ಹೋಂಡಾ ಸಿಎಕ್ಸ್-02 ಕಾನ್ಸೆಪ್ಟ್ ಬೈಕ್ ಭರ್ಜರಿ ಪ್ರದರ್ಶನ
2016 ಆಟೋ ಎಕ್ಸ್ ಪೋದಲ್ಲಿ ಹೋಂಡಾ ಸಿಎಕ್ಸ್-02 ಕಾನ್ಸೆಪ್ಟ್ ಬೈಕ್ ಭರ್ಜರಿ ಪ್ರದರ್ಶನ ಕಂಡಿದೆ. ಇಲ್ಲಿ ಓದುಗರು ಭಾರತಕ್ಕೆ ಹೋಂಡಾ ನವಿ ಹಾಗೂ ಆಫ್ರಿಕಾ ಟ್ವಿನ್ ಭರ್ಜರಿ ಪ್ರದರ್ಶನ ಕಂಡಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ.
ನಿಮ್ಮ ಮಾಹಿತಿಗಾಗಿ, 2014ನೇ ಆಟೋ ಎಕ್ಸ್ ಪೋದಲ್ಲಿ ಹೋಂಡಾ ಸಿಎಕ್ಸ್-01 ಅನಾವರಣಗೊಂಡಿತ್ತು. ಈಗ ಇದರ ಮುಂದುವರಿದ ಆವೃತ್ತಿಯಂತೆ ಹೋಂಡಾ ಸಿಎಕ್ಸ್-02 ಪ್ರವೇಶವಾಗಿದೆ.

ಮನೇಸರ್ ನಲ್ಲಿರುವ ಹೋಂಡಾ ಅಧ್ಯಯನ ಮತ್ತು ಅಭಿವೃದ್ಧಿ ತಂಡವು ನೂತನ ಸಿಎಕ್ಸ್-01 ಕಾನ್ಸೆಪ್ಟ್ ಬೈಕನ್ನು ರಚಿಸಿದೆ.

ದೇಶದ ನಗರ ಯುವ ಗ್ರಾಹಕರಿಗೆ ಹೆಚ್ಚು ಪ್ರಿಯವೆನಿಸಲಿರುವ ಹೋಂಡಾ ಸಿಎಕ್ಸ್-02 ಆಕ್ರಮಣಕಾರಿ ವಿನ್ಯಾಸ ಹಾಗೂ ಶಕ್ತಿಶಾಲಿ ಎಂಜಿನ್ ಪಡೆದಿದೆ.

ನೂತನ ಹೋಂಡಾ ಸಿಎಕ್ಸ್-02 ಶಕ್ತಿಶಾಲಿ ಇನ್ ಲೈನ್ ಟ್ವಿನ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಎಲ್ ಇಡಿ ಹೆಡ್ ಲ್ಯಾಂಪ್ ಜೊತೆ ಎರಡು ಎಲ್ ಇಡಿ ಡೈಟೈಮ್ ರನ್ನಿಂಗ್ ಲ್ಯಾಂಪ್ ಮತ್ತು ಎಲ್ ಇಡಿ ಟೈಲ್ ಲ್ಯಾಂಪ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

ಇನ್ನುಳಿದಂತೆ ಹೊಸತಾದ ಮಲ್ಟಿ ಸ್ಪೋಕ್ ಅಲಾಯ್ ಚಕ್ರಗಳು, ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್, ಹ್ಯಾಂಡ್ ಗಾರ್ಡ್, ಡ್ಯುಯಲ್ ಎಕ್ಸಾಸ್ಟ್, ವಿಭಜಿತ ಸೀಟು ಮುಂತಾದ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡಿಸ್ಕ್ ಬ್ರೇಕ್ ಜೊತೆಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಇದರಲ್ಲಿರಲಿದೆ.


Click it and Unblock the Notifications








