'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

By Super

ಇಂದಿನ ರಸ್ತೆಗಳ ಅವ್ಯವಸ್ಥೆ, ಟ್ರಾಫಿಕ್ ಜಾಮ್, ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆ ನೋಡಿದರೆ ಯಾವ ಗಾಡಿ ಸಹವಾಸವೂ ಬೇಡ ಎಂದು ಕೈಮುಗಿಯುವವರೇ ಹೆಚ್ಚು. ಆದರೂ ಆಟೋಮೊಬೈಲ್ ಕಂಪನಿಗಳು ನಾನಾ ವಿನ್ಯಾಸದ, ಬಣ್ಣಗಳ ಅತ್ಯಧಿಕ ಮೈಲೇಜ್, ಕಾರ್ಯಕ್ಷಮತೆಯ ವಾಹನಗಳನ್ನು ರಸ್ತೆಗೆ ಇಳಿಸಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇವೆ.

ಇದನ್ನೂ ಓದಿ: ತುಮಕೂರು ಹುಡುಗನ ವೆಸ್ಪಾ ಸಾಧನೆಯ ಹಿನ್ನೆಲೆ

ಇದನ್ನೂ ಓದಿ: ತುಮಕೂರಿನ ವೆಸ್ಪಾ ಸ್ಕೂಟರ್ ಗೆ ಲಿಮ್ಕಾ ದಾಖಲೆಯ ಗರಿ

ಆ ರೀತಿ ಬಂದ ದ್ವಿಚಕ್ರ ವಾಹನಗಳಲ್ಲಿ ಅಬಾಲವೃದ್ಧರಾಗಿ ಎಲ್ಲರನ್ನೂ ತನ್ನ ಮೋಹಕ ಮೈಮಾಟದಿಂದ ಸೆಳೆದು ರಸ್ತೆಗಿಳಿದ ಚೆಂದುಳ್ಳಿ ಚೆಲುವೆ 'ವೆಸ್ಪಾ' ಸ್ಕೂಟರ್. ಈ ಸ್ಕೂಟರ್ ಗೆ ಫಿದಾ ಆಗದವೇ ಇಲ್ಲ. ಅತ್ಯಾಕರ್ಷಕ ಬಣ್ಣಗಳು, ವಿನ್ಯಾಸ, ರಸ್ತೆ ಮೇಲೆ ಸಾಗುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದು ಎಂಬ ಭಾವ. ರಸ್ತೆ ನಡುವೆ ಸಾಗಿಹೋಗುವ ಈ ಬಿಂಕದ ಚೆಲುವೆಗೆ ಹೊಸ ವಿನ್ಯಾಸದ ಜರತಾರಿ ಸೀರೆ ಉಡಿಸಿ ಇನ್ನೊಂದಿಷ್ಟು ಸಿಂಗಾರ ಮಾಡಿ ಎಲ್ಲರ ಗಮನಸೆಳೆಯುವಂತೆ ಮಾಡಿದ್ದಾರೆ ತುಮಕೂರಿನ ಪ್ರತಿಭಾವಂತ ಯುವಕ ಪ್ರತೀಕ್ ಜೈನ್.

'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

ತನ್ನ ಕಲಾಸ್ಪರ್ಶದಿಂದ ವೆಸ್ಪಾ ಸ್ಕೂಟರ್ ನ ನೋಟ ಬದಲಾಯಿಸಿದ್ದಷ್ಟೇ ಅಲ್ಲದೆ ಈ ವಿಶೇಷ ವಿನ್ಯಾಸಕ್ಕಾಗಿ ಹೊಸ ದಾಖಲೆಗೂ ಪಾತ್ರರಾಗಿದ್ದಾರೆ. 2015ರ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಅವರ ವೆಸ್ಪಾ ವಿನ್ಯಾಸ ದಾಖಲಾಗಿದೆ.

'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

"ವೆಸ್ಪಾ ಸ್ಕೂಟರ್ ಟೆಸ್ಟ್ ಡ್ರೈವ್ ಮಾಡಿದ ಮರುದಿನವೇ ಅದು ನಮ್ಮ ಮನೆ ಮುಂದಿತ್ತು. ಇದೀಗ ನಾನು ವೆಸ್ಪಾದ ಸಂತೃಪ್ತ ಗ್ರಾಹಕರಲ್ಲಿ ಒಬ್ಬ. ಬೆಸ್ಟ್ ಸ್ಕೂಟರ್ ತಯಾರಿಸಿದ ಪಿಯಾಗಿಯೋ ಕಂಪನಿಗೆ ಅನಂತ ಧನ್ಯವಾದಗಳು" ಎನ್ನುವ ಪ್ರತೀಕ್ ಅವರನ್ನು ಈಗ ಎಲ್ಲರೂ "ವೆಸ್ಪಾ ಪ್ರತೀಕ್" ಎಂದು ಕರೆಯುವಂತಾಗಿದೆ.

