ಬಂದೇ ಬಿಡ್ತು ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

By Nagaraja

ಇಟಲಿಯ ಐಕಾನಿಕ್ ಪಿಯಾಜಿಯೊ ಸಂಸ್ಥೆಯ ದ್ವಿಚಕ್ರ ಬ್ರಾಂಡ್ ಆಗಿರುವ ಎಪ್ರಿಲಿಯಾ ಭಾರತಕ್ಕೆ ಕಾಲಿಡಲು ಸಜ್ಜಾಗಿದ್ದು, ಮಹಾರಾಷ್ಟ್ರದಲ್ಲಿ ಸ್ಥಿತಗೊಂಡಿರುವ ಪಿಯಾಜಿಯೊದ ಬರಮತಿ ಘಟಕದಿಂದ ಚೊಚ್ಚಲ ಎಪ್ರಿಲಿಯಾ ಎಸ್ ಆರ್ 150 ಸ್ಕೂಟರನ್ನು ಹೊರತರಲಾಗಿದೆ.

ವರ್ಷಾರಂಭದಲ್ಲಿ ನಡೆದ ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಎಪ್ರಿಲಿಯಾ ಎಸ್‌ಆರ್150, ಪ್ರಸಕ್ತ ತಿಂಗಳಾಂತ್ಯದಲ್ಲಿ ಬಿಡುಗಡೆ ಹಾಗೂ ವಿತರಣೆ ಪ್ರಕ್ರಿಯೆಯು ನಡೆಯಲಿದೆ.

ಬಂದೇ ಬಿಡ್ತು ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ದೇಶದ್ಯಾಂತ ಸ್ಥಿತಗೊಂಡಿರುವ ಪಿಯಾಜಿಯೊ ಡೀಲರ್ ಶಿಪ್ ಗಳ ಮುಖಾಂತರ ಎಪ್ರಿಲಿಯಾ ಎಸ್ ಆರ್150 ವಿತರಣೆಯಾಗಲಿದೆ. ಆಸಕ್ತ ಗ್ರಾಹಕರು ಪೇಟಿಎಂ ಮುಖಾಂತರವೂ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬಂದೇ ಬಿಡ್ತು ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಬರಮತಿ ಘಟಕದಿಂದ ಹೊಚ್ಚ ಹೊಸ ಮ್ಯಾಟ್ ಬ್ಲ್ಯಾಕ್ ಬಣ್ಣದ ಎಪ್ರಿಲಿಯಾ ಎಸ್ ಆರ್ 150 ಬೈಕನ್ನು ವಿಶೇಷ ಸಮಾರಂಭದಲ್ಲಿ ಹೊರತರಲಾಗಿದೆ.

ಬಂದೇ ಬಿಡ್ತು ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಎಪ್ರಿಲಿಯಾ ಎಸ್ ಆರ್ 150 ಅಧಿಕೃತ ಬಿಡುಗಡೆ ಹಾಗೂ ವಿತರಣೆ ಪ್ರಕ್ರಿಯೆಯು ಆಗಸ್ಟ್ ತಿಂಗಳಾಂತ್ಯದಲ್ಲಿ ನಡೆಯುವ ಸಂಭವವಿದೆ. ಇದು ವೆಸ್ಪಾ ಬಳಿಕ ಪಿಯಾಜಿಯೊ ದೇಶಕ್ಕೆ ಪರಿಚಯಿಸುತ್ತಿರುವ ಎರಡನೇ ಸ್ಕೂಟರ್ ಬ್ರಾಂಡ್ ಆಗಿದೆ.

ಬಂದೇ ಬಿಡ್ತು ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್ ಬೆಂಗಳೂರು ಆನ್ ರೋಡ್ ಬೆಲೆಯ ಪ್ರಕಾರ ಸರಿ ಸುಮಾರು 80,000 ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಅಲ್ಲದೆ 5,000 ರುಪಾಯಿ ಮುಂಗಡವಾಗಿ ಪಾವತಿಸಿ ನಿಮ್ಮ ನೆಚ್ಚಿನ ಎಪ್ರಿಲಿಯಾ ಸ್ಕೂಟರ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಬಂದೇ ಬಿಡ್ತು ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್ ನಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ. ವಿಶಿಷ್ಟ ಬಾಡಿ ಗ್ರಾಫಿಕ್ಸ್, ಡ್ಯುಯಲ್ ಟೋನ್ ಸೀಟು, ಕಾಂಪಾಕ್ಟ್ ಗ್ರಾಬ್ ರೈಲ್, ಟ್ವಿನ್-ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

ಬಂದೇ ಬಿಡ್ತು ಎಪ್ರಿಲಿಯಾ ಎಸ್‌ಆರ್150 ಸ್ಕೂಟರ್

154.4ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಎಪ್ರಿಲಿಯಾ ಎಸ್‌ಆರ್150, 11 ಎನ್‌ಎಂ ತಿರುಗುಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ವೆಸ್ಪಾ 150 ಸ್ಕೂಟರ್ ನಲ್ಲಿರುವುದಕ್ಕೆ ಸಮಾನವಾಗಿದೆ. ಅಂತೆಯೇ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

More from DriveSpark

Article Published On: Thursday, August 11, 2016, 17:47 [IST]
English summary
Piaggio Rolls Out The First Aprilia SR 150 From Its Baramati Plant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+