ಬಿರುಗಾಳಿ ಎಬ್ಬಿಸಿದ ಬೆನೆಲ್ಲಿ ಟೊರ್ನಡೊ 302
ಈಗಾಗಲೇ ಭಾರತಕ್ಕೆ ಭರ್ಜರಿ ಪಾದಾರ್ಪಣೆಗೈದಿರುವ ಇಟಲಿಯ ಐಕಾನಿಕ್ ಬೆನಲ್ಲಿ ಸಂಸ್ಥೆಯೀಗ 2016 ಆಟೋ ಎಕ್ಸ್ ಪೋದಲ್ಲಿ ತನ್ನ ಶ್ರೇಣಿಯ ಮತ್ತಷ್ಟು ಎಂಟ್ರಿ ಲೆವೆಲ್ ಬೈಕ್ ಗಳನ್ನು ಪ್ರದರ್ಶಿಸಿದೆ. ಇವುಗಳಲ್ಲಿ ಟೊರ್ನಡೊ 302 ಅತಿ ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಂಡಿತ್ತು.
ಭಾರತದಲ್ಲಿ ಡಿಎಸ್‌ಕೆ ಸಹಯೋಗದಲ್ಲಿ ಮಾರಾಟವನ್ನು ನಡೆಯಲಿರುವ ಬೆನೆಲ್ಲಿ, ಯುವ ಮನಸ್ಕರಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ. ಇದು ಟಿಎನ್‌ಟಿ 300 ಮಾದರಿಯ ಫೇರ್ಡ್ ಮಾದರಿಯಾಗಿದೆ.

ಎಂಜಿನ್ ತಾಂತ್ರಿಕತೆ
300 ಸಿಸಿ, ಇನ್ ಲೈನ್ ಟ್ವಿನ್ ಜೊತೆ ಡ್ಯುಯಲ್ ಓವರ್ ಹೆಡ್ ಕಾಮ್ ಶಾಫ್ಟ್,
35 ಅಶ್ವಶಕ್ತಿ (12,000 ಆರ್‌ಪಿಎಂ)
27 ಎನ್‌ಎಂ ತಿರುಗುಬಲ (9,000 ಆರ್‌ಪಿಎಂ)
6 ಸ್ಪೀಡ್ ಗೇರ್ ಬಾಕ್ಸ್
ವೇಗವರ್ಧನೆ
3.4 ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ.
ಗರಿಷ್ಠ ವೇಗ ಗಂಟೆಗೆ 154 ಕೀ.ಮೀ.
ಆಯಾಮ (ಎಂಎಂ)
ಉದ್ದ: 2157
ಅಗಲ: 746
ಎತ್ತರ: 1146
ಚಕ್ರಾಂತರ: 1410
ಗ್ರೌಂಡ್ ಕ್ಲಿಯರನ್ಸ್: 180
ಸಸ್ಪೆನ್ಷನ್, ಬ್ರೇಕ್
ಮುಂಭಾಗದಲ್ಲಿ 41 ಎಂಎಂ ಅಪ್ ಸೈಡ್ ಡೌನ್ ಫಾರ್ಕ್ ಮತ್ತು ಹಿಂಭಾಗದಲ್ಲಿ ರಿಯರ್ ಮೊನೊಶಾಕ್ ಪಡೆದಿದೆ. ಅಂತೆಯೇ ಮುಂಭಾಗದಲ್ಲಿ 260 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಪಡೆದಿದೆ.
ಅಂದ ಹಾಗೆ ಮೂರು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಗೊಳ್ಳಲಿರುವ ನೂತನ ಬೆನೆಲ್ಲಿ ಟೊರ್ನೆಡೊ 302 ಪ್ರಮುಖವಾಗಿಯೂ ಕೆಟಿಎಂ ಆರ್ ಸಿ 390 ಹಾಗೂ ಕವಾಸಕಿ ನಿಂಜಾ 300 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications
















































