ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿರುವ ಬೈಕ್‌ಗಳು

By Nagaraja

ಹೊಸ ಬೈಕ್ ಖರೀದಿಸುವ ಯೋಜನೆಯಲ್ಲಿದ್ದೀರಾ ? ಸ್ವಲ್ಪ ತಡೆಯಿರಿ. ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿರುವ ಕೆಲವು ಗಮನಾರ್ಹ ಬೈಕ್ ಗಳ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ.

Also Read: ವಾಹನ ಪ್ರೇಮಿಗಳು ಓಡಿಸಲೇಬೇಕಾದ 10 ಬೈಕ್ ಗಳು

ವಿಸ್ತಾರವಾಗಿ ಹರಡಿರುವ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳಿಗೂ ಅತ್ಯಂತ ಹೆಚ್ಚು ಬೇಡಿಕೆಯಿದೆ. 2016 ಆಟೋ ಎಕ್ಸ್ ಪೋ ನಿಕಟವಾಗಿರುವಂತೆಯೇ ಪ್ರತಿಯೊಂದು ಮುಂಚೂಣಿಯ ಸಂಸ್ಥೆಯುಗಳು ಹೊಸ ಹೊಸ ಮಾದರಿಗಳೊಂದಿಗೆ ಮುಂದೆ ಬರಲಿರುವುದಂತೂ ಗ್ಯಾರಂಟಿ. ಸದ್ಯ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಕೆಲವು ಬೈಕ್ ಗಳ ಬಗ್ಗೆ ತಿಳಿದುಕೊಳ್ಳಿರಿ. ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

2015 ಟಿವಿಎಸ್ ವಿಕ್ಟರ್

2015 ಟಿವಿಎಸ್ ವಿಕ್ಟರ್

2016 ಆಟೋ ಎಕ್ಸ್ ಪೋದಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆ ಹೊಂದಿರುವ ಟಿವಿಎಸ್ 2015 ಟಿವಿಎಸ್ ವಿಕ್ಟರ್ 110 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 125 ಸಿಸಿ ವಿಭಾಗದಲ್ಲೂ ಲಭ್ಯವಾಗಲಿದೆ.

ಅಂದಾಜು ಬೆಲೆ: 50,000 ರು.ಗಳಿಂದ 52,000 ರು.

ಟಿವಿಎಸ್ ಅಪಾಚೆ

ಟಿವಿಎಸ್ ಅಪಾಚೆ

ನಾವು ಈಗಾಗಲೇ ವರದಿ ಮಾಡಿರುವಂತೆಯೇ ಟಿವಿಎಸ್ ಮೋಟಾರು ಸಂಸ್ಥೆಯು ಮಗದೊಂದು ಐಕಾನಿಕ್ ಬೈಕ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಈ ಮೊದಲು 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿರುವ ಡ್ರೇಕನ್ ಕಾನ್ಸೆಪ್ಟ್ ಮಾದರಿಯಿಂದ ಸ್ಪೂರ್ತಿ ಪಡೆದು ನೂತನ ಅಪಾಚೆ ನಿರ್ಮಿಸಲಾಗುತ್ತಿದೆ. ಇದರಲ್ಲಿ ಐಚ್ಛಿಕ ಎಬಿಎಸ್ ಮುಂತಾದ ವೈಶಿಷ್ಟ್ಯಗಳು ಲಭ್ಯವಾಗಲಿದ್ದು, ಪ್ರಮುಖುವಾಗಿ ಬಜಾಜ್ ಪಲ್ಸರ್ 200 ಎನ್ ಎಸ್, ಹೋಂಡಾ ಸಿಬಿಆರ್250ಆರ್ ಮತ್ತು ಹೀರೊ ಎಚ್ ಎಕ್ಸ್250 ಆರ್ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಕೆಟಿಎಂ 1050 ಅಡ್ವೆಂಚರ್

ಕೆಟಿಎಂ 1050 ಅಡ್ವೆಂಚರ್

ನಮಗೆ ಲಭಿಸಿರುವ ಮಾಹಿತಿಯು ಸತ್ಯವಾದ್ದಲ್ಲಿ ಕ್ರೀಡಾ ಬೈಕ ವಿಭಾಗದಲ್ಲಿ ರಾರಾಜಿಸುತ್ತಿರುವ ಕೆಟಿಎಂ ಶಕ್ತಿಶಾಲಿ 1055 ಸಿಸಿ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲಿದೆ. ಇದು 107 ಎನ್ ಎಂ ತಿರುಗುಬಲದಲ್ಲಿ 95 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಎಬಿಎಸ್ ಜೊತೆಗೆ ನಾಲ್ಕು ವಿಭಿನ್ನ ಚಾಲನಾ ವಿಧಗಳು ಇದರಲ್ಲಿರುತ್ತದೆ.

