ಹೊಸ ಬಣ್ಣಗಳೊಂದಿಗೆ ಕಂಗೊಳಿಸುತ್ತಿರುವ ಬಜಾಜ್ ಅವೆಂಜರ್
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಬಜಾಜ್ ಆಟೋ, ಕಳೆದ ವರ್ಷ ಮೂರು ಅವೆಂಜರ್ ಶ್ರೇಣಿಯ ಬೈಕ್ ಗಳನ್ನು ಬಿಡುಗಡೆಗೊಳಿಸಿತ್ತು. ಅವುಗಳೆಂದರೆ ಬಜಾಜ್ ಅವೆಂಜರ್ 220 ಕ್ರೂಸ್, ಅವೆಂಜರ್ 220 ಸ್ಟ್ರೀಟ್ ಮತ್ತು ಅವೆಂಜರ್ 150 ಸ್ಟ್ರೀಟ್.
ಕ್ರೂಸರ್ ಶೈಲಿಗೆ ಹೊಸ ಆಯಾಮ ತುಂಬಿರುವ ಅವೆಂಜರ್ ಶ್ರೇಣಿಯ ಬೈಕ್ ಗಳನ್ನು ಮತ್ತಷ್ಟು ರಂಗೇರಿಸಲು ಹೊರಟಿರುವ ಬಜಾಜ್ ಸಂಸ್ಥೆಯೀಗ ಹೊಸ ಎರಡು ಬಣ್ಣಗಳ ಆಯ್ಕೆಗಳನ್ನು ಸೇರ್ಪಡೆಗೊಳಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಿಡ್ ನೈಟ್ ಬ್ಲೂ ಬಣ್ಣದ ಹೊರತಾಗಿ ನೂತನ ಅವೆಂಜರ್ ಸ್ಟ್ರೀಟ್ 150, ಕಾಸ್ಮಿಕ್ ರೆಡ್ ಬಣ್ಣದ ಆಯ್ಕೆಯಲ್ಲೂ ಲಭ್ಯವಾಗಲಿದೆ.

ಅದೇ ರೀತಿ ಮ್ಯಾಟ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿರುವ ಬಜಾಜ್ ಅವೆಂಜರ್ 220 ಸ್ಟ್ರೀಟ್, ಮ್ಯಾಟ್ ವೈಲ್ಡ್ ಗ್ರೀನ್ ಆಯ್ಕೆಯಲ್ಲೂ ಲಭ್ಯವಾಗಲಿದೆ.

ವಿಶ್ವ ದರ್ಜೆಯ ಶೈಲಿ, ಆರಾಮದಾಯಕ ಜೊತೆಗೆ ಸಿಟಿ ರೈಡಿಂಗ್ ಗೂ ಬಜಾಜ್ ಅವೆಂಜರ್ ಹೆಚ್ಚು ಸೂಕ್ತವೆನಿಸಿದೆ. ಈ ವಿಶಿಷ್ಟ ಬಣ್ಣಗಳ ಸೇರ್ಪಡೆಯು ವಾಹನ ಪ್ರೇಮಿಗಳನ್ನು ಹೆಚ್ಚೆಚ್ಚು ಆಕರ್ಷಿಸುವ ನಂಬಿಕೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ.

ನೂತನ ಮ್ಯಾಟ್ ವೈಲ್ಡ್ ಗ್ರೀನ್ ಅವೆಂಜರ್ 220 ಸ್ಟ್ರೀಟ್ ಮತ್ತು ಹೊಸತಾದ ಕಾಸ್ಮಿಕ್ ರೆಡ್ ಅವೆಂಜರ್ 150 ಆವೃತ್ತಿಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 85,497 ಮತ್ತು 75,500 ರು.ಗಳಷ್ಟು ದುಬಾರಿಯೆನಿಸಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಇವೆರಡು ಬೈಕ್ ಗಳು 150 ಹಾಗೂ 200 ಸಿಸಿ ಡಿಟಿಎಸ್ ಐ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುತ್ತದೆ.


Click it and Unblock the Notifications








