ಬಜಾಜ್‌ನಿಂದ ಮೂರು ಹೊಸ ಬೈಕ್‌ಗಳು ರಸ್ತೆಗೆ

Written By:

2015ನೇ ಸಾಲಿನಲ್ಲಿ ಎಂಟು ಹೊಸ ಮಾದರಿಗಳನ್ನು ಪರಿಚಯಿಸುವ ಮೂಲಕ ಭರ್ಜರಿ ಪುನರಾಗಮನ ಮಾಡಿಕೊಂಡಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಬಜಾಜ್ ಆಟೋ, 2016ನೇ ಸಾಲಿನಲ್ಲೂ ಮತ್ತಷ್ಟು ಮೂರು ವಾಹನಗಳನ್ನು ಪರಿಚಯಿಸುವ ಇರಾದೆ ಹೊಂದಿದೆ.

ಎಂಟ್ರಿ ಲೆವೆಲ್, ಎಕ್ಸಿಕ್ಯೂಟಿವ್ ಹಾಗೂ ಸ್ಪೋರ್ಟ್ಸ್ ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ಹೊಂದಿರುವ ಬಜಾಜ್ ಆಟೋ 2016ನೇ ಸಾಲಿನಲ್ಲೂ ತನ್ನ ಅಧಿಪತ್ಯವನ್ನು ಸ್ಥಾಪಿಸುವ ಇರಾದೆಯಲ್ಲಿದೆ.

To Follow DriveSpark On Facebook, Click The Like Button
ಬಜಾಜ್‌ನಿಂದ ಮೂರು ಹೊಸ ಬೈಕ್‌ಗಳು ರಸ್ತೆಗೆ

ಮಾರ್ಕೆಟ್ ಲೀಡರ್ ಎಂಬ ಪಟ್ಟವನ್ನು ಮುಂದುವರಿಸಿಕೊಂಡು ಹೋಗುವ ಇರಾದೆಯಲ್ಲಿರುವ ಬಜಾಜ್ ಆಟೋ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚು ಗ್ರಾಹಕ ಸ್ನೇಹಿ ಬೈಕ್ ಗಳನ್ನು ಪರಿಚಯಿಸಲಿದೆ.

ಬಜಾಜ್‌ನಿಂದ ಮೂರು ಹೊಸ ಬೈಕ್‌ಗಳು ರಸ್ತೆಗೆ

ಎಂಟ್ರಿ ಲೆವೆಲ್ ವಿಭಾಗದಲ್ಲಿ ಸಿಟಿ100 ಹಾಗೂ ಪ್ಲಾಟಿನಾಗಳಂತಹ ಮಾದರಿಗಳನ್ನು ಪರಿಚಯಿಸಿರುವ ಬಜಾಜ್ ಆಟೋ ತನ್ನ ಸಾನಿಧ್ಯವನ್ನು ಬಲಪಡಿಸಿಕೊಂಡಿತ್ತು.

ಬಜಾಜ್‌ನಿಂದ ಮೂರು ಹೊಸ ಬೈಕ್‌ಗಳು ರಸ್ತೆಗೆ

ಅದೇ ರೀತಿ ಕ್ರೀಡಾ ವಿಭಾಗದಲ್ಲಿ ಪಲ್ಸರ್ ಆರ್‌ಎಸ್200, ಪಲ್ಸರ್ ಎಎಸ್ 200 ಹಾಗೂ ಪಲ್ಸರ್ 150 ಯುವ ಪೀಳಿಗೆಗೆ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿತ್ತು. ಇನ್ನು ಕ್ರೂಸರ್ ಶೈಲಿಯ ಅವೆಂಜರ್ ಕ್ರೂಸರ್ 220, ಅವೆಂಜರ್ ಸ್ಟ್ರೀಟ್ 220 ಮತ್ತು ಅವೆಂಜರ್ 150 ಹೆಚ್ಚಿನ ಮೋಡಿ ಮಾಡಿದೆ.

ಬಜಾಜ್‌ನಿಂದ ಮೂರು ಹೊಸ ಬೈಕ್‌ಗಳು ರಸ್ತೆಗೆ

2016ನೇ ಸಾಲಿನಲ್ಲಿ ಬಜಾಜ್ ಸಂಸ್ಥೆಯು ಪಲ್ಸರ್ ಸಿಎಸ್ 400 ಅಥವಾ ಆರ್‌ಎಸ್ 400 ಕ್ರೀಡಾ ಬೈಕ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಬಜಾಜ್‌ನಿಂದ ಮೂರು ಹೊಸ ಬೈಕ್‌ಗಳು ರಸ್ತೆಗೆ

ಅಂತೆಯೇ ಎಂಟ್ರಿ ಲೆವೆಲ್ ಪ್ರಯಾಣಿಕ ವಿಭಾಗದಲ್ಲಿ ಹೆಚ್ಚು ಶಕ್ತಿಶಾಲಿ ಸಿಟಿ100 ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

English summary
Bajaj Announces Leadership In Entry And Sport Motorcycle Segments
Story first published: Monday, January 11, 2016, 12:43 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark