ದೇಶದ ಅಗ್ಗದ ಬೈಕ್ ಬಜಾಜ್ ಸಿಟಿ 100ಬಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?
ದ್ವಿಚಕ್ರ ವಾಹನಗಳಿಗೆ ಅತಿ ಹೆಚ್ಚು ಬೇಡಿಕೆಯಿರುವ ಭಾರತದಲ್ಲಿ ಪ್ರಯಾಣಿಕ ಬೈಕ್ ಗಳು ಅತಿ ಹೆಚ್ಚು ಮಾರಾಟವನ್ನು ಕಾಯ್ದುಕೊಂಡಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ದೇಶದ ಮುಂಚೂಣಿಯ ಬಜಾಜ್ ಆಟೋ ಸಂಸ್ಥೆಯು ಅತಿ ನೂತನ ಸಿಟಿ 100ಬಿ ಬೈಕ್ ಬಿಡುಗಡೆಗೊಳಿಸಿದೆ.
ಇದರೊಂದಿಗೆ ದೇಶದ ಅತಿ ಅಗ್ಗದ ಬೈಕೆಂಬ ಖ್ಯಾತಿಗೆ ಸಿಟಿ100ಬಿ ಪಾತ್ರವಾಗಿದೆ. ಇದರ ಪುಣೆ ಎಕ್ಸ್ ಶೋ ರೂಂ ಬೆಲೆ ಕೇವಲ 31,888 ರು.ಗಳಾಗಿರಲಿದೆ.

ಎಂಜಿನ್ ತಾಂತ್ರಿಕತೆ
- 97.2 ಸಿಸಿ, ಸಿಂಗಲ್ ಸಿಲಿಂಡರ್,
- ಏರ್ ಕೂಲ್ಡ್ ಎಂಜಿನ್,
- 8.08 ಅಶ್ವಶಕ್ತಿ,
- 8.04 ಎನ್‌ಎಂ ತಿರುಗುಬಲ
ಗೇರ್ ಬಾಕ್ಸ್: 4 ಸ್ಪೀಡ್
ಮೈಲೇಜ್: ಪ್ರತಿ ಲೀಟರ್‌ಗೆ 89.5 ಕೀ.ಮೀ.

ಸಾಮಾನ್ಯ ಸಿಟಿ 100 ಮಾದರಿಗಳಿಗೆ ಹೋಲಿಸಿದಾಗ ನೂತನ ಸಿಟಿ100ಬಿ ವೃತ್ತಕಾರಾದ ಹೆಡ್ ಲೈಟ್, ಸ್ಟೀಲ್ ಗ್ರಾಬ್ ರೈಲ್ ಪಡೆಯಲಿದೆ. ಇನ್ನುಳಿದಂತೆ ಸಿಟಿ 100ಗೆ ಸಮಾನವಾದ ಬಣ್ಣದ ಆಯ್ಕೆಗಳು, ಕಪ್ಪು ವರ್ಣದ ಎಕ್ಸಾಸ್ಟ್ ಕೊಳವೆ, ಬೆಳ್ಳಿ ಬಣ್ಣದ ಎಂಜಿನ್ ಟ್ಯಾಂಕ್, ಉದ್ದವಾದ ಸೀಟು, ಬಜಾಜ್ ಲೊಗೊ ಸ್ಟಿಕರ್ ಮುಂತಾದ ವೈಶಿಷ್ಟ್ಯಗಳು ಲಭ್ಯವಾಗಲಿದೆ.


Click it and Unblock the Notifications