'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

ಕೇವಲ 2 ಗಂಟೆಗಳಲ್ಲಿ ವೆಸ್ಪಾ ಎಂಬ ಚೆಲುವೆಯನ್ನು ಗ್ರಾಫಿಕ್ಸ್ ಮೂಲಕ ಇನ್ನಷ್ಟು ಮೆರುಗು ನೀಡಿ ಬೆರಗಾಗುವಂತೆ ಮಾಡಿದ್ದಾರೆ. ವೆಸ್ಪಾ ಮೇಲೆ ಅತ್ಯಧಿಕ ಸಂಖ್ಯೆಯ ಗ್ರಾಫಿಕ್ ಡಿಸೈನ್ಸ್ ಬಳಸಿರುವ ಕಾರಣಕ್ಕೆ ವಿಶ್ವದಾಖಲೆಗೂ ಅವರ ಡಿಸೈನ್ ಪಾತ್ರವಾಗಿದೆ.

'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

ಪ್ರತೀಕ್ ಅವರ ಕಲೆಗಾರಿಕೆಯನ್ನು ಮೆಚ್ಚಿರುವ ವೆಸ್ಪಾ ಕಂಪನಿ ತನ್ನ ವೆವ್ ಸೈಟ್ ನಲ್ಲಿ ಅವರ ಸಾಧನೆಯನ್ನು ಕೊಂಡಾಡಿದೆ. ಪ್ರತೀಕ್ ಅವರಿಂದ ವಿವರಗಳನ್ನು ಪಡೆದುಕೊಂಡು ತನ್ನ ವೆಬ್ ತಾಣದಲ್ಲಿ ಅದನ್ನು ಪ್ರಕಟಿಸಿದೆ. ಆ ಲೇಖನವನ್ನು ಇಲ್ಲಿ ಓದಬಹುದು

'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

ಈ ರೀತಿಯ ದಾಖಲೆಗಳನ್ನು ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಅತ್ಯಂತ ಕಡಿಮೆ ಸಮಯದಲ್ಲಿ 36 ವೆಬ್ ಸೈಟ್ ಗಳನ್ನು ಸೃಷ್ಟಿಸಿ ರಾಷ್ಟ್ರ ದಾಖಲೆ ಮಾಡಿದ್ದರು. ಈಗ ಅವರ ಕಣ್ಣು ವೆಸ್ಪಾ ಮೇಲೆ ಬಿದ್ದು ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ.

'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

"ಇಟಾಲಿಯನ್ ಸ್ಟೈಲ್ ಹಾಗೂ ಡಿಸೈನ್ ಕಾರಣದಿಂದ ವೆಸ್ಪಾ ಸ್ಕೂಟರನ್ನು ಈ ರೀತಿಯ ವಿನ್ಯಾಸಕ್ಕಾಗಿ ತಾನು ಆಯ್ಕೆ ಮಾಡಿಕೊಂಡೆ ಎನ್ನುವ ಪ್ರತೀಕ್, ಅದಕ್ಕೆ ಗ್ರಾಫಿಕ್ಸ್ ಮಾಡಿದ ದಿನ ಬೆಂಗಳೂರಿನಲ್ಲಿ 80 ಕಿ.ಮೀ ಓಡಾಡಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದರು.

'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

ಇನ್ನೂ 23ರ ಹರೆಯದ ಪ್ರತೀಕ್ ಜೈನ್ ಮನಸ್ಸಿನಲ್ಲಿ ಈ ರೀತಿಯ ಹತ್ತು ಹಲವಾರು ದಾಖಲೆಗಳನ್ನು ಮಾಡುವ ಹಂಬಲ, ಛಲ ಇದೆ. ವಾರಾಂತ್ಯಗಳಲ್ಲಿ ಗೆಳೆಯರ ಜೊತೆ ಸೇರಿ ತನ್ನ ಮುದ್ದಿನ ವೆಸ್ಪಾ ಜೊತೆಗೆ ಪ್ರಯಾಣಿಸುವುದು ಪ್ರತೀಕ್ ಹವ್ಯಾಸಗಳಲ್ಲಿ ಒಂದು.

'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

ಈ ಕನಸುಗಾರ ಯುವಕನ ಕಣ್ಣುಗಳಲ್ಲಿ ಮುಂದೊಮ್ಮೆ ತಾನು ವೆಸ್ಪಾ ಸ್ಕೂಟರ್ ರಾಯಭಾರಿ ಆಗಬೇಕೆಂಬ ಬಹು ದೊಡ್ಡ ಕನಸು ಇದೆ. ಆ ಕನಸು ನನಸಾಗಲಿ ಎಂದು ಆಶಿಸೋಣ.

'ವೆಸ್ಪಾ' ಚೆಲುವೆಗೆ ಹೊಸ ವಿನ್ಯಾಸದ ಸೀರೆ ಉಡುಸಿದ ಯುವಕ

ಪ್ರತೀಕ್ ವೆಸ್ಪಾದಲ್ಲಿ ನಟಿ ಶ್ವೇತಾ ಪಂಡಿತ್ - ಡಬಲ್ ಧಮಾಕಾ

More from DriveSpark

Article Published On: Tuesday, June 30, 2015, 9:18 [IST]
English summary
Prathik Jain from Karnataka, set a world record by creating the most number of graphical designs on a Vespa.
Read more on ವೆಸ್ಪಾ vespa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+