2 ಹೊಸ ಸ್ಕೂಟರ್ ಗಳನ್ನು ಬಿಡುಗಡೆ ಮಾಡಲಿರುವ ವೆಸ್ಪಾ
ಇಟಲಿ ಮೂಲದ ಐಕಾನಿಕ್ ಸ್ಕೂಟರ್ ಬ್ರಾಂಡ್ ವೆಸ್ಪಾ, ಎರಡು ಹೊಸ ಸ್ಕೂಟರ್ ವೆರಿಯಂಟ್ ಗಳನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಬಲ್ಲ ಮೂಲಗಳ ವೆಸ್ಪಾ ಪ್ರೀಮಿಯಂ ಸ್ಕೂಟರ್ ಗಳು ಸೆಪ್ಟೆಂಬರ್ 01ರಂದು ಭಾರತದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.
ವೆಸ್ಪಾ ಸಂಸ್ಥೆಯ ಜಾಗತಿಕ ಮುಖ್ಯ ಪ್ರಚಾರ ರಾಯಭಾರಿ ಆಗಿರುವ ಇಟಲಿಯ ಖ್ಯಾತ ಫುಟ್ಬಾಲ್ ಆಟಗಾರ ಅಲೆಸ್ಸ್ಯಾಂಡ್ರೋ ಡೆಲ್ ಪಿಯರೋ ಅವರು ನೂತನ ಶ್ರೇಣಿಯ ಸ್ಕೂಟರ್ ಗಳನ್ನು ದೇಶಕ್ಕೆ ಪರಿಚಯಿಸಲಿದ್ದಾರೆ.

ಇದು ಈಗ ಮಾರಾಟದಲ್ಲಿರುವ ವೆಸ್ಪಾ ವಿಎಕ್ಸ್ ಹಾಗೂ ವೆಸ್ಪಾ ಎಸ್ ಮಾದರಿಗಳ ಟಾಪ್ ಎಂಡ್ ವೆರಿಯಂಟ್ ಆಗಿರಲಿದೆ. ಅಲ್ಲದೆ ಅನುಕ್ರಮವಾಗಿ ವೆಸ್ಪಾ ವಿಎಕ್ಸ್ ಎಲ್ ಮತ್ತು ವೆಸ್ಪಾ ಎಸ್ ಎಕ್ಸ್ ಎಲ್ ಎಂದು ಹೆಸರಿಸಿಕೊಳ್ಳಲಿದೆ.
ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇವೆರಡು 125 ಸಿಸಿ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 10.6 ಎನ್ ಎಂ ತಿರುಗುಬಲದಲ್ಲಿ 10 ಅಶ್ವಶಕ್ತಿ ಉತ್ಪಾದಿಸಲಿದೆ. ಇವೆಲ್ಲದರ ಜೊತೆಗೆ ಸಿವಿಟಿ ಟ್ರಾನ್ಸ್ ಮಿಷನ್ ಸಹ ಇರಲಿದೆ.
ಹೊಸ ವೆರಿಯಂಟ್ ಗಳಲ್ಲಿ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ಆಲಾಯ್ ವೀಲ್ ಮತ್ತು ಹೊಸ ಬಣ್ಣಗಳ ಆಯ್ಕೆಗಳು ಕಂಡುಬರಲಿದೆ. ಅಂತೆಯೇ ಸಾಮಾನ್ಯ ಮಾದರಿಗಿಂತಲೂ ಮೂರರಿಂದ ನಾಲ್ಕು ಸಾವಿರ ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