ಚಾಲನಾ ವಿಧ - ಸ್ಪೋರ್ಟ್, ಸ್ಟ್ರೀಟ್, ರೈನ್ ಮತ್ತು ಆಫ್ ರೋಡ್

ಹೋಂಡಾ ಸಿಬಿ500ಎಫ್

ಹೋಂಡಾ ಸಿಬಿ500ಎಫ್

471 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ನಿಯಂತ್ರಿತ ಹೋಂಡಾ ಸಿಬಿ500 ಎಫ್ 47 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಮುಂದಿನ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹೋಂಡಾ ಸಿಬಿ300ಎಫ್

ಹೋಂಡಾ ಸಿಬಿ300ಎಫ್

2.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಸಿಬಿ300ಎಫ್ ಅತಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇದರ ಸಿಂಗಲ್ ಸಿಲಿಂಡರ್ ಎಂಜಿನ್ 27 ಎನ್ ಎಂ ತಿರುಗುಬಲದಲ್ಲಿ 30 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೀರೊ ಎಚ್‌ಎಕ್ಸ್250ಆರ್

ಹೀರೊ ಎಚ್‌ಎಕ್ಸ್250ಆರ್

ಒಂಬತ್ತು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗತೆಯನ್ನು ಪಡೆಯಲಿರುವ ಹೋಂಡಾ ಎಚ್‌ಎಕ್ಸ್250ಆರ್, 249 ಸಿಸಿ, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಅಂದಾಜು ಬೆಲೆ: 1.5 ಲಕ್ಷ ರು.ಗಳಿಂದ 2 ಲಕ್ಷ ರು.

ಬಿಎಂಡಬ್ಲ್ಯು ಕೆ03

ಬಿಎಂಡಬ್ಲ್ಯು ಕೆ03

ಕೆ03 ಕೋಡ್ ಪಡೆದುಕೊಂಡಿರುವ ಬಿಎಂಡಬ್ಲ್ಯು ಹೊಸ ಬೈಕ್ ಈಗಾಗಲೇ ಗರಡಿಯಲ್ಲಿ ಸಿದ್ಧಗೊಳ್ಳುತ್ತಿದ್ದು, ಟಿವಿಎಸ್ ಸಹಯೋಗದಲ್ಲಿ ಭಾರತವನ್ನು ಪ್ರವೇಶಿಸಲಿದೆ. ಅದುವೇ ಜಿ 310 ಆರ್. ಇದು 500 ಸಿಸಿ ಒಳಗಡೆ ಬಿಎಂಡಬ್ಲ್ಯು ಮೊಟೊರಾಡ್ ನಿಂದ ನಿರ್ಮಾಣವಾಗುತ್ತಿರುವ ಮೊದಲ ಬೈಕ್ ಆಗಿದೆ.

ಬಜಾಜ್ ಪಲ್ಸರ್ ಆರ್‌ಎಸ್400

ಬಜಾಜ್ ಪಲ್ಸರ್ ಆರ್‌ಎಸ್400

ದೇಶದ ನಂ.1 ಕ್ರೀಡಾ ಬೈಕ್ ತಯಾರಕ ಸಂಸ್ಥೆಯಾಗಿರುವ ಬಜಾಜ್ ಹೆಚ್ಚು ಶಕ್ತಿಶಾಲಿ ಪಲ್ಸರ್ ಆರ್‌ಎಸ್400 ಮಾದರಿಯನ್ನು ಬಿಡುಗಡೆ ಮಾಡಲಿದೆ.

ಅಂದಾಜು ಬೆಲೆ: 1.7 ಲಕ್ಷ ರು.ಗಳಿಂದ 1.8 ಲಕ್ಷ ರು.

ಪ್ರತಿಸ್ಪರ್ಧಿ: ಹೋಂಡಾ ಸಿಬಿಆರ್300ಆರ್

 ಬಜಾಜ್ ಪಲ್ಸರ್ 150ಎನ್‌ಎಸ್

ಬಜಾಜ್ ಪಲ್ಸರ್ 150ಎನ್‌ಎಸ್

ಹೊಸ ಪಲ್ಸರ್ 150ಎನ್‌ಎಸ್ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಉತ್ಸುಕರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಇದರ 149.5 ಸಿಸಿ ಎಂಜಿನ್ 13 ಎನ್‌ಎಂ ತಿರುಗುಬಲದಲ್ಲಿ 16.8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂದಾಜು ಬೆಲೆ: 70,000 ರು.ಗಳಿಂದ 75,000 ರು.

ಎಪ್ರಿಲಿಯಾ ಆರ್‌ಎಸ್‌ವಿ4

ಎಪ್ರಿಲಿಯಾ ಆರ್‌ಎಸ್‌ವಿ4

ನಿಕಟ ಭವಿಷ್ಯದಲ್ಲೇ ಭಾರತಕ್ಕೆ ಆಗಮನವಾಗಲಿರುವ ಬೈಕ್ ಗಳಲ್ಲಿ ಎಪ್ರಿಲಿಯಾ ಆರ್‌ಎಸ್‌ವಿ4 ಒಂದಾಗಿದೆ. ಇದರ ಪವರ್ ಫುಲ್ 999.6 ಸಿಸಿ ಎಂಜಿನ್ 115 ಎನ್‌ಎಂ ತಿರುಗುಬಲಲ್ಲಿ 201 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮೂರು ಚಾಲನಾ ವಿಧಗಳು: ಟ್ರ್ಯಾಕ್, ಸ್ಪೋರ್ಟ್ ಮತ್ತು ರೇಸ್.

ಇವನ್ನೂ ಓದಿ

ದೇಶದ ಅಗ್ರ 10 ಬೈಕ್ ಗಳತ್ತ ಒಂದು ರೌಂಡಪ್

More from DriveSpark

Article Published On: Monday, November 16, 2015, 9:26 [IST]
English summary
Upcoming motorcycles in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+