ರಾಯಲ್ ಎನ್‌ಫೀಲ್ಡ್‌ಗೆ ಸೆಡ್ಡು ಹೊಡೆಯಲು ಬಜಾಜ್ ರಣತಂತ್ರ
ದೇಶದ ನಂ.1 ಕ್ರೀಡಾ ಬೈಕ್ ತಯಾರಿಕ ಸಂಸ್ಥೆ ಬಜಾಜ್ ಆಟೋ, ಕ್ಲಾಸಿಕ್ ಬುಲೆಟ್ ತಯಾರಕ ರಾಯಲ್ ಎನ್ ಫೀಲ್ಡ್‌ಗೆ ಸೆಡ್ಡು ಹೊಡೆಯಲು ಸಜ್ಜಾಗುತ್ತಿದೆ. ಇದರೊಂದಿಗೆ 350ರಿಂದ 600 ಸಿಸಿ ವಿಭಾಗದಲ್ಲಿ ಎನ್ ಫೀಲ್ಡ್‌ಗೆ ಸದ್ಯದಲ್ಲೇ ಬಿಸಿ ಮುಟ್ಟಲಿದೆ.
ಬಜಾಜ್ ಮತ್ತು ಎನ್ ಫೀಲ್ಡ್ ದೇಶದ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನಮಾನ ಕಾಪಾಡಿಕೊಂಡಿದೆ. ಈಗ ಮತಷ್ಟು ಸ್ಪರ್ಧಾತ್ಮಕ ಪೈಪೋಟಿಗೆ ವೇದಿಕೆ ಸಿದ್ಧಗೊಳ್ಳಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್, ಖಂಡಿತವಾಗಿಯೂ ಮಾರುಕಟ್ಟೆಯಲ್ಲಿ ಎನ್ ಫೀಲ್ಡ್ ಗೆ ಸ್ಪರ್ಧೆ ನೀಡುವಷ್ಟು ಸಮರ್ಥರಾಗಿದ್ದೇವೆ ಎಂದಿದ್ದಾರೆ.

2015ನೇ ಆರ್ಥಿಕ ಸಾಲಿಗೆ ಹೋಲಿಸಿದಾಗ ಶೇಕಡಾ 52ರಷ್ಟು ಏರುಗತಿ ಸಾಧಿಸಿರುವ ರಾಯಲ್ ಎನ್ ಫೀಲ್ಡ್ 2016 ಆರ್ಥಿಕ ಸಾಲಿನಲ್ಲಿ ಆರು ಲಕ್ಷದಷ್ಟು ಮಾರಾಟವನ್ನು ಕಾಪಾಡಿಕೊಂಡಿತ್ತು. ಇದು ಗರಿಷ್ಠ ಸಾಮರ್ಥ್ಯದ ಬೈಕ್ ಗಳಿಗೆ ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸುತ್ತಿದೆ.

ಅಷ್ಟೇ ಯಾಕೆ ರಾಯಲ್ ಎನ್ ಫೀಲ್ಡ್ ಮಗದೊಂದು ಘಟಕವನ್ನು ಸ್ಥಾಪಿಸುವ ಯೋಜನೆಯಲ್ಲಿದ್ದು, 2018ರ ವೇಳೆಯಾಗುವಾಗ ವಾರ್ಷಿಕವಾಗಿ ಒಂಬತ್ತು ಲಕ್ಷ ಯುನಿಟ್ ಗಳನ್ನು ಉತ್ಪಾದಿಸುವ ಇರಾದೆ ಹೊಂದಿದೆ.

ಇನ್ನೊಂದೆಡೆ ಬಜಾಜ್ ಆಟೋ 2014 ಆಟೋ ಎಕ್ಸ್ ಪೋದಲ್ಲಿ ಪಲ್ಸರ್ ಸಿಎಸ್400 ಮಾದರಿಯನ್ನು ಪರಿಚಯಿಸಿತ್ತು. ಇದು ಕೂಡಾ ಮುಂಬರುವ ದಿನಗಳಲ್ಲಿ ಎನ್ ಫೀಲ್ಡ್ ಗೆ ಸೆಡ್ಡು ಹೊಡೆಯಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬಜಾಜ್ ಅವೆಂಜರ್ ಕ್ರೂಸರ್ ಶ್ರೇಣಿಯ ಬೈಕ್ ಗಳು ಮಾರಾಟದಲ್ಲಿದೆ. ಭವಿಷ್ಯದಲ್ಲೇ ಹೆಚ್ಚಿನ ಇಂಧನ ಸಾಮರ್ಥ್ಯದ ಅವೆಂಜರ್ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಇವೆಲ್ಲವೂ ಸ್ಪರ್ಧಾತ್ಮಕ ಮಾರುಕಟ್ಟೆಗೆ ವೇದಿಕೆಯಾಗಲಿದೆ.


Click it and Unblock the Notifications