ಮತ್ತಷ್ಟು ಹೊಸ ಬೈಕ್ ಗಳನ್ನು ಬಿಡುಗಡೆ ಮಾಡಲಿರುವ ಟಿವಿಎಸ್
ಇದೀಗಷ್ಟೇ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್, 2015 ಫೀನಿಕ್ಸ್ 125 ಮಾದರಿಯನ್ನು ಪರಿಚಯಿಸಿತ್ತು. ಇದೀಗ ಚೆನ್ನೈ ಮೂಲದ ಈ ಸಂಸ್ಥೆಯು ಪ್ರಸಕ್ತ ಸಾಲಿನಲ್ಲೇ ಮತ್ತಷ್ಟು ಆಕರ್ಷಕ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಇದರಲ್ಲಿ ಮಾರಾಟ ನಿಲುಗಡೆ ಹೊಂದಿರುವ ವಿಕ್ಟರ್ ಪ್ರಯಾಣಿಕ್ ಬೈಕ್ ಸೇರಿದಂತೆ ಇನ್ನಿತರ ಪ್ರಮುಖ ಪ್ರೀಮಿಯಂ ಮಾದರಿಗಳು ಸೇರಿದೆ. ವರದಿಗಳ ಪ್ರಕಾರ ಪ್ರಯಾಣಿಕ ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ಗಟ್ಟಿ ಮಾಡುವ ಇರಾದೆ ಹೊಂದಿರುವ ಟಿವಿಎಸ್, ಎಲ್ಲ ಹೊಸತನಗಳಿಂದ ಕೂಡಿರುವ ವಿಕ್ಟರ್ ಪುನರ್ ಬಿಡುಗಡೆ ಮಾಡಲಿದೆ.

ಇದರ ಜೊತೆಗೆ ಪ್ರೀಮಿಯಂ ಮಾದರಿಗಳತ್ತವೂ ಟಿವಿಎಸ್ ಗಮನ ಕೇಂದ್ರಿಕರಿಸಲಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಜರ್ಮನಿಯ ಐಷಾರಾಮಿ ಬಿಎಂಡಬ್ಲ್ಯು ಮೊಟೊರಾಡ್ ಜೊತೆಗೆ ಟಿವಿಎಸ್ ಹೊಂದಾಣಿಕೆ ಮಾಡಿಕೊಂಡಿತ್ತು. ಈ ಎರಡು ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಬೈಕ್ 2015ನೇ ಸಾಲಿನಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.
ಹಣಕ್ಕೆ ತಕ್ಕಂತೆ ಗರಿಷ್ಠ ವೈಶಿಷ್ಟ್ಯಗಳನ್ನು ನೀಡುವುದು ಸಂಸ್ಥೆಯ ಗುರಿಯಾಗಿರಲಿದೆ. ಟಿವಿಎಸ್-ಬಿಎಂಡಬ್ಲ್ಯು ಮಾದರಿಯು ಭರ್ಜರಿ 500 ಸಿಸಿ ಎಂಜಿನ್ ಪಡೆದುಕೊಳ್ಳಲಿದ್ದು, ಗರಿಷ್ಠ ನಿರ್ವಹಣೆಯನ್ನು ನೀಡಲಿದೆ. ಒಟ್ಟಿನಲ್ಲಿ ದೇಶದಲ್ಲಿ ಭರ್ಜರಿ ಮಾರಾಟವನ್ನೇ ಟಿವಿಎಸ್ ಎದುರು ನೋಡುತ್ತಿದೆ.


Click it and Unblock the Notifications








