಬದ್ಧರಾಗಿದ್ದೇವೆ" ಎಂದಿದ್ದಾರೆ.

ಅಂದ ಹಾಗೆ ಟಿವಿಎಸ್ ಜೂಪಿಟರ್ ಸ್ಕೂಟರ್ ಶಕ್ತಿಶಾಲಿ ಎಂಜಿನ್, ಸ್ಟೈಲಿಂಗ್, ಹೆಚ್ಚಿನ ಅನುಕೂಲ ಹಾಗೂ ಬೆಸ್ಟ್ ಇನ್ ಕ್ಲಾಸ್ ಮೈಲೇಜ್‌ಗಳ ಸಂಯೋಜನೆಯನ್ನು ನೀಡುತ್ತದೆ. ಅಲ್ಲದೆ 2014 ವೀಕ್ಷಕರ ಆಯ್ಕೆಯ 'ಅತ್ಯುತ್ತಮ ಸ್ಕೂಟರ್' ಪ್ರಶಸ್ತಿಗೂ ಭಾಜನವಾಗಿತ್ತು. ಈಗ ಆಗಮನವಾಗಿರುವ ಜೂಪಿಟರ್ ವಿಶೇಷ ಆವೃತ್ತಿಯು ದೇಶದಲ್ಲಿ ಸ್ಥಿತಗೊಂಡಿರುವ ಎಲ್ಲ ಟಿವಿಎಸ್ ಮಳಿಗೆಯಲ್ಲಿ ದೊರೆಯುತ್ತದೆ.

tvs jupiter

ಜೂಪಿಟರ್ ವೈಶಿಷ್ಟ್ಯಗಳು:
  • ಟ್ವಿನ್ ಸಿಟಿ ಲ್ಯಾಂಪ್,
  • ಎಲ್‌‌ಇಡಿ ಟೈಲ್,
  • ಸಿಂಗಲ್ ಸಿಲಿಂಡರ್ ಅಲ್ಯೂಮಿನಿಯಂ 110ಸಿಸಿ ಎಂಜಿನ್,
  • 8 ಬಿಎಚ್‌ಪಿ ಮತ್ತು 8 ಎನ್‌ಎಂ ಟಾರ್ಕ್,
  • 12 ಇಂಚು ಅಲಾಯ್ ವೀಲ್,
  • ಮೊಬೈಲ್ ಚಾರ್ಜಿಂಗ್ ಪಾಯಿಂಟ್,
  • ಹೆಲ್ಮೆಟ್ ಸ್ಟೋರೆಜ್ ಸ್ಪೇಸ್,
  • ಇಕೊನೊಮೀಟರ್

More from DriveSpark

Article Published On: Monday, January 19, 2015, 13:05 [IST]
English summary
In celebration of TVS Jupiter’s completion of one year as India’s most awarded scooter ever, TVS Motor Company is bringing out a Special Edition TVS Jupiter. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+