2017 ಬಜಾಜ್ ಪಲ್ಸರ್ 150, 180 ಮತ್ತು 220ಎಫ್ ಬಿಡುಗಡೆಗೆ ರೆಡಿ

2017 ಪಲ್ಸರ್ ಶ್ರೇಣಿಯ ಮೂರು ಬೈಕ್ ಗಳನ್ನು ಬಿಡುಗಡೆ ಮಾಡಲು ಬಜಾಜ್ ಆಟೋ ಸಜ್ಜಾಗಿದೆ.

By Nagaraja

ದೇಶದ ನಂ.1 ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ನಿರ್ಮಾಣ ಸಂಸ್ಥೆಯಾಗಿರುವ ಬಜಾಜ್ ಆಟೋ, ಮಾರುಕಟ್ಟೆಯಲ್ಲಿ ತಾಜಾತನ ಕಾಪಾಡಿಕೊಳ್ಳುವ ಭಾಗವಾಗಿ ಅತಿ ಶೀಘ್ರದಲ್ಲೇ ಪಲ್ಸರ್ ಶ್ರೇಣಿಯ ತ್ರಿವಳಿ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಆಕರ್ಷಕ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ.

2017 ಬಜಾಜ್ ಪಲ್ಸರ್ 150, 180 ಮತ್ತು 220ಎಫ್ ಬಿಡುಗಡೆಗೆ ರೆಡಿ

2017 ಪಲ್ಸರ್ 135, ಪಲ್ಸರ್ 150 ಜೊತೆಗೆ 220ಎಫ್ ಮಾದರಿಗಳನ್ನು ಬಿಡುಗಡೆ ಮಾಡಲು ಬಜಾಜ್ ಸಜ್ಜಾಗುತ್ತಿದೆ. ಈ ಪೈಕಿ ಪಲ್ಸರ್ 150 ಆಗಾಗಲೇ ಡೀಲರುಗಳನ್ನು ತಲುಪಿದೆ.

2017 ಬಜಾಜ್ ಪಲ್ಸರ್ 150, 180 ಮತ್ತು 220ಎಫ್ ಬಿಡುಗಡೆಗೆ ರೆಡಿ

ಅಂದತೆಯಲ್ಲಿ ಬದಲಾವಣೆ ಜೊತೆಗೆ ಪರಿಷ್ಕೃತ ಎಂಜಿನ್ ಗಳನ್ನು ನೂತನ ಪಲ್ಸರ್ ಗಿಟ್ಟಿಸಿಕೊಳ್ಳಲಿದೆ. ಇಲ್ಲಿ ಅತಿ ಮುಖ್ಯ ಘಟಕವೆಂದರೆ ಭಾರತ್ ಸ್ಟೇಜ್ IV ಎಂಜಿನ್ ನಿಂದ ಜೋಡಣೆಯಾಗಲಿದೆ.

2017 ಬಜಾಜ್ ಪಲ್ಸರ್ 150, 180 ಮತ್ತು 220ಎಫ್ ಬಿಡುಗಡೆಗೆ ರೆಡಿ

ಈ ಎಲ್ಲ ಮೂರು ಪಲ್ಸರ್ ಶ್ರೇಣಿಯ ಬೈಕ್ ಗಳು 2016 ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ತದಾ ನಂತರ ಬುಕ್ಕಿಂಗ್ ಆರಂಭವಾಗಲಿದ್ದು, 2017ನೇ ಸಾಲಿನಿಂದ ವಿತರಣೆಯಾಗಲಿದೆ.

2017 ಬಜಾಜ್ ಪಲ್ಸರ್ 150, 180 ಮತ್ತು 220ಎಫ್ ಬಿಡುಗಡೆಗೆ ರೆಡಿ

ಏನೆಲ್ಲ ವೈಶಿಷ್ಟ್ಯಗಳು ಇರಲಿದೆ ಎಂಬುದು ಇನ್ನೂ ನಿಗೂಢವಾಗಿದೆ. ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಕ್ಸಾಸ್ಟ್ ಸಿಸ್ಟಂ, ಕಾಂಬಿ ಬ್ರೇಕ್ ಸಿಸ್ಟಂ ಜೊತೆಗೆ ಎಬಿಎಸ್ ನಿರೀಕ್ಷೆ ಮಾಡಬಹುದಾಗಿದೆ.

2017 ಬಜಾಜ್ ಪಲ್ಸರ್ 150, 180 ಮತ್ತು 220ಎಫ್ ಬಿಡುಗಡೆಗೆ ರೆಡಿ

ಇನ್ನು ಎಲ್ಲ ಮೂರು ಪಲ್ಸರ್ ಶ್ರೇಣಿಯ ಬೈಕ್ ಗಳಲ್ಲಿ ಹೊಸ ಬಣ್ಣಗಳು ಮತ್ತು ಗ್ರಾಫಿಕ್ಸ್ ಗಳು ವಿನ್ಯಾಸಕ್ಕೆ ಹೆಚ್ಚಿನ ಆಕರ್ಷಣೆಯನ್ನು ಪ್ರದಾನ ಮಾಡಲಿದೆ.

2017 ಬಜಾಜ್ ಪಲ್ಸರ್ 150, 180 ಮತ್ತು 220ಎಫ್ ಬಿಡುಗಡೆಗೆ ರೆಡಿ

ಈ ನಡುವೆ ಹೈದರಾಬಾದ್ ಡೀಲರುಗಳನ್ನು ನೂತನ ಪಲ್ಸರ್ 150 ಬೈಕ್ ತಲುಪಿದೆ. ಇದು ಟ್ಯೂಬ್ ಲೆಸ್ ಚಕ್ರಗಳನ್ನು ಒಳಗೊಂಡಿರುವುದು ಗಮನಾರ್ಹವೆನಿಸಿದೆ.

2017 ಬಜಾಜ್ ಪಲ್ಸರ್ 150, 180 ಮತ್ತು 220ಎಫ್ ಬಿಡುಗಡೆಗೆ ರೆಡಿ

ನೂತನ ಪಲ್ಸರ್ 150 ಸಿಸಿ ಬೈಕ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 73,513 ರುಪಾಯಿಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

2017 ಬಜಾಜ್ ಪಲ್ಸರ್ 150, 180 ಮತ್ತು 220ಎಫ್ ಬಿಡುಗಡೆಗೆ ರೆಡಿ

ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಟಿವಿಎಸ್ ಅಪಾಚಿ ಆರ್ ಟಿಆರ್ 160, ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಮತ್ತು ಹೋಂಡಾ ಸಿಬಿ ಯೂನಿಕಾರ್ನ್ 150 ಮಾದರಿಗಳಿಗೆ ನೂತನ ಪಲ್ಸರ್ 150 ಬೈಕ್ ಪ್ರತಿಸ್ಪರ್ಧಿಯಾಗಲಿದೆ.

More from DriveSpark

Article Published On: Tuesday, November 29, 2016, 12:02 [IST]
English summary
2017 Edition Bajaj Pulsar Range Teased Ahead Of India Launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+