ಅಚ್ಚರಿ...ಅಚ್ಚರಿ...ಯುವಿ ಬ್ಯಾಕ್ ಇನ್ ಆಕ್ಷನ್
ಭಾರತ ಕಂಡ ಸರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್ ಕ್ರಿಕೆಟ್ ಆಟಗಾರರರಲ್ಲಿ ಓರ್ವರಾಗಿರುವ ಯುವರಾಜ್ ಸಿಂಗ್, 2015 ಐಸಿಸಿ ಕ್ರಿಕೆಟ್ ಏಕದಿನ ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳದೇ ಹೋಗಿರಬಹುದು. ಆದರೆ ಅಕ್ಕರೆಯಿಂದ ಯುವಿ ಎಂದು ಕರೆಯಲ್ಪಡುವ ಯುವರಾಜ ಈಗ ಬೇರೆನೇ ವಿಷಯದಲ್ಲಿ ಸುದ್ದಿಯಲಿದ್ದಾರೆ.
ಕ್ರಿಕೆಟ್ ಬಿಟ್ಟರೆ ಯುವಿ ಕೂಡಾ ಓರ್ವ ಅಪ್ಪಟ ವಾಹನ ಪ್ರೇಮಿಯಾಗಿದ್ದಾರೆ. ಈಗ ಇದೇ ಮುಂಬರುವ ಫೆಬ್ರವರಿ 21 ಹಾಗೂ 22ರಂದು ಗೋವಾದಲ್ಲಿ ನಡೆಯಲಿರುವ ಇಂಡಿಯಾ ಬೈಕ್ ವೀಕ್‌ನಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ.

ನಾವಿಲ್ಲಿ ಶೀರ್ಷಿಕೆಯಲ್ಲಿ 'ಯುವಿ ಬ್ಯಾಕ್ ಇನ್ ಆಕ್ಷನ್' ಎಂದು ಉಲ್ಲೇಖಿಸಲು ಕಾರಣವೊಂದಿದೆ. ಏಕೆಂದರೆ ಯುವರಾಜ್ ಕಸ್ಟಮೈಸ್ಡ್ ಮಾಡಿರುವ 'ಯುವಿಕ್ಯಾನ್ ಎಕ್ಸ್12' (YOUWECAN X12)ಇದೇ ಬೈಕ್ ಹಬ್ಬದಲ್ಲಿ ವಿಶೇಷ ಪ್ರದರ್ಶನ ಕಾಣುತ್ತಿದೆ.
ಯುವರಾಜ್ ಅವರ ಯು ವಿ ಕ್ಯಾನ್ ಎಕ್ಸ್12 ಬೈಕ್ ಅನ್ನು ಆಟೋಲೋಗ್ ಡಿಸೈನ್ ವಿನ್ಯಾಸಗೊಳಿಸಿದೆ. ಇದನ್ನು ಕೆಟಿಎಂ ಬೈಕ್ ತಳಹದಿಯಲ್ಲಿ ನಿರ್ಮಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂಡಿಯಾ ಬೈಕ್ ವೀಕ್‌ನಲ್ಲಷ್ಟೇ ಬಹಿರಂಗಪಡಿಸಲಾಗುವುದು.


Click it and Unblock the Notifications








